ಶ್ರೀರಾಮುಲುಗೆ ಡಿಕೆಶಿ ಗಾಳ ಹಾಕಿದ್ದ ನಿಜ, ಆದ್ರೆ ಈಗಲ್ಲ!

sriramulu
Published on

ಬೆಂಗಳೂರು: ಮಾಜಿ ಸಚಿವ ಶ್ರೀರಾಮುಲು ಅವರಿಗೆ ಗಾಳ ಹಾಕಿದ್ದು ನಿಜ, ಆದರೆ ಈಗಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೊಂಡಿದ್ದಾರೆ.

ಈ ನಾನು ಶ್ರೀರಾಮುಲು ಅವರನ್ನು ಭೇಟಿಯಾಗಿಲ್ಲ, ಅವರಿಗೆ ಯಾವುದೇ ಆಹ್ವಾನ ನೀಡಿಲ್ಲ ಎಂದು ಹೇಳಿದ ಡಿ.ಕೆ.ಶಿವಕುಮಾರ್ ವಿಧಾನಸಭೆ ಚುನಾವಣೆಗೂ ಮೊದಲು ನಾನು ಪಕ್ಷಕ್ಕೆ ಬರಲು ಕೇಳಿದ್ದೆ. ಆಗ ಶ್ರೀರಾಮುಲು ಅವರು ನಾನು ಬಿಜೆಪಿಯಲ್ಲೇ ಇರುತ್ತೇನೆ ಎಂದು ಹೇಳಿದ್ದರು. ಆಗ ಶ್ರೀರಾಮುಲು ಮಾತ್ರವಲ್ಲದೇ 50 ಶಾಸಕರನ್ನು ಸಂಪರ್ಕ ಮಾಡಿದ್ದೆ ಎಂದರು.

ಬಿಜೆಪಿಯಿಂದ ಶ್ರೀರಾಮುಲು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲಾಗುತ್ತಿದೆ ಎಂದು ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಹೇಳಿಕೆ ನೀಡಿದ ಬಳಿಕ ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿತ್ತು. ಅಲ್ಲದೇ ಬಿಜೆಪಿ ವರಿಷ್ಠರು ಶ್ರೀರಾಮುಲುಗೆ ಕರೆ ಮಾಡಿ ದೆಹಲಿಗೂ ಬರ ಹೇಳಿದ್ದರು.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಶ್ರೀರಾಮುಲು ಅವರನ್ನು ಸಂಪರ್ಕ ಮಾಡಿದೆ ಎಂಬ ವಿಚಾರದಲ್ಲಿ ಹುರುಳಿಲ್ಲ. ಅವರು (ಜನಾರ್ದನ ರೆಡ್ಡಿ) ಬಾಯಿ ಚಪಲಕ್ಕೆ ಮಾತನಾಡುತ್ತಾರೆ. ಅವರು ಪಾರ್ಟಿಯಲ್ಲೇ ಇರಲಿಲ್ಲ. ಈಗ ಪಾರ್ಟಿಗೆ ಕಾಲಿಟ್ಟು ಮನೆ ಒಡೆಯೋ ಕೆಲಸ ಮಾಡುತ್ತಿದ್ದಾರೆ. ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ. ನನಗೆ ಶ್ರೀರಾಮುಲು ಸಿಕ್ಕಿಲ್ಲ, ಮಾತಾಡಿಲ್ಲ ಎಂದು ಏಕವಚನದಲ್ಲೇ ರೆಡ್ಡಿ ವಿರುದ್ಧ ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net