ಶ್ರೀ ಬೀರಲಿಂಗೇಶ್ವರಸ್ವಾಮಿ ತೋಪು ಜಾತ್ರೆ

CTD BEERALINGESHAVRA JATRE---
Published on

ಚಿತ್ರದುರ್ಗ: ಬೀರಲಿಂಗೇಶ್ವರಸ್ವಾಮಿ ತೋಪು ಜಾತ್ರೆಗೆ ಇನ್ನೊಂದು ತಿಂಗಳು ಸಮಯವಿರುವುದರಿಂದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ತಾಳಿಕಟ್ಟೆ ಗ್ರಾಮದಲ್ಲಿ 20 ವರ್ಷಗಳಿಗೊಮ್ಮೆ ನಡೆಯುವ ಬೀರಲಿಂಗೇಶ್ವರಸ್ವಾಮಿ ತೋಪು ಜಾತ್ರೆ ಪ್ರಯುಕ್ತ ಹೊಸದುರ್ಗದ ಕನಕ ಗುರು ಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಸಾನಿಧ್ಯದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ,ಗ್ರಾಮದ ಮುಖ್ಯರಸ್ತೆಯಿಂದ ಊರು ಮಧ್ಯೆ ಇರುವ ದೇವಸ್ಥಾನದವರೆಗೆ ಒಂದು ಕೋಟಿ ರೂ.ಅನುದಾನದೊಂದಿಗೆ ಸಿ.ಸಿ.ರಸ್ತೆ ಮಾಡಿಸುವುದಾಗಿ ಹೇಳಿದರು.

ಕುಡಿಯುವ ನೀರು, ವಿದ್ಯುತ್, ಅಗ್ನಿಶಾಮಕ ವಾಹನ, ಅಂಬುಲೆನ್ಸ್ ವಾಹನದ ವ್ಯವಸ್ಥೆಯಾಗಬೇಕಿದೆ. ಜಾತ್ರೆ ಸುಸೂತ್ರವಾಗಿ ನಡೆಯಲು ಅ ಗತ್ಯ ಅನುಕೂಲಗಳನ್ನು ಮಾಡಿಕೊಡುತ್ತೇನೆ ಎಂದರು. ಮುಂದಿನ ದಿನಗಳಲ್ಲಿ ತಾಳಿಕಟ್ಟೆ ಗ್ರಾಮದ ಎಲ್ಲ ಕಡೆ ಸಿ.ಸಿ.ರಸ್ತೆ ಮಾಡಿಸುತ್ತೇನೆಂದರು.

ಸಾನಿಧ್ಯ ವಹಿಸಿದ್ದ ಕನಕ ಗುರುಪೀಠದ ಈಶ್ವರಾನಂದಪುರಿಸ್ವಾಮೀಜಿ ಮಾತನಾಡಿ,ಒಂದು ವಾರ ನಡೆಯುವ ಬೀರಲಿಂಗೇಶ್ವರಸ್ವಾಮಿ ತೋಪು ಜಾತ್ರೆಯಲ್ಲಿ ಅಂದಾಜು ಎರಡು ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯಪಾಲರು, ಮುಖ್ಯಮಂತ್ರಿ,ಸಚಿವರು,ಮಾಜಿ ಸಚಿವರು, ಶಾಸಕರು ಸಹಿತ ಪಕ್ಷ ಬೇಧವಿಲ್ಲದೆ ಎಲ್ಲ ಗಣ್ಯರನ್ನು ಆಹ್ವಾನಿಸಿ ವಿಜೃಂಭಣೆಯಿಂದ ಆಚರಿಸಲಾಗುವುದು. ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತೋಪು ಜಾತ್ರೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಜಾತ್ರೆಗಾಗಿ ಅನೇಕ ಸಮಿತಿಗಳನ್ನು ರಚಿಸಲಾಗಿದೆ. ಒಂದೊಂದು ಸಮಿತಿಯಲ್ಲಿ ಹತ್ತು ಜನರ ತಂಡವಿದೆ. ಎಲ್ಲರೂ ಸೇರಿ ತಮಗೆ ವಹಿಸಿರುವ ಜವಾಬ್ದಾರಿಯನ್ನರಿತು ಕೆಲಸ ಮಾಡ ಬೇಕು. ತಾಳಿಕಟ್ಟೆಯಲ್ಲಿ ವಿನೂತನ ಸಮುದಾಯ ಭವನ ನಿರ್ಮಾಣವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಲೋಕಾರ್ಪಣೆಗೊಳ್ಳಲಿದೆ. ಚಂದ್ರಪ್ಪ ಅವರಿಗೆ ಹಾಲು ಮತಸ್ಥರ ಮೇಲೆ ಅಪಾರ ಪ್ರೀತಿ,ವಿಶ್ವಾಸ, ನಂಬಿಕೆ ಇದೆ. ಜಾತ್ರೆ ವಿಜೃಂಭಣೆಯಿಂದ ನಡೆದು ಸಂಪನ್ನಗೊಳ್ಳಲಿದೆ ಎಂದರು.

ರೇವಣ್ಣಯ್ಯಒಡೆಯರ್,ಗ್ರಾಪಂ ಅಧ್ಯಕ್ಷ ಬಸವರಾಜಪ್ಪ,ಜಿಪಂಮಾಜಿ ಉಪಾಧ್ಯಕ್ಷ ಗಂಗಾಧರಪ್ಪ, ತಾಪಂ ಮಾಜಿ ಅಧ್ಯಕ್ಷ ಹಳ್ಳಪ್ಪ

ಪುಟ್ಟಣ್ಣ,ನಾಗರಾಜಪ್ಪ, ಚಿಕ್ಕಪ್ಪ, ಗುಮ್ಮಣ್ಣ, ಚಂದ್ರಪ್ಪ, ಚಂದ್ರಮೌಳಿ, ಬಸವರಾಜಪ್ಪ, ಕೆಂಚಪ್ಪ, ಗುಮ್ಮಪ್ಪ, ವೇದಮೂರ್ತಿ, ಕಲ್ಲೇಶಪ್ಪ, ಲೋಕೇಶಪ್ಪ, ಗ್ರಾಮದ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net