ಶ್ರೀ ಮರಗಮ್ಮ ದೇವಿ ಜಾತ್ರಾ ಮಹೋತ್ಸವ

Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಹೊಸಯಲ್ಲಾಪುರ ಛಾವಣಿ ಓಣಿಯಲ್ಲಿರುವ ಶ್ರೀ ಮರಗಮ್ಮ ದೇವಿ ಜಾತ್ರಾ ಮಹೋತ್ಸವ ಜು. 25 ಮತ್ತು 26ರಂದು ಜರುಗಲಿದೆ. 25ರಂದು ದೇವಿಗೆ ಅರಿಷಿಣ ಕುಂಕುಮ ಅಲಂಕಾರ ಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. 26ರ ಬೆಳಗ್ಗೆ 6ಕ್ಕೆ ದೇವಿಗೆ ಮಹಾಭಿಷೇಕ, ಮಂಗಳಾರತಿ ನೆರವೇರಲಿದೆ. ಸಂಜೆ 5ಕ್ಕೆ ಜಾತ್ರಾ ಮಹೋತ್ಸವ ಹಾಗೂ 6.30ಕ್ಕೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ರಾಮಲಿಂಗೇಶ್ವರ ಭಜನಾ ಸಂಘ, ಶ್ರೀ ಮಾರುತಿ ಸೇವಾಭಾಯಿ ಭಜನಾ ಸಂಘದಿAದ ಸವಾಲ್ ಭಜನೆ ಜರುಗಲಿದೆ ಎಂದು ದೇವಸ್ಥಾನ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net