ಕುಂದಾಪುರ : ಇಲ್ಲಿನ ಆನಗಳ್ಳಿ ಗ್ರಾಮ ನಿವಾಸಿ ಡಾ. ಸಂಗೀತಾ ಹೊಳ್ಳ ತಾಜ್ ಮಿಸ್ ಯೂನಿವರ್ಸ್ 2022 ವಿಜೇತೆ.
ಡಾ. ಸಂಗೀತಾ ಹೊಳ್ಳ, ಎನ್ಎಂಸಿ ಕಂಪನಿಯಲ್ಲಿ ಡಾಟಾ ಸೈಂಟಿಸ್ಟ್ ಆಗಿದ್ದು, ಮಿಸ್ ಯೂನಿವರ್ಸ್ ಸ್ಪರ್ಧೆ ಉತ್ತರ ಪ್ರದೇಶದ ಆಗ್ರಾ ಕ್ರಿಸ್ಟಲ್ ಸರೋವರ್ ಪ್ರೀಮಿಯರ್ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಕಳೆದ ತಿಂಗಳು ನಡೆದಿತ್ತು.
ಮಿಸ್ ಯೂನಿವರ್ಸ್ 2022 ಮತ್ತು ಮಿಸ್ ಯೂನಿವರ್ಸ್ ಬ್ಯೂಟಿ ವಿತ್ ಬ್ರೈನ್ 2 ಪ್ರಶಸ್ತಿ ಗೆದ್ದಿದ್ದು, ವಿಶ್ವ ಸುಂದರಿ ವಿಭಾಗದಲ್ಲಿ 25 ಮಂದಿ ಭಾಗವಹಿಸಿದ್ದು, ಸಂಗೀತಾ ಅಂತಿಮ ಸುತ್ತುಗೆ ಆಯ್ಕೆಯಾಗಿದ್ದರು.
ಈಕೆ ಕುಂದಾಪುರ ಆನಗಳ್ಳಿಯ ಕರ್ಣಾಟಕ ಬ್ಯಾಂಕ್ ಬೆಂಗಳೂರು ಉದ್ಯೋಗಿ ಲಕ್ಷ್ಮೀನಾರಾಯಣ ಹೊಳ್ಳ ಮತ್ತು ದಿ. ನಿರ್ಮಲಾ ಹೊಳ್ಳ ಪುತ್ರಿ.
ಆಹಾರ, ವಸತಿ ಮತ್ತು ಮುಖ್ಯವಾಗಿ ಶಿಕ್ಷಣವಿಲ್ಲದೆ ಭಿಕ್ಷೆ ಬೇಡುವ ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡುವ ಬಯಕೆ ಇದೆ. ರಾಷ್ಟ್ರದ ಒಳಿತಿಗಾಗಿ ಕೆಲಸ ಮಾಡಬೇಕು. ಮೂಲಭೂತ ಶಿಕ್ಷಣ ಮುಖ್ಯವಾಗಿದ್ದು, ಅಜ್ಞಾನದ ಗೋಡೆ ಒಡೆದು ಸುಜ್ಞಾನದ ಕಡೆ ನಡೆಸುವುದಾದೇ ಗುರಿ.
ಡಾ.ಸಂಗೀತಾ, ತಾಜ್ ಮಿಸ್ ಯೂನಿವರ್ಸ್ 2022 ವಿಜೇತೆ