

ಮದ್ದೂರು: ಮಹಾಲಯ ಅಮಾವಾಸ್ಯೆ ಅಂಗವಾಗಿ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಮೂಲ ವಿಗ್ರಹಕ್ಕೆ ಬೆಣ್ಣೆ, ವಿವಿಧ ಬಗೆಯ ಹೂವಿನ ಅಲಂಕಾರ, ಜೇನು ಮತ್ತು ಪಂಚಾಮೃತ ಅಭಿಷೇಕ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಆಗಮಿಸಿದ ಭಕ್ತಾದಿಗಳಿಗೆ ತೀರ್ಥ, ಪ್ರಸಾದ ವಿತರಣೆ ಮಾಡಲಾಯಿತು.
ಪಟ್ಟಣದ ಪುರಾಣ ಪ್ರಸಿದ್ಧ ಶ್ರೀಉಗ್ರ ನರಸಿಂಹಸ್ವಾಮಿ, ಶಕ್ತಿ ದೇವತೆ ಶ್ರೀಮದ್ದೂರಮ್ಮ, ಕಾಶಿ ವಿಶ್ವೇಶ್ವರಯ್ಯಸ್ವಾಮಿ, ವೈದ್ಯನಾಥಪುರ ಗ್ರಾಮದ ಶ್ರೀವೈದ್ಯನಾಥೇಶ್ವರಸ್ವಾಮಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತಾದಿಗಳು ಆಗಮಿಸಿದ ದೇವರ ದರ್ಶನ ಪಡೆದರು.