ಸಂವಿಧಾನದ ಹಕ್ಕುಗಳು ಸಮರ್ಪಕವಾಗಿ ಸಿಗುತ್ತಿಲ್ಲ

22 SARAG 01
ಸರಗೂರು ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಎಸ್.ಉಮೇಶ್ ಉದ್ಘಾಟಿಸಿದರು. ನಾಗೇಂದ್ರ, ಡಾ.ಬಿ.ಸಿ.ಮಲ್ಲೇಶ್, ಎನ್.ಕುಮಾರ ಇತರರು ಇದ್ದರು.
Published on

ಸರಗೂರು: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂವಿಧಾನದ ಹಕ್ಕುಗಳು ತಲುಪಿದಾಗ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಉಪಾಧ್ಯಕ್ಷ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಸ್.ಉಮೇಶ್ ತಿಳಿಸಿದರು.

ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಸರಗೂರು ತಾಲೂಕು ಸಮಿತಿಯಿಂದ ಶನಿವಾರ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನಿಗೆ ಸಂವಿಧಾನ ನೀಡಲಾದ ಹಕ್ಕುಗಳು ಇಂದಿಗೂ ಸಮರ್ಪಕವಾಗಿ ಸಿಗದಿರುವುದು ಬೇಸರದ ಸಂಗತಿ. ಮೂಲಭೂತ ಹಕ್ಕುಗಳು ಪ್ರತಿಯೊಬ್ಬರಿಗೂ ಸಿಗಬೇಕು. ಇದರಿಂದ ಸಮಾಜ ಸುಧಾರಣೆ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಅಕ್ಷರಸ್ಥರು ಹಕ್ಕುಗಳನ್ನು ಅರಿಯದ ಜನರಿಗೆ ತಿಳಿಹೇಳಿದಾಗ ಮಾತ್ರ ವಂಚಿತರು ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ. ಮಹಿಳೆ ಹಾಗೂ ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾನೂನುಗಳಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾಜ ಸೇವಕ ಎ.ಎಂ.ಬಾಬುನಾಯಕ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನಿಟ್ಟುಕೊಂಡು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ದುಶ್ಚಟಗಳಿಗೆ ದಾಸರಾಗಬಾರದು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಜಶೀಲಾ, ಸಮಿತಿಯ ಚಾಮರಾಜನಗರ ಜಿಲ್ಲಾಧ್ಯಕ್ಷ ನಾಗೇಂದ್ರ, ಪ್ರಾಂಶುಪಾಲ ಡಾ.ಬಿ.ಸಿ.ಮಲ್ಲೇಶ್, ಅಧ್ಯಕ್ಷ ಎನ್.ಕುಮಾರ, ಕಾಲೇಜಿನ ಸಿಬ್ಬಂದಿ ಡಾ.ದೀಪಾ, ಡಾ.ವೃಂದಾ, ಪದಾಧಿಕಾರಿಗಳಾದ ಸಾಗರೆ ರವಿ, ಸುಪ್ರೀತ್‌ಕುಮಾರ್, ಎನ್.ಕೆ.ಲಕ್ಷ್ಮೀಕಾಂತ, ಎಂ.ಮನೋಜ್, ಡಾ.ಯೋಗೀತಾ, ಭ್ರಷ್ಟಾಚಾರ ವಿರೋಧಿ ಸಂಘದ ಸದಸ್ಯ ನಾಗರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net