

ಸಂಬರಗಿ: ಇಲ್ಲಿನ ಗ್ರಾಮ ಪಂಚಾಯಿತಿ ಕಟ್ಟಡದ ಮೇಲೆ ಹರಿದ ತ್ರಿವರ್ಣ ಧ್ವಜ ಹಾರಾಡಿದರೂ ಸಂಬಂಧಿಸಿದ ಅಧಿಕಾರಿ ಎಚ್ಚೆತ್ತುಕೊಳ್ಳದೇ ಇರುವದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆಯಿತು. ಈ ಸಂಬಂಧ ಗ್ರಾಪಂ ಪಿಡಿಒಗೆ ನೋಟಿಸ್ ಜಾರಿ ಮಾಡಲಾಗಿದೆ.
ರಾಷ್ಟ್ರದ್ವಜ ನಮ್ಮ ದೇಶದ ಗೌರವದ ಸಂಕೇತ. ದೇಶದ ಜನರಲ್ಲಿ ರಾಷ್ಟ್ರದ್ವಜದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿ ಕಚೇರಿ ಮೇಲೆ ರಾಷ್ಟ್ರದ್ವಜ ಹಾರಿಸುವಂತೆ ಆದೇಶ ಮಾಡಿದೆ. ಆದರೆ, ಇಲ್ಲಿನ ಗ್ರಾಪಂ ಮೇಲೆ ಹಾರಿಸುವ ರಾಷ್ಟ್ರದ್ವಜ ತೀರ ಹಳೆಯದಾಗಿದೆ. ಜತೆಗೆ ಅದರಲ್ಲಿರುವ ಬಣ್ಣವು ಮಾಸಿ ಹೋಗಿದೆ. ಇಷ್ಟಾದರೂ ಗ್ರಾಪಂ ಕ್ರಮ ಧ್ವಜ ಬದಲಿಸುವ ಗೋಜಿಗೆ ಹೋಗಿಲ್ಲ ಎಂದು ಸಾರ್ವಜನಿಕರು ಅಸಮಾಧನ ವ್ಯಕ್ತಪಡಿಸಿದರು.
ರಾಷ್ಟ್ರದ್ವಜಕ್ಕೆ ಅವಮಾನ ಎಸಗಿರುವ ಕುರಿತು ಗಮನಕ್ಕೆ ಬಂದ ಕೂಡಲೇ ಪಿಡಿಒ ದರಿಯಪ್ಪ ತಗಲಿ ಅವರಿಗೆ ನೋಟಿಸ್ ಜಾರಿ ಮಾಡಿದ್ದೇನೆ. ನೋಟಿಸ್‌ಗೆ ಉತ್ತರ ಬಂದ ಬಳಿಕ ಪರಿಶೀಲಿಸಿ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು. | ಶಿವಾನಂದ ಕಲ್ಲಾಪುರ ತಾಪಂ ಯುವ ಕಾರ್ಯನಿರ್ವಾಹಕ, ಅಥಣಿ