ಶ್ರೀ ದತ್ತ ವೆಂಕಟೇಶ್ವರನ ಪಾದಕ್ಕೆ ಸೂರ್ಯ ಕಿರಣ ಸ್ಮರ್ಶ

sun
Published on

ಮೈಸೂರು: ಬೆಂಗಳೂರಿನ ಗವಿ ಗಂಗಾಧರಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷ ಸೂರ್ಯನ ಕಿರಣ ಬೀಳುವುದು ವಾಡಿಕೆ, ಎಲ್ಲೆಲ್ಲಿಂದಲೂ ಭಕ್ತರು ಬಂದು ಅದನ್ನು ಕಣ್ತುಂಬಿಕೊಳ್ಳುತ್ತಾರೆ. ಅದೇ ಮಾದರಿಯಲ್ಲಿ ಮೈಸೂರಿನ ಅವಧೂತ ದತ್ತಪೀಠ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವೆಂಕಟೇಶ್ವರ ದೇವಾಲಯದಲ್ಲೂ ಸೂರ್ಯನ ರಶ್ಮಿ ಬೀಳುತ್ತಿದ್ದು ವಿಶೇಷವಾಗಿದೆ.

ಮುಂದಿನ 2-3 ದಿನ ಬೆಳಗ್ಗೆ ಸುಮಾರು 8 ಗಂಟೆಗೆ ಸ್ವಾಮಿಯ ಪಾದದ ಮೇಲೆ ಸೂರ್ಯನ ರಶ್ಮಿ ಸ್ಪರ್ಶಿಸುತ್ತದೆ. ಈ ಸಂದರ್ಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ದರ್ಶನದ ಜತೆಗೆ ಸೂರ್ಯ ರಶ್ಮಿಯನ್ನು ಕಣ್ತುಂಬಿಕೊಳ್ಳಬಹುದೆಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರತಿವರ್ಷ ಸೂರ್ಯನ ಕಿರಣ ದೇವಾಲಯ ಪ್ರವೇಶಿಸಿದರೂ ವೆಂಕಟೇಶ್ವರನ ಪಾದದ ಮೇಲೆ ಸರಿಯಾಗಿ ಗೋಚರವಾಗುತ್ತಿರಲಿಲ್ಲ. ಇದೇ ಮೊಟ್ಟ ಮೊದಲ ಬಾರಿಗೆ ಸೂರ್ಯದೇವ ಶ್ರೀ ದತ್ತ ವೆಂಕಟೇಶ್ವರನ ಪಾದಸ್ಪರ್ಶ ಮಾಡುತ್ತಿದ್ದಾನೆ. ಎಲ್ಲರೂ ದರ್ಶನ ಮಾಡಬೇಕೆಂದು ಸ್ವಾಮೀಜಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net