ಸತತ ಅಧ್ಯಯನದಿಂದ ಸಾಧನೆ ಸಾಧ್ಯ

4Ckd1
Published on

ಚಿಕ್ಕೋಡಿ: ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಅಧ್ಯಯನ ಮಾಡಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಸದಲಗಾ ಪ್ರೌಢಶಾಲೆ ಶಿಕ್ಷಕಿ ವಿ.ಪಿ.ಚೌಗುಲೆ ಹೇಳಿದರು.

ತಾಲೂಕಿನ ಸದಲಗಾ ಪಟ್ಟಣದ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ಜೀವನದಲ್ಲಿ ಶಿಸ್ತು, ಸಂಯಮ ಅಳವಡಿಸಿಕೊಂಡು ಗುರಿ ಸಾಧಿಸಬೇಕು ಎಂದರು.

ಸಂಸ್ಥೆ ಕಾರ್ಯದರ್ಶಿ ಡಾ.ರಾವಸಾಹೇಬ ಪಾಟೀಲ ಮಾತನಾಡಿದರು.

ಸಂಸ್ಥೆ ಅಧ್ಯಕ್ಷ ಪ್ರಕಾಶ ಪಾಟೀಲ, ಎ.ಎಸ್.ಉಗಾರೆ, ಡಾ.ಜೆ.ಆರ್.ಚಿಂಚಣಿಕರ, ಆರ್.ಎ.ಮಾನೆ, ಎಸ್.ಎ.ಲಡಗಿ, ಬಿ.ಸಿ.ಪಾಟೀಲ, ಎಸ್.ಎಸ್.ಕೋರೆ, ಸಿದ್ದಾಂತ ಬನಜವಾಡ, ಪೂಜಾ ಬೆಳಸ್ಕರ್, ಲಗಮಣ್ಣ ಗಂಗಾಯಿ, ಉಮಾಕಾಂತ ಜಂಗಮ, ಸ್ವಾತಿ ಬಾದುರವಾಡೆ, ಚೇತನಾ ಮಾಲಗತ್ತಿ, ಪದ್ಮಶ್ರೀ ಗಣೆ, ಧೀರಜ ಸಾಳುಂಕೆ, ಪರಶುರಾಮ ಐವಾಳೆ, ಮೇಹತಾಬ ಜಮಾದಾರ, ತನವಿ ತಿನೆಕರ, ಆದಿತಿ ಶಿತೊಳೆ, ಕೀರ್ತಿ ಕೋಳಿ, ದಿಶಾ ವಾಲಿ, ಯಲ್ಲವ್ವ ಹಮ್ಮನ್ನವರ, ಸಂಭಾಜಿ ಶಿಂಧೆ, ಕುಮಾರ ಮಾನೆ, ರಾಹುಲ ಭಜಂತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net