ಷೇರು ಮಾರುಕಟ್ಟೆ ಜ್ಞಾನ ಅಗತ್ಯ

CTD 12 SRS
Published on

ಚಿತ್ರದುರ್ಗ: ಹಣ ಹೂಡಿಕೆ, ಉಳಿತಾಯ ಸೇರಿ ಉದ್ಯೋಗಾವಕಾಶಗಳು ಷೇರು ಮಾರುಕಟ್ಟೆಯಲ್ಲಿವೆ ಎಂದು ಸೆಬಿ ಸಲಹೆಗಾರ ಡಾ.ಚೈತನ್ಯ ಸುರೇಶ್ ಕಿತ್ತೂರು ಹೇಳಿದರು.

ನಗರದ ಎಸ್‌ಆರ್‌ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ಮತ್ತು ಬಿಬಿಎ ವಿದ್ಯಾರ್ಥಿಗಳಿಗೆ ಗುರುವಾರ ಏರ್ಪಡಿಸಿದ್ದ ಎರಡು ದಿನಗಳ ಷೇರು ಮಾರುಕಟ್ಟೆ ಕುರಿತ ಕಾರ‌್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಹಣ ಹೂಡಿಕೆ ಮುನ್ನ ಮಾರುಕಟ್ಟೆ ಆಳ-ಅಗಲ, ಸುರಕ್ಷತೆ, ಸಂಭವನೀಯ ಅಪಾಯಗಳ ಅಧ್ಯಯನದ ಅಗತ್ಯವಿದೆ. ಉದಾಸೀನದಿಂದ ಹಣ ಹೂಡಿಕೆ ಸಲ್ಲದು. ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಸಾಕಷ್ಟಿವೆ ಎಂದರು.

ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಕಾರ‌್ಯದರ್ಶಿ ಸುಜಾತಾ ಲಿಂಗಾರೆಡ್ಡಿ, ಆಡಳಿತಾಧಿಕಾರಿ ಡಾ.ಟಿ.ಎ ಸ್.ರವಿ, ಪ್ರಾಚಾರ‌್ಯೆ ಎ.ಜೆ.ಸಾಧನಾ, ಉಪನ್ಯಾಸಕರಾದ ಡಾ.ಜಿ.ಈರಣ್ಣ, ಡಾ.ಡಿ.ವರದರಾಜ, ಡಾ.ಹೇಮಂತ್‌ಕುಮಾರ್, ಚಂದ್ರಶೇಖರ್, ಕೆ.ದೇವೇಂದ್ರಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net