ಸಂಗೀತ ಆಲಿಸುವುದರಿಂದ ಸಿಗಲಿದೆ ನೆಮ್ಮದಿ

8ark3
Published on

ಅರಕಲಗೂಡು: ಸಂಗೀತ ಆಲಿಸುವುದರಿಂದ ಜೀವನದ ಸಂಕಷ್ಟಗಳು ಪರಿಹಾರವಾಗಿ ನೆಮ್ಮದಿ ಸಿಗಲಿದೆ ಎಂದು ರಾಮನಾಥಪುರ ಶ್ರೀ ರಾಮ ಸೇವಾ ಸಮಿತಿ ಸಂಚಾಲಕ ವಿದ್ವಾನ್ ಲಕ್ಷ್ಮೀಕಾಶಿ ಹೇಳಿದರು.


ತಾಲೂಕಿನ ರಾಮನಾಥಪುರದ ಶ್ರೀ ಪಟ್ಟಾಭಿರಾಮ ದೇವಾಲಯದಲ್ಲಿ ಶ್ರೀ ರಾಮ ಸೇವಾ ಸಮಿತಿಯಿಂದ ಶುಕ್ರವಾರ ರಾತ್ರಿ ಆಯೋಜಿಸಿದ್ದ ಶ್ರೀ ರಾಮನವಮಿ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಗೀತ ಗಾಯನ ಪ್ರಸ್ತುತ ಪಡಿಸಿದ ನಂತರ ಮಾತನಾಡಿ, ಧಾರ್ಮಿಕ ಭಾವನೆಗಳು ಬಂದಾಗ ದುರ್ಗುಣಗಳಿಂದ ದೂರ ಉಳಿಯಲು ಸಾಧ್ಯ. ಇಂಥ ಸಂಗೀತ ಕೇಳುವುದರಿಂದ ಬದುಕಿನಲ್ಲಿ ನೆಮ್ಮದಿ ಹಾಗೂ ಸಂತೋಷ ಕಂಡುಕೊಳ್ಳಬಹುದು ಎಂದು ತಿಳಿಸಿದರು.


ದೇವಸ್ಥಾನ ಪ್ರಧಾನ ಅರ್ಚಕ ಎಸ್.ವಿ. ಲಕ್ಷ್ಮೀನಾರಾಯಣ ಭಟ್ಟ, ಅರ್ಚಕ ಎ.ಆರ್.ಅನಂತಶಯನಭಟ್ಟ, ಕೃಷ್ಣ ಅಯ್ಯಂಗಾರ್, ಸಮಿತಿಯ ಪದಾಧಿಕಾರಿಗಳಾದ ಅರ್.ಎಸ್.ನರಸಿಂಹಮೂರ್ತಿ, ಶ್ರೀನಿಧಿ, ತಿರುಮಲಚಾರ್, ಶ್ರೀನಿವಾಸ್, ಸಂಪತ್ ಅಯ್ಯಂಗಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net