

ಮೈಸೂರು ದಸರಾ ಮಹೋತ್ಸವ-2025 ಶ್ವಾನ/ ಮುದ್ದು ಪ್ರಾಣಿಗ ಪ್ರದರ್ಶನವನ್ನು ಸೆಪ್ಟೆಂಬರ್ 2025 ರಂದು ಬೆಳಗ್ಗೆ 9 ಗಂಟೆಗೆ ಜೆ.ಕೆ. ಮೈದಾನ ರೈಲ್ವೆ ಸ್ಟೇಷನ್ ಹತ್ತಿರ ಆಯೋಜಿಸಲಾಗಿದೆ.
ಪ್ರದರ್ಶನದಲ್ಲಿ ಭಾಗವಹಿಸುವ ಪ್ರಾಣಿಗಳಿಗೆ ನೋಂದಣಿ ಕಡ್ಡಾಯ, ನೋಂದಾಯಿಸಲು ಕಡೆಯ ದಿನಾಂಕ ಸೆಪ್ಟೆಂಬರ್ 28 ರ ಸಂಜೆ 06 ಗಂಟೆಯವರೆಗೆ, ಸ್ಪರ್ಧೆ ನಡೆಯುವ ಸ್ಥಳದಲ್ಲಿ ನೋಂದಾಯಿಸಲು ಅವಕಾಶವಿರುವುದಿಲ್ಲ (No Spot Registration), ಪ್ರದರ್ಶನದಲ್ಲಿ ಭಾಗವಹಿಸಲು ಯಾವುದೇ ಕೆನೆಲ್ ಕ್ಲಬ್‌ನ ನೋಂದಣಿ ಪತ್ರದ ಅಗತ್ಯವಿಲ್ಲ ಎಲ್ಲಾ ಶ್ವಾನ/ ಮುದ್ದು ಪ್ರಾಣಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ, ಪ್ರದರ್ಶನಕ್ಕೆ ನೋಂದಾಯಿಸಿದ ಪ್ರಾಣಿಗಳೊಂದಿಗೆ ಸೆಪ್ಟೆಂಬರ್ 28 ರಂದು ಬೆಳಿಗ್ಗೆ 9.00 ಗಂಟೆಗೆ ಜೆ. ಕೆ. ಮೈದಾನ, ರೈಲ್ವೆ ಸ್ಟೇಷನ್ ಎದುರು ಇಲ್ಲಿ ಹಾಜರಿರಬೇಕು, ಪ್ರದರ್ಶನದಲ್ಲಿ ಭಾಗವಹಿಸುವ ಶ್ವಾನ / ಮುದ್ದು ಪ್ರಾಣಿಗಳ ರಕ್ಷಣೆ (Safety) ಮಾಲೀಕರ ಜವಾಬ್ದಾರಿ, ಶ್ವಾನ / ಮುದ್ದು ಪ್ರಾಣಿಗಳಿಗೆ ಬೇಕಾದ ಆಹಾರ, ಬೆಲ್ಟ್, ಚೈನು ಇತ್ಯಾದಿ ಸಾಮಗ್ರಿಗಳನ್ನು ಮಾಲಿಕರೇ ತರಬೇಕು, ಬಹುಮಾನಕ್ಕಾಗಿ ಆಯ್ಕೆ ಮಾಡುವಾಗ ತೀರ್ಪುಗಾರರ ತೀರ್ಮಾನವೇ ಅಂತಿಮ, ಭಾಗವಹಿಸುವ ಎಲ್ಲಾ ಪ್ರಾಣಿಗಳಿಗೂ ಸರ್ಟಿಫಿಕೇಟ್ ನೀಡಲಾಗುವುದು ಮತ್ತು ವಿಜೇತ ಶ್ವಾನಗಳಿಗೆ ಬಹುಮಾನ ವಿತರಿಸಲಾಗುವುದು, ಪ್ರಾಣಿಗಳಿಗೆ ಸ್ವಚ್ಛ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿರುತ್ತದೆ, ಪ್ರಾಥಮಿಕ ಚಿಕಿತ್ಸಾ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿರುತ್ತದೆ, ಯಾವುದೇ ರೋಗಗ್ರಸ್ಥ ಪ್ರಾಣಿಗಳಿಗೆ / ಶ್ವಾನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ, ವನ್ಯ ಮೃಗ ಕಾಯಿದೆಯಡಿ ಒಳಪಡುವ ಪ್ರಾಣಿ ಪಕ್ಷಿಗಳನ್ನು ಪ್ರದರ್ಶನದ ಮೈದಾನದಲ್ಲಿ ನಿರ್ಬಂಧಿಸಿದೆ.
ನೋಂದಣಿ ಮಾಡಿಕೊಳ್ಳಲು ಮೈಸೂರು ನಗರದ ಪಶು ಆಸ್ಪತ್ರೆಗಳನ್ನು ರೈತ ದಸರಾ ಉಪಸಮಿತಿಯ ಭೀಮಪ್ಪ ಕ.ಲಾಳಿ, ರೈತ ದಸರಾ ಉಪಸಮಿತಿಯ ಕಾರ್ಯಧ್ಯಕ್ಷರಾದ ಕೆ.ಹೆಚ್. ರವಿ, ರೈತ ದಸರಾ ಉಪಸಮಿತಿಯ ಕಾರ್ಯದರ್ಶಿ ಡಾ. ನಾಗರಾಜು ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.