ಸಂತೋಷ್‌ಗೆ ಅದ್ದೂರಿ ಸ್ವಾಗತ

16arsph2ep
Published on
  • ಹಾಸನ : ಬೆಂಗಳೂರಿನ ಜೆ.ಪಿ.ಭವನದಲ್ಲಿ ಜೆಡಿಎಸ್ ಸೇರ್ಪಡೆಗೊಂಡ ಬಳಿಕ ಶನಿವಾರ ರಾತ್ರಿ ಅರಸೀಕೆರೆಗೆ ಆಗಮಿಸಿದ ಎನ್.ಆರ್.ಸಂತೋಷ್‌ಗೆ ಅದ್ದೂರಿ ಸ್ವಾಗತ ದೊರೆಯಿತು.
  • ಗಂಡಸಿಹೋಬಳಿ ಚಿಂದೇನಹಳ್ಳಿ ಗಡಿ ಬಳಿಯಿಂದ ಭಾರಿ ಸಂಖ್ಯೆಯ ಅಭಿಮಾನಿಗಳು ಕಾರಿನಲ್ಲಿ ತೆರಳಿ ಬರಮಾಡಿಕೊಂಡರು. ಗಂಡಸಿ ಹ್ಯಾಂಡ್‌ಪೋಸ್ಟ್, ಬಾಗೇಶಪುರ, ಹಾರನಹಳ್ಳಿ, ಗುತ್ತಿನಕೆರೆ, ತಳಲೂರು ಗ್ರಾಮಗಳಲ್ಲಿಯೂ ನಿರೀಕ್ಷೆಗೂ ಮೀರಿದ ಜನಸ್ಪಂದನೆ ವ್ಯಕ್ತವಾಯಿತು.
  • ಬಸವೇಶ್ವರ ವೃತ್ತದಲ್ಲಿ ತೆರೆದ ವಾಹನದಲ್ಲಿ ಮಾತನಾಡಿದ ಎನ್.ಆರ್. ಸಂತೋಷ್, ಕಳೆದ ಮೂರು ವರ್ಷದಿಂದ ಕ್ಷೇತ್ರದಲ್ಲಿ ಸಂಘಟನೆ ಮಾಡಿದ್ದ ನನಗೆ ಅನ್ಯಾಯ ಮಾಡಲಾಯಿತು. ಆದರೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಸೇರಿ ಪಕ್ಷದ ಎಲ್ಲ ನಾಯಕರು ಆಶೀರ್ವಾದ ಮಾಡಿದ್ದು, ಎಂದಿಗೂ ಮರೆಯಲು ಸಾಧ್ಯವಿಲ್ಲ. ಸ್ವಾಭಿಮಾನದ ಹೆಸರಿನಲ್ಲಿ ಚುನಾವಣೆಯಲ್ಲಿ ಹೋರಾಟ ನಡೆಸೋಣ ಎಂದು ಕರೆ ನೀಡಿದರು.
  • ಪುರಸಭಾ ಮಾಜಿ ಅಧ್ಯಕ್ಷ ಪಿ.ದೇವಕುಮಾರ್, ವಕ್ಫ್‌ಬೋರ್ಡ್ ಜಿಲ್ಲಾಧ್ಯಕ್ಷ ಸಯ್ಯದ್ ಸಿಕಂದರ್, ಮುಖಂಡರಾದ ಹರ್ಷವರ್ಧನ್, ನಗರಸಭೆ ಸದಸ್ಯ ಝಾಕೀರ್ ಸೇರಿ ಹಲವರು ಹಾಜರಿದ್ದರು. ಜೆಸಿಬಿಯಲ್ಲಿ ಹೂ ಹಾಕಿ ಕಾರ್ಯಕರ್ತರು ಹಾಗೂ ಮುಖಂಡರು ಸಂಭ್ರಮಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net