ಷಾ ಆಗಮನ ಹಿನ್ನೆಲೆ ಎನ್ ಎಸ್ ಜಿ ಅಧಿಕಾರಿಗಳ ಹದ್ದಿನ ಕಣ್ಣು..!

Published on

ಯಾದಗಿರಿ : ರಾಜ್ಯ ವಿಧಾನಸಭಾ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾದಗಿರಿ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿಗೌಡ ಮುದ್ನಾಳ ಪರ ಪ್ರಚಾರ ನಡೆಸಲು ಬಿಜೆಪಿ ಚುನಾವಣಾ ಚಾಣಕ್ಯ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ನಾಳೆ ಸಂಜೆ 4-20 ನಿಮಿಷಕ್ಕೆ ವಿಜಯಪುರದಿಂದ ಹೆಲಿಕಾಪ್ಟರ್ ಮೂಲಕ ಯಾದಗಿರಿಗೆ ಬಂದಿಳಿಯಲಿದ್ದಾರೆ. ಬಳಿಕ ನಗರದ ಮೈಲಾಪುರ ಬೆಸ್ ನಿಂದ ಗಾಂಧಿ ವೃತ್ತದವರೆಗೆ ನಡೆಯಲಿರುವ ಬೃಹತ್ ರೋಡ್ ಶೋ ನಲ್ಲಿ ಭಾಗಿಯಾಗಿ ಯಾದಗಿರಿ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿಗೌಡ ಮುದ್ನಾಳ ಪರ ಮತಯಾಚನೆ ಮಾಡಲಿದ್ದಾರೆ. ಷಾ ಆಗಮನದ ಹಿನ್ನೆಲೆ ಈಗಾಗಲೇ ಎನ್ ಎಸ್ ಜಿ ಭದ್ರತಾ ಪಡೆಯ ಮುಖ್ಯಸ್ಥರು ಕಲಬುರಗಿ ಐಜಿ ಪ್ರಮೀಣ್ ಸೂದ್, ಎಸ್ಪಿ ಸಿಬಿ. ವೇದ ಮೂರ್ತಿ ನೇತೃತ್ವದ ತಂಡ ನಗರದ ಪ್ರಮುಖ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಷಾ ಆಗಮನದ ವೇಳೆ ಯಾವುದೇ ಲೋಪದೋಷಗಳಾಗದಂತೆ ಮುನ್ನೆಚ್ಚರಿಕೆ ಕ್ರಮಾವಾಗಿ ಪರಿಶೀಲನೆ ಮಾಡಲಾಯಿತು. ಅಮಿತ್ ಷಾ ಸಂಚರಿಸುವ ರಸ್ತೆಯನ್ನು ಈಗಾಗಲೇ ಎನ್ ಎಸ್ ಜಿ ಪಡೆಯ ಅಧಿಕಾರಿಗಳು ತಮ್ನ ಸುಪರ್ದಿಗೆ ತೆಗೆದುಕೊಂಡು ನಗರದಾಧ್ಯಂತ ಕಟ್ಟೆಚ್ಚರ ವಹಿಸಿಸಿದ್ದಾರೆ. ಇನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಭಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net