ಶ್ರೀಮದ್ ರಾಮಾಯಣ ನಾಟಕ ಪ್ರದರ್ಶನ

LordRam
Published on


ಮೈಸೂರು:
ಕುವೆಂಪುನಗರದ ಕಲಾ ಸುರುಚಿ ಸಂಸ್ಥೆಯಿಂದ ಕಂಪನಿ ಶೈಲಿಯ ‘ಶ್ರೀಮದ್ ರಾಮಾಯಣ’ ನಾಟಕ ಪ್ರದರ್ಶನವನ್ನು ಜು.6 ಮತ್ತು 7ರಂದು ಸಂಜೆ 6 ಗಂಟೆಗೆ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಕಲಾಸುರುಚಿ ಸಂಸ್ಥೆಯು ಕಳೆದ 30 ವರ್ಷಗಳಿಂದ ನಾಟಕ, ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ಸಕ್ರಿಯವಾಗಿದೆ. ಇದೀಗ ಕಂಪನಿ ಶೈಲಿಯ ನಾಟಕ ಪ್ರಯೋಗಕ್ಕೆ ಮುಂದಾಗಿದೆ. ನಾಡಿನ ಹೆಸರಾಂತ ರಂಗಸಂಗೀತ ವಿದ್ವಾನ್ ವೈ.ಎಂ. ಪುಟ್ಟಣ್ಣಯ್ಯ ಅವರು ರಂಗ ಪಠ್ಯ ಮತ್ತು ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ರಾಮಾಯಣ ಭಾರತೀಯರ ಅದ್ವಿತೀಯ ಕಾವ್ಯವಾಗಿದ್ದು, ನಮ್ಮ ಜೀವನದ ಭಾಗವೇ ಆಗಿರುತ್ತದೆ. ಪುಟ್ಟಣ್ಣಯ್ಯನವರು ಕಂಪನಿ ಶೈಲಿಗೆ ಒಂದಿಷ್ಟೂ ಭಂಗ ಬರದಂತೆ ಶಾಸ್ತ್ರೀಯ ಸಂಗೀತದ ಚೌಕಟ್ಟಿನಲ್ಲಿ ಅನೇಕ ಹಾಡುಗಳನ್ನು ಅಭ್ಯಾಸ ಮಾಡಿಸಿದ್ದು, ಹೊಸ ರಂಗಪ್ರತಿಭೆಗಳು ಕಂಪನಿ ಶೈಲಿಯ ನಾಟಕವನ್ನು ಮೈಸೂರಿಗರ ಮುಂದೆ ಪ್ರದರ್ಶಿಸಲು ಉತ್ಸುಕರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net