ಸಕಲೇಶಪುರ ತಾಲೂಕು ಕೊಲ್ಲಹಳ್ಳಿಯಲ್ಲಿ ಕಾಡಾನೆ ತುಳಿತಕ್ಕೆ ಬಲಿಯಾದ ಅರ್ಚಕ

IMG-20200901-WA0011.jpg
Published on

ಸಕಲೇಶಪುರ:ತಾಲೂಕಿನ ಕೊಲ್ಲಹಳ್ಳಿ ಗ್ರಾಮದಲ್ಲಿ ಕಾಡಾನೆ ತುಳಿದು ಆರ್ಚಕರೊಬ್ಬರು ಮೃತಪಟ್ಟಿದ್ದಾರೆ. ‌

ಪಟ್ಟಣದ ಗುಹೆಕಲ್ಲಮ್ಮ ದೇವಸ್ಥಾನದ ಸಹಾಯಕ ಆರ್ಚಕ ಆಸ್ತಿಕ್ ಭಟ್ (48) ಮೃತರು.

ಪಟ್ಟಣ ಹೊರವಲಯದ ಸಂಚಾರಿ ಬಸವಣ್ಣ ದೇವಸ್ಥಾನ ಸಮೀಪದ ತಮ್ಮ ಮನೆಯಿಂದ ದೇವಸ್ಥಾನ ಕ್ಕೆ ನೀರು ತರಲು ಹೋಗಿದ್ದ ವೇಳೆ ಬಾವಿ ಸಮೀಪವೆ ಇದ್ದ ಕಾಡಾನೆ ತುಳಿದು ಸಾಯಿಸಿದೆ.

ಸ್ಥಳಕ್ಕೆ ಅರಣ್ಯ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಗೆ ಸಾಗಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net