ಶ್ರೀನಿವಾಸಪುರ ರೈತರ ಬೆಳೆಗಳ ನಾಶ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಕೆ.ಪಿ.ಆರ್.ಎಸ್ ಒತ್ತಾಯ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಆಧಿಕಾರದ ದುರುಪಯೋಗ ಮಾಡಿಕೊಂಡು ದೌರ್ಜನ್ಯದಿಂದ ಸರ್ವಾಧಿಕಾರಿಯಂತೆ ರೈತರ ಬೆಳೆ ನಾಶ ಮಾಡಿದ ಆರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರಗಿಸಲು ಆಗ್ರಹಿಸಿ ಹಾಗೂ ಬಗರ್ ಹುಕ್ಕುಂ ಸಾಗುವಳಿ ರೈತರ ಹಕ್ಕುಗಳ ರಕ್ಷಣೆಗಾಗಿ ಒತ್ತಾಯಿಸಿ ಕೆ.ಪಿ.ಆರ್.ಎಸ್ ಹಾಗೂ ಬಗರ್ ಹುಕ್ಕುಂ ಸಾಗುವಳಿದಾರರ ಹೋರಾಟ ಸಮಿತಿಯ ನೇತೃತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕೆ.ಪಿ.ಆರ್.ಎಸ್ ರಾಜ್ಯ ಉಪಾಧ್ಯಕ್ಷ ಪಿ.ಆರ್ ಸೂರ್ಯನಾರಾಯಣ ಮಾತನಾಡಿ, ರೈತ ಆಂದರೆ ಅನ್ನದಾತ, ಇಡೀ ಮಾನವ ಕುಲಕ್ಕೆ ಆಹಾರ ಉತ್ಪಾದನೆ ಮಾಡುವ ಅನ್ನದಾತರು. ಆಳುವ ಸರ್ಕಾರಗಳ ದೋರಣೆಗಳಿಂದ ವಂಶ ಪಾರಂಪರ್ಯವಾಗಿ ನಂಬಿದ್ದ ಕೃಷಿಯಿಂದ ದೂರ ಉಳಿಯುವಂತಾಗಿದೆ. ಕಾರ್ಪೊರೇಟ್ ಕೃಷಿಯನ್ನು ಬೆಂಬಲಿಸಿಸುತ್ತಿರುವ ಸರ್ಕಾರಗಳು, ಅದಕ್ಕೆ ರಕ್ಷಕರಾಗಿ ನಿಂತಿರುವ ಅಧಿಕಾರಿಶಾಹಿ ವರ್ಗ ನೀತಿಗಳಿಂದ ದೇಶದ ರೈತರು ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಕಾನೂನು ಬದ್ದವಾಗಿ ರೈತರಿಗೆ ಭೂಮಿ ಹಂಚಲು ಕರ್ನಾಟಕದಲ್ಲಿ ೪೦ ಕ್ಕೂ ಹೆಚ್ಚು ಬಾರಿ ಕಂದಾಯ ಮತ್ತು ಭೂ ಸುಧಾರಣಾ ಕಾಯ್ದೆಗಳಿಗೆ ತಿದ್ದುಪಡಿ ತಂದು ಭೂಹೀನರಿಗೆ, ಸಣ್ಣ ರೈತರಿಗೆ ಹಾಗೂ ದಲಿತರಿಗೆ ಭೂಮಿ ಹಂಚಲಾಗಿದೆ ೧೯೦೬ ರಲ್ಲಿ ರೂಪಗೊಂಡ ಕಂದಾಯ, ಭೂ ದಾಖಲೆಗಳ ಪ್ರಕಾರ ಹಾಗೂ ಭೂ ಸುಧಾರಣೆ ಕಾಯ್ದೆಗಳ ಹಿನ್ನೆಲೆಯಲ್ಲಿ ಶ್ರೀನಿವಾಸಮರ ತಾಲ್ಲೂಕು ಸೇರಿ ಆವಿಭಾಜಿತ ಕೋಲಾರ ಜಿಲ್ಲಾದ್ಯಂತ ಲಕ್ಷಾಂತರ ರೈತರು ಕಾನೂನು ಬದ್ಧವಾಗಿ ಭೂಮಿಯ ಹಕ್ಕುದಾರರಾಗಿದ್ದಾರೆ ಇವತ್ತು ರೈತರ ಮೇಲೆ ದಬ್ಬಾಳಿಕೆ ನಡೆಸಿರುವುದು ಖಂಡನೀಯ ಎಂದರು

ಸAಘಟನೆ ಜಿಲ್ಲಾ ಅಧ್ಯಕ್ಷ ಟಿ.ಎಂ ವೆಂಕಟೇಶ್ ಮಾತನಾಡಿ ಕಂದಾಯ ಇಲಾಖೆಯ ಸರ್ಕಾರಿ ಖರಾಬು, ಗೋಮಾಳ, ಹುಲ್ಲುಬನ್ನಿ ಮುಂತಾದ ಸರ್ಕಾರದ ವಿವಿಧ ರೀತಿಯ ಭೂಮಿಗಳಲ್ಲಿ ಮಂಜೂರಾತಿ ಪಡೆದ ಶ್ರೀನಿವಾಸಪುರ ತಾಲ್ಲೂಕಿನ ರೈತರು ತಮ್ಮ ಭೂಮಿಗೆ ಆರ್.ಟಿಸಿ ಮ್ಯುಟೇಷನ್‌ಗಳಲ್ಲಿ ಕಾನೂನು ಬದ್ಧವಾಗಿ ಭೂಮಿ ಹಕ್ಕು ಪಡೆದು ಸರ್ಕಾರ ತಮಗೆ ನೀಡಿದ ಭೂಮಿಯನ್ನು ಅಭಿವೃದ್ಧಿ ಪಡಿಸಿ ಇಲ್ಲಿನ ಹವಮಾನ ಮತ್ತು ಪರಿಸರಕ್ಕೆ ಅನುಗುಣವಾಗಿ ಐವತ್ತು ಆರವತ್ತು ವರ್ಷಗಳಿಂದ ಮಾವು ಹಾಗೂ ಇತರೆ ತೋಟಗಾರಿಕ ಬೆಳೆಗಳನ್ನು ಬೆಳೆಯುತ್ತಾ ತಮ್ಮ ಕುಟುಂಬಗಳ ಬದುಕನ್ನು ರೂಪಿಸಿಕೊಂಡಿದ್ದಾರೆ. ಹಾಗೆಯೇ ಸಾವಿರಾರು ಸಂಖ್ಯೆಯ ಬಗರ್ ಹುಕ್ಕುಂ ಸಾಗುವಳಿ ರೈತರು ಆವರ ಸ್ವಾಧೀನದಲ್ಲಿರುವ ಭೂಮಿಗೆ ಸಕ್ರಮ ಮಾಡಿಕೊಳ್ಳಲು ಕರ್ನಾಟಕ ಭೂ ಕಂದಾಯ ನಿಯಾಮವಳಿ, ಕರ್ನಾಟಕ ಭೂ ಸುಧಾರಣಾ ಕಾನೂನು ೯೪ಎ ಹಾಗೂ '೯೪ಬಿ' ಪ್ರಕಾರ ಸಕ್ರವiಕ್ಕಾಗಿ ಕೋರಿ ಸಲ್ಲಿಸಿರುವ ಅರ್ಜಿಗಳು ಸರ್ಕಾರ ಮತ್ತು ಭೂ ಮಂಜೂರಾತಿ ಸಮಿತಿಗಳ ಮುಂದೆ ಬಾಕಿ ಉಳಿದಿವೆ ಎಂದರು.

