ಸಂತೆಮರೂರು ಗ್ರಾಮದಲ್ಲಿ ಮೇಯ್ಯಲು ಕಟ್ಟಿದ್ದ ಆಡು ಕೊಂದ ಚಿರತೆ

IMG-20200422-WA0039.jpg
Published on

ಅರಕಲಗೂಡು: ತಾಲೂಕಿನ ಸಂತೆಮರೂರು ಗ್ರಾಮದಲ್ಲಿ ಜಮೀನು ಬಳಿ ಮೇಯ್ಯಲು ಕಟ್ಟಿದ್ದ ಆಡು ಮೇಲೆ ಚಿರತೆ ದಾಳಿ ನಡೆಸಿ ಬುಧವಾರ ಮಧ್ಯಾಹ್ನ ಕೊಂದು ಹಾಕಿದೆ.


ಗ್ರಾಮದ ರಂಗಯ್ಯ ಎಂಬುವರ ಮಗ ಹರೀಶ್ ಎಂಬುವರು ಮಧ್ಯಾಹ್ನ ಜಮೀನು ಬಳಿ ಆಡು ಕಟ್ಟಿ ಹಾಕಿ ಊಟ ಮಾಡಲು ಮನೆಗೆ ಬಂದಿದ್ದಾರೆ. ಈ ವೇಳೆ ಪಕ್ಕದ ಪೊದೆಯೊಳಗೆ ಅವಿತಿದ್ದ ಚಿರತೆ ಆಡು ಮೇಲೆರಗಿ ಸಾಯಿಸಿದೆ.

ಸುಮಾರು ೧೦ ಸಾವಿರ ರೂ. ಬೆಲೆ ಬಾಳು ಆಡು ಚಿರತೆ ದಾಳಿಗೆ ಸಾವಿಗೀಡಾಗಿದೆ ಎಂದು ಹರೀಶ್ ಅಳಲು ತೋಡಿಕೊಂಡಿದ್ದಾರೆ.
ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net