ಶ್ರೀಕಂಠೇಶ್ವರಸ್ವಾಮಿ ದೇಗುಲದ ಹುಂಡಿಯಲ್ಲಿ 2.40 ಕೋಟಿ ರೂ. ಸಂಗ್ರಹ

IMG-20221216-WA0019
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನದಲ್ಲಿ ಶುಕ್ರವಾರ ಹುಂಡಿ ಕಾಣಿಕೆ ಹಣದ ಎಣಿಕೆ ಕಾರ್ಯ ನಡೆಯಿತು.
Published on

ನಂಜನಗೂಡು: ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಹುಂಡಿಯಲ್ಲಿ 2.40 ಕೋಟಿ ರೂ. ಸಂಗ್ರಹವಾಗಿದೆ.


ಪಟ್ಟಣದ ದಾಸೋಹ ಭವನದಲ್ಲಿ ಶುಕ್ರವಾರ ದೇವಾಲಯದ 26 ಹುಂಡಿಗಳನ್ನು ತೆರೆದು ಎಣಿಕೆ ಕಾರ್ಯ ನಡೆಸಲಾಯಿತು. 2,40,96,139 ರೂ. ನಗದು, 194.8 ಗ್ರಾಂ ಚಿನ್ನ, 5.5 ಕೆ.ಜಿ. ಬೆಳ್ಳಿ ಹಾಗೂ 31 ವಿದೇಶಿ ಕರೆನ್ಸಿಗಳು ದೊರೆತಿವೆ.


ಬ್ಯಾಕ್ ಆಫ್ ಬರೋಡ ಸಿಬ್ಬಂದಿ ಮಾರ್ಗದರ್ಶನದಲ್ಲಿ ನಡೆದ ಹುಂಡಿ ಹಣ ಎಣಿಕೆಯಲ್ಲಿ ದೇವಾಲಯದ ಸಿಬ್ಬಂದಿ ಹಾಗೂ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ನೂರಕ್ಕೂ ಹೆಚ್ಚು ಸದಸ್ಯೆಯರು ಭಾಗಿಯಾಗಿದ್ದರು.


ಉಪವಿಭಾಗಾಧಿಕಾರಿ ಕಮಲಾಬಾಯಿ, ದೇವಾಲಯದ ಇಒ ಜಗದೀಶ್‌ಕುಮಾರ್, ಎಇಒ ವೆಂಕಟೇಶ್‌ಪ್ರಸಾದ್, ಲೆಕ್ಕಾಧಿಕಾರಿ ಗುರುಮಲ್ಲಯ್ಯ, ಬ್ಯಾಂಕ್ ಅಫ್ ಬರೋಡ ವ್ಯವಸ್ಥಾಪಕ ಟಿ.ಕೆ.ನಾಯಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net