ಸಂಶೆಟ್ಟಿಹಳ್ಳಿಯಲ್ಲಿ ಎನ್‌ಎಸ್‌ಎಸ್ ಶಿಬಿರ

10blrp2
Published on

ಹಾಸನ: ಉದಾತ್ತವಾದ ಚಿಂತನೆಯನ್ನು ಮೈಗೂಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಎನ್‌ಎಸ್‌ಎಸ್ ಶಿಬಿರ ಸಹಕಾರಿಯಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ ಹೇಳಿದರು.


ಬೇಲೂರು ಪಟ್ಟಣದ ವಿವೇಕಾನಂದ ಪದವಿ ಪೂರ್ವ ಕಾಲೇಜಿನಿಂದ ತಾಲೂಕಿನ ಸಂಶೆಟ್ಟಿಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರ ಉದ್ಘಾಟಿಸಿ ಮಾತನಾಡಿದರು.


ಕುವೆಂಪು ಅವರ ಜಲಗಾರ ನಾಟಕ ಇಂತಹ ಶಿಬಿರಕ್ಕೆ ಪೂರಕವಾಗಿ ವೈಚಾರಿಕತೆಯಿಂದ ರಚನೆಯಾಗಿರುವ ನಾಟಕವಾಗಿದೆ. ನಾವು ಮಾಡುವ ಕಾಯಕದಲ್ಲೆ ದೇವರನ್ನು ಕಾಣಬಹುದಾಗಿದೆ. ಶಿಬಿರದಲ್ಲಿನ ಚಟುವಟಿಕೆ ಮುಂದಿನ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಭದ್ರ ಬುನಾದಿಯಾಗಲಿದೆ. ಶಿಸ್ತು ಪರಿಪಾಲನೆ ಅತಿಮುಖ್ಯ. ಗುರು ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.


ಇಸಿಒ ಶಿವಪ್ಪ, ವಿವೇಕಾನಂದ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ಜಿ.ಶಿವಕುಮಾರ್, ಉಪನ್ಯಾಸಕ ಪ್ರಕಾಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ನವೀನ್‌ಕುಮಾರ್, ಶಿಬಿರಾಧಿಕಾರಿ ಸಿ.ಪಿ.ವಿಜಯ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net