

ಹಂದಿಗುಂದ: ಗ್ರಾಮಗಳ ಅಭಿವೃದ್ಧಿಯಿಂದ ದೇಶವು ಅಭಿವೃದ್ಧಿ ಸಾಧಿಸುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನ ಸಕಾಲದಲ್ಲಿ ಸದ್ಬಳಕೆ ಆಗಬೇಕು. ಗ್ರಾಮದ ಚರಂಡಿ ಕಾಮಗಾರಿ ಸಕಾಲದಲ್ಲಿ ಪೂರ್ಣಗೊಳಿಸಬೇಕು ಎಂದು ಶಾಸಕ ಮಹೇಂದ್ರ ತಮ್ಮಣ್ಣವರ ಸೂಚಿಸಿದರು.
ಸಮೀಪದ ಪಾಲಬಾವಿ ಗ್ರಾಮದಲ್ಲಿ ರಾಯಬಾಗದ ಪಂಚಾಯತ್ ರಾಜ್ಯ ಇಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ ೩೭ ಲಕ್ಷ ರೂ. ವೆಚ್ಚದಲ್ಲಿ ಬೂದು ನೀರು ನಿರ್ವಹಣೆ ಚರಂಡಿ ನಿರ್ಮಾಣ ಕಾಮಗಾರಿಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ನಂತರ ಭೂದಾನಿಗಳಾದ ತಾತಾಸಾಬ ಪಾಟೀಲರಿಗೆ ಶಾಸಕರು ಸನ್ಮಾನಿಸಿದರು.
ಗ್ರಾಪಂ ಸದಸ್ಯ ಪರಪ್ಪ ಕರೋಶಿ, ಬಸಪ್ಪ ತೇಗೂರ, ಶಿರಿಯಾಳ ಮಾದರ, ಗುರುನಾಥ ಜುಂಜರವಾಡ, ಪಿಡಿಒ ಶ್ರೀಕಾಂತ ಪಾಟೀಲ, ಕಾಂಗ್ರೆಸ್ ಪಕ್ಷದ ಕುಡಚಿ ಬ್ಲಾಕ್ ಅಧ್ಯಕ್ಷ ಪ್ರದೀಪ ಹಾಲ್ಗುಣಿ, ಶಂಭುಲಿಂಗ ಪಾಟೀಲ, ರಾಯಬಾಗ ತಾಲೂಕು ಸೇವಾದಳದ ಅಧ್ಯಕ್ಷ ಮಹಾಲಿಂಗ ಜನವಾಡ, ಸಾಗರ ಕುರುಬೆಟ್ಟಿ, ಅಸ್ಲಾಂ ಬಿರಾದಾರ, ಗಿರಪ್ಪ ಬಳಗಾರ, ಕಿರಣ ತೇಗೂರ, ಷಣ್ಮುಖ ಕಾಡಶೆಟ್ಟಿ ಇತರರು ಇದ್ದರು.