

ಚಿತ್ರದುರ್ಗ: ಸಕಾಲ ಅರ್ಜಿಗಳ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕೆಂದು ಸಕಾಲ ಮಿಷನ್ ಆಡಳಿತಾಧಿಕಾರಿ ಸೀಮಾ ಬಿ ನಾಯಕ್ ಅಧಿಕಾರಿ ಗಳಿಗೆ ಸೂಚಿಸಿದರು. ನಗರದಲ್ಲಿ ಬುಧವಾರ ಡಿಸಿ ಕಚೇರಿ ಸಹಿತ ನಾನಾ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿ ಸಕಾಲ ಸೇವಾ ಅನುಷ್ಠಾನದ ಪರಿಶೀಲನೆ ನಡೆಸಿದರು.
ಸೇವಾ ವಿಲೇವಾರಿಯಲ್ಲಿ ಗುಣಾತ್ಮಕ ಸುಧಾರಣೆಯ ಮೂಲಕ ಜನರಿಗೆ ಸೇವೆಗಳನ್ನು ಸಮರ್ಪಕವಾಗಿ ತಲುಪಿಸಲು ಮೊದಲ ಹಂತದಲ್ಲಿ ನವೆಂಬರ್ 30 ರಿಂದ ಡಿಸೆಂಬರ್ 5ರ ತನಕ ಸಕಾಲ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಯೋಜನೆಯ ಕುರಿತು ಹೆಚ್ಚಿನ ಅರಿವು ಮೂಡಿಸಲಾಗುವುದು ಎಂದರು.
ಚಿತ್ರದುರ್ಗ ತಹಸೀಲ್ದಾರ್ ಕಚೇರಿಯಲ್ಲಿ,ಹೊಳಲ್ಕೆರೆ,ಚಿತ್ರದುರ್ಗ ತಾಲೂಕು ಕಚೇರಿ ಗಳಲ್ಲಿ ಬಾಕಿ ಉಳಿದಿರುವ ಅರ್ಜಿಗಳ ಬಾಕಿ ವಿಲೇವಾರಿ ಮಾಡಬೇಕು. ವಿವಿಧ ಸೇವೆಗಳ ಅರ್ಜಿಗಳ ತಿರಸ್ಕೃತ ಪ್ರಮಾಣ ಶೇ.5ಕ್ಕಿಂತ ಕಡಿ ಮೆ ಮಾಡಬೇಕು. ಸಕಾರಣವಿಲ್ಲದೆ ಅರ್ಜಿ ಗಳನ್ನು ತಿರಸ್ಕರಿಸಬಾರದೆಂದ ಅವರು,ಸ್ಮಾರ್ಟ್ ಕಾರ್ಡ್ ತ್ವರಿತ ವಿತರಣೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್.ಹೆಗಡೆ ಅವರಿಗೆ ಸೂಚಿ ಸಿದರು.
ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕ ಸತೀಶ್‌ರೆಡ್ಡಿ, ಪೌರಾಯುಕ್ತ ಹನುಮಂತರಾಜು,ಸಕಾಲ ಮತ್ತು ಸೇವಾಸಿಂಧು ಯೋಜನಾ ವ್ಯವಸ್ಥಾಪಕ ಸಮರ್ಥ್,ಸಕಾಲ ಕನ್ಸಲ್‌ಟೆಂಟ್ ಆದರ್ಶ,ಆಧಾರ್ ಕನ್ಸಲ್‌ಟೆಂಟ್ ರಂಗನಾಥ್,ಭೂಮಿ ಕನ್ಸಲ್‌ಟೆಂಟ್ ಶ್ರೀಕಾಂತ್ ಮತ್ತಿತರ ಇಲಾಖೆ ಅಧಿಕಾರಿಗಳಿದ್ದರು.