

ತಿ.ನರಸೀಪುರ: ದಳವಾಯಿ ಅಗ್ರಹಾರದ ವಿಶ್ವಚೇತನ ಸಂಸ್ಕೃತ ಪಾಠಶಾಲೆಯಲ್ಲಿ ಅಡುಗೆ ಮಣಿ ಗ್ರೂಪ್ಸ್ ಸಹಯೋಗದಲ್ಲಿ ಮಂಗಳವಾರ 77ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಸ್ವಾತಂತ್ರ್ಯಹೋರಾಟಗಾರರ ತ್ಯಾಗ, ಬಲಿದಾನಗಳನ್ನು ವಿವರಿಸಲಾಯಿತು. ಸಮಾಜ ಚಿಂತಕ ಕೃಷ್ಣಮೂರ್ತಿ ಬೇವಿನಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಸ್ವಾತಂತ್ರ್ಯೋತ್ಸವ ಪ್ರಯುಕ್ತ ಉಪಾಹಾರ ವಿತರಣೆ ಮಾಡಲಾಯಿತು.
ಅಡುಗೆ ಮಣಿ ಗ್ರೂಪ್ಸ್‌ನ ಪಿ.ವಿ.ವೈದ್ಯೇಶ್ವರ ಅಯ್ಯರ್, ಮುಖ್ಯೋಪಾಧ್ಯಾಯ ಡಾ.ಗುರುರಾಜರಾವ್, ಪಿ.ವಿ.ಶ್ರುತಿ ಅಯ್ಯರ್, ವಿಜಯಕುಮಾರ್, ಕುಮಾರ್, ಶಿಕ್ಷಕಿಯರಾದ ಶಶಿಕಲಾ, ಉಮಾ ಇತರರು ಇದ್ದರು.