ಸಂಗೀತದಿಂದ ಮನಸ್ಸಿಗೆ ಮುದ

15 nrp 3 sangetha
ಎನ್.ಆರ್.ಪುರದಲ್ಲಿ ನಡೆದ ಶೃಂಗೇರಿ ಕ್ಷೇತ್ರ ಮಟ್ಟದ ಜಾನಪದ ಗೀತೆ ಕಾರ್ಯಕ್ರಮವನ್ನು ಸಂಗೀತ ಶಿಕ್ಷಕಿ ಕೊಪ್ಪದ ಗಾಯತ್ರಿ ನಾಗರಾಜ್ ಉದ್ಘಾಟಿಸಿದರು. ಎಸ್.ಉಪೇಂದ್ರ, ಅನಂತಪದ್ಮನಾಭ, ಮಮತಾ ಪ್ರಭಾಕರ್, ರಂಗಿಣಿ ಯು. ರಾವ್, ವಿದ್ಯಾ ವರದರಾಜ್, ಶಮಚರಣ್, ಗೌರಿ ರಮೇಶ್ ಇದ್ದರು.
Published on

ಎನ್.ಆರ್.ಪುರ: ಕೆಲಸದ ಒತ್ತಡದ ನಡುವೆ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತವು ಮನಸ್ಸಿಗೆ ಮುದ ನೀಡುತ್ತದೆ ಎಂದು ಸೀತೂರು ಗ್ರಾಪಂ ಅಧ್ಯಕ್ಷ ಎಸ್.ಉಪೇಂದ್ರ ಹೇಳಿದರು. ಅವರು ಭಾನುವಾರ ಸೀತೂರಿನ ಅನಂತರಾಮ ಉಪಾಧ್ಯ ಸಭಾಂಗಣದಲ್ಲಿ ಕುದುರೆಗುಂಡಿ ಗಾಯತ್ರಿ ವಿಪ್ರ ಮಹಿಳಾ ಬಳಗದ ಆಶ್ರಯದಲ್ಲಿ ಏರ್ಪಡಿಸಿದ್ದ ಶೃಂಗೇರಿ ಕ್ಷೇತ್ರಮಟ್ಟದ ಜಾನಪದ ಗೀತೆ, ಭಾವಗೀತೆ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅನೇಕ ಕಲಾವಿದರಿದ್ದು ಅವರನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು ಎಂದರು. ಯಕ್ಷಗಾನ ಕಲಾವಿದ ಅನಂತಪದ್ಮನಾಭ ಮಾತನಾಡಿ, ಯಾವುದೇ ಸಮಾಜ ಮುಂದೆ ಬರಬೇಕಾದರೆ ಸಂಘಟನೆ, ಸ್ವಾವಲಂಬನೆ, ಪ್ರಾಮಾಣಿಕತೆ ಅಗತ್ಯ. ಜಾನಪದಗೀತೆ, ಭಾವಗೀತೆ, ಭಜನೆ ರಾಜ್ಯದ ಅಪ್ಪಟ ಕಲೆಗಳಾಗಿವೆ. ಸನಾತನ ಧರ್ಮ ಉಳಿಯಬೇಕಾಗಿದೆ. ಹುಟ್ಟು-ಸಾವಿನ ಮಧ್ಯೆೆ ನಾವು ಒಳ್ಳೆಯವರಾಗಿ ಜೀವನ ಮಾಡಬೇಕು ಎಂದರು. ಕುದುರೆಗುಂಡಿ ಗಾಯತ್ರಿ ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ಮಮತಾ ಪ್ರಭಾಕರ್ ಮಾತನಾಡಿ, ವಿಪ್ರ ಸಮಾಜದವರ ಪ್ರತಿಭೆ ಗುರುತಿಸಲು ಭಾವಗೀತೆ, ಜಾನಪದ ಗೀತೆ ಸ್ಪರ್ಧೆ ಏರ್ಪಡಿಸಿದ್ದೇವೆ. ಪ್ರತಿಯೊಬ್ಬರಲ್ಲೂ ಸುಪ್ತವಾದ ಪ್ರತಿಭೆ ಅಡಗಿರುತ್ತದೆ. ಅದನ್ನು ಇಂತಹ ವೇದಿಕೆಗಳ ಮೂಲಕ ಹೊರತರುವ ಪ್ರಯತ್ನ ಮಾಡಿದ್ದೇವೆೆ ಎಂದು ಹೇಳಿದರು. ಸಂಗೀತ ಶಿಕ್ಷಕಿ ಕೊಪ್ಪದ ಗಾಯತ್ರಿ ನಾಗರಾಜ್ ಉದ್ಘಾಟಿಸಿದರು. ವೀಣಾ ಮಧು, ಗಾಯಕಿಯರಾದ ರಂಗಿಣಿ ಯು.ರಾವ್, ವಿದ್ಯಾವರದರಾಜ್, ಶಮಚರಣ್, ಗೌರಿ ರಮೇಶ್, ಶಾಂತಿ, ವಸುಂಧರಾ, ಸಂಧ್ಯಾ ಶ್ರೀನಾಥ್ ಇದ್ದರು. ಭಾವಗೀತೆ ಸ್ಪರ್ಧೆಯಲ್ಲಿ ಎನ್.ಆರ್.ಪುರ ಚೇತನ ಅಭಿಷೇಕ್(ಪ್ರ), ಶೃಂಗೇರಿಯ ಚೇತನ(ದ್ವಿ), ಎನ್.ಆರ್.ಪುರ ರಾಜೇಶ್ವರಿ(ತೃ) ಬಹುಮಾನ ಪಡೆದರು. ಜಾನಪದ ಗೀತೆ ಸ್ಪರ್ಧೆಯಲ್ಲಿ ಅಗಳಗಂಡಿಯ ಕಸ್ತೂರಿ(ಪ್ರ), ಶೃಂಗೇರಿಯ ಕಲಾ ರಮೇಶ್(ದ್ವಿ), ಎನ್.ಆರ್.ಪುರ ಚೇತನ ಅಭಿಷೇಕ್(ತೃ) ಬಹುಮಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net