ಸಂಘಗಳ ಏಳಿಗೆಗೆ ಮಹಿಳೆಯರ ಪಾತ್ರ ಮುಖ್ಯ

ಹನಗೋಡು ಹೋಬಳಿಯ ಹಬ್ಬನಕುಪ್ಪೆ ಗ್ರಾಮದಲ್ಲಿ ನೂತನ ಬಿಎಂಸಿ ಕೇಂದ್ರಕ್ಕೆ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ ಶುಕ್ರವಾರ ನೆರವೇರಿಸಿ ಮಾತನಾಡಿದರು. ಎಂ.ಬಿ. ಸುರೇಂದ್ರ, ಕೆಂಪೇಗೌಡ, ಪ್ರೇಮಕುಮಾರ್, ಗಣೇಶ್ ಇದ್ದರು.
11han-1 bmc news
Published on


ಹನಗೋಡು: ಹಾಲು ಉತ್ಪಾದಕರ ಸಹಕಾರ ಸಂಘಗಳ ಏಳಿಗೆಗೆ ಮಹಿಳೆಯರ ಪಾತ್ರ ಮುಖ್ಯ ಎಂದು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ ತಿಳಿಸಿದರು.


ಹನಗೋಡು ಹೋಬಳಿಯ ಹಬ್ಬನಕುಪ್ಪೆ ಗ್ರಾಮದಲ್ಲಿ ನೂತನ ಬಿಎಂಸಿ ಕೇಂದ್ರಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಗ್ರಾಮಗಳಲ್ಲಿ ಸ್ಥಾಪನೆಗೊಂಡಿರುವ ಡೇರಿ ಹೆಚ್ಚಿನ ಪ್ರಗತಿ ಕಾಣುತ್ತಿದ್ದು, ಮಹಿಳೆಯರು ಸಂಘದ ಸದಸ್ಯರಾಗುವ ಜತೆಗೆ ಡೇರಿಯ ಎಲ್ಲ ವ್ಯವಹಾರದಲ್ಲಿ ಭಾಗಿಗಳಾಗಬೇಕು. ಡೇರಿಗಳಿಗೆ ಹೆಚ್ಚು ಹಾಲು ಸರಬರಾಜು ಮಾಡಿದಲ್ಲಿ ಸ್ವ-ಸಹಾಯ ಸಂಘಗಳಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಸಹಕಾರಿ ಸಂಘಗಳ ಮೂಲಕ ಸರ್ಕಾರದ ಎಲ್ಲ ರೀತಿಯ ಸವಲತ್ತುಗಳನ್ನು ಪಡೆಯಲು ಸಾಧ್ಯ ಎಂದು ತಿಳಿಸಿದರು.


ಸಭೆಯಲ್ಲಿ ಮೈಮುಲ್ ನಿರ್ದೇಶಕ ಕೆ.ಎಸ್. ಕುಮಾರ್ ಮಾತನಾಡಿ, ಹೈನುಗಾರರು ಶುದ್ಧ ಹಾಗೂ ಗುಣಮಟ್ಟದ ಹಾಲನ್ನು ಡೇರಿಗೆ ಹಾಕುವುದರೊಂದಿಗೆ ಉತ್ತಮ ದರ ಪಡೆಯಬೇಕು ಎಂದರು.


ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗಭೂಷಣ್, ಜಿಪಂ ಮಾಜಿ ಸದಸ್ಯ ಎಂ.ಬಿ. ಸುರೇಂದ್ರ, ಟಿಎಪಿಎಂಎಸ್ ಅಧ್ಯಕ್ಷ ಕೆಂಪೇಗೌಡ, ತಾಪಂ ಮಾಜಿ ಉಪಾಧ್ಯಕ್ಷ ಪ್ರೇಮಕುಮಾರ್, ಡೇರಿ ಅಧ್ಯಕ್ಷ ಗಣೇಶ್, ತಂಬಾಕು ಮಂಡಳಿಯ ಸದಸ್ಯ ಎಚ್.ಆರ್. ದಿನೇಶ್, ಮೇಲ್ವಿಚಾರಕ ಬಿ. ಗೌತಮ್, ಕಾರ್ಯದರ್ಶಿ ನಾಗರಾಜ್, ಮುಖಂಡರಾದ ರಾಜೇಗೌಡ, ನಟೇಶ್, ಮೋಹನ್, ಕುಮಾರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net