ಸಂಘಕ್ಕಿದೆ ಎಲ್ಲರನ್ನೂ ಗೆಲ್ಲುವ ಶಕ್ತಿ

18bdvt1
Published on

ಭದ್ರಾವತಿ: ಸಂಘದ ಸಂದೇಶಗಳನ್ನು ಪ್ರತಿ ಮನೆಮನೆಗೆ ತಲುಪಿಸುವ ಕೆಲಸ ಕಾರ್ಯಕರ್ತರು ಮಾಡಬೇಕಾಗಿದೆ. ಇದರಿಂದಾಗಿ ಮುಂದಿನ 5 ವರ್ಷದಲ್ಲಿ ವಿಕಸಿತ ಭಾರತ ಕಾಣಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯ ನಿರ್ವಾಹಕ ಪಟ್ಟಾಭಿರಾಮನ್ ಹೇಳಿದರು.

ಆರ್‌ಎಸ್‌ಎಸ್ ವಿಜಯದಶಮಿ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಘದ ಸದಸ್ಯರೆಲ್ಲರೂ ಒಟ್ಟಾಗಿ ಸೇರಿ ಹಿಂದುತ್ವದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ರಾಜಕೀಯದ ವಿಚಾರವಾಗಿ ಜಾತೀಯತೆ ಬೆಳೆಸಿದ್ದಾರೆ. ನಾವೆಲ್ಲರೂ ಭಾರತೀಯರೆ. ಮುಸ್ಲೀಂ, ಕ್ರೈಸ್ತ ಯಾರೇ ಆಗಿರಲಿ ಮನೆಯನ್ನು ಮುಖ್ಯ ಕೇಂದ್ರವಾಗಿರಿಸಿಕೊಂಡು ಪ್ರತಿ ಮನೆಯಲ್ಲಿ ಹಿಂದುತ್ವದ ವಾತಾವರಣ ನಿರ್ಮಾಣ ಮಾಡಬೇಕಾಗಿದೆ ಎಂದರು.

ಸಮಾಜದ ಪರಿವರ್ತನೆ ನಮ್ಮಿಂದಲೆ ನಡೆಯಬೇಕು. ಇತ್ತೀಚಿನ ಬೆಳವಣಿಗೆಯಲ್ಲಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಅದಕ್ಕಾಗಿ ಸಂಘದ ಕಾರ್ಯಕರ್ತರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಪಾಡಿಗೆ ನೀವು ಕೆಲಸ ಮಾಡಿಕೊಂಡು ಹೋಗಿ. ನಮ್ಮ ಸಂಘಕ್ಕೆ ಎಲ್ಲರನ್ನೂ ಗೆಲ್ಲುವಂತಹ ಶಕ್ತಿ ಇದೆ. ನಮ್ಮ ಮಾತೆಯರು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಬೇಕಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net