ಮAಜೂರಾತಿ ಹಕ್ಕು ಪಡೆದ ರೈತರು ಮತ್ತೊಂದು ಕಡೆ ಭೂ ಸ್ವಾಧೀನದಲ್ಲಿದ್ದು, ಮಂಜೂರಾತಿಗೆ ಅರ್ಜಿ ಸಲ್ಲಿಸಿ, ಇತ್ಯರ್ಥಕ್ಕೆ ಬಾಕಿ ಇರುವ ರೈತರ ಭೂಮಿಗಳಿಗೆ ಒಟ್ಟಾರೆ ತಾಲ್ಲೂಕಿಗೆ ೯೭ ಗ್ರಾಮಗಳ ೧೬೬ ಸರ್ವೇ ನಂಬರ್‌ಗಳಲ್ಲಿ ಸುಮಾರು ೨೫,೦೦೦ ಎಕರೆ ಕಂದಾಯ ಭೂಮಿಗೆ ಅರಣ್ಯ ಇಲಾಖೆಯವರು ಅಧಿಕಾರ ದುರುಪಯೋಗ ಪಡಿಸಿಕೊಂಡು ರೈತರ ಜಮೀನುಗಳಿಗೆ ರಾತ್ರೋರಾತ್ರಿ ಕೋಲಾರ ಜಿಲ್ಲೆಯ ಡಿ.ಎಫ್.ಓ, ಎ.ಸಿ.ಎಫ್. ಆರ್.ಎಫ್.ಓ. ಮುಂತಾದ ಅಧಿಕಾರಿಗಳ ನೇತೃತ್ವದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಬೃಹತ್ ಜೆ.ಸಿ.ಬಿ.ಯಂತ್ರಗಳನ್ನು ತಂದು ರೈತರ ಜಮೀನುಗಳಿಗೆ ಆತಿಕ್ರಮ ಮತ್ತು ಆಕ್ರಮವಾಗಿ ಪ್ರವೇಶ ಮಾಡಿ ಮಾವು, ತೆಂಗು ತೋಟಗಾರಿಕಾ ಬೆಳೆಗಳು ಸೇರಿದಂತೆ, ಟಮೋಟೋ, ಕೋಸು, ಕ್ಯಾರೆಟ್ ಮುಂತಾದ ತರಕಾರಿ ಬೆಳೆಗಳನ್ನು ದೌರ್ಜನ್ಯದಿಂದ ನಾಶ ಮಾಡಿ ಆಪಾರ ನಷ್ಟ ಉಂಟು ಮಾಡಿದ್ದಾರೆ. ಇದರಿಂದ ರೈತರಿಗೆ ಕೋಟ್ಯಾಂತರ ರೂಪಾಯಿಗಳು ನಷ್ಟವಾಗಿದೆ. ರೈತರ ಬೆಳೆ ನಾಶ ಮಾಡುವುದನ್ನು ತಡೆಯಲು ಹೋದ ೨೪ ರೈತರ ಮೇಲೆ ಎಫ್.ಐ.ಆರ್. ಮಾಡಿ ಅವರನ್ನು ರಾತ್ರೋರಾತ್ರಿ ಬಂಧಿಸುವ ಮೂಲಕ ಅರಣ್ಯ ಇಲಾಖೆಯವರು ಕರ್ನಾಟಕ ಭೂ ಸುಧಾರಣಾ ಕಂದಾಯ ಕಾಯ್ದೆಗಳನ್ನು ಉಲ್ಲಂಘನೆ ಮಾಡಿ ಬಗರ್ ಹುಕ್ಕುಂ ಸಾಗುವಳಿದಾರರ ಹಕ್ಕಿಗೆ ಗಂಭೀರ ದಕ್ಕೆ ಉಂಟುಮಾಡಿದ್ದಾರೆ. ಈ ರೀತಿಯ ರಾಕ್ಷಸ ಹಾಗೂ ಆಮಾನವೀಯ ಕ್ರಮಗಳನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್ ಮುಖಂಡರಾದ ಅಲಹಳ್ಳಿ ವೆಂಕಟೇಶಪ್ಪ, ಬಿ ಎ ಸೈಯದ್ ಫಾರೂಕ್, ಇಂಜಿನಿಯರ್ ನಾರಾಯಣಸ್ವಾಮಿ ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ರೈತ ಮುಖಂಡರಾದ ವಿ ನಾರಾಯಣ ರೆಡ್ಡಿ, ವೆಂಕಟಪ್ಪ, ಗಂಗಮ್ಮ, ಚಿನ್ನಮ್ಮ, ಗುಲ್ಜಾರ್, ಅಮೀರ್ ಜಾನ್ ಕೆ.ವಿ.ಅಧಿರೆಡ್ಡಿ ಶಾಂತಲಮ್ಮ ಮುಂತಾದವರಿದ್ದರು.

ಚಿತ್ರ ೧೬. ಕೆ.ಎಲ್.ಆರ್. ೦೯ : ಬಗ್ಗರ್ ಹುಕುಂ ಸಾಗುವಳಿ ಮತ್ತು ರೈತರ ಹಕ್ಕುಗಳ ರಕ್ಷಣೆಗಾಗಿ ಒತ್ತಾಯಿಸಿ, ಕೆ.ಪಿ.ಆರ್.ಎಸ್ ಹಾಗೂ ಬಗರ್ ಹುಕ್ಕುಂ ಸಾಗುವಳಿದಾರರ ಹೋರಾಟ ಸಮಿತಿಯ ನೇತೃತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net