ಶ್ರೀ ಚಿದಾನಂದ ನಂಜುಂಡ ಶಿವಯೋಗಿಗಳ ಆರಾಧನಾ ಮಹೋತ್ಸವ

aradhana mahothsava
Published on

ಕಪ್ಪಸೋಗೆ: ಸಮೀಪದ ಶ್ರೀ ಕಂತೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ಶ್ರೀ ಚಿದಾನಂದ ನಂಜುಂಡ ಶಿವಯೋಗಿಗಳ 65ನೇ ವರ್ಷದ ಆರಾಧನಾ ಮಹೋತ್ಸವ ಜರುಗಿತು.

ಮುಂಜಾನೆ 3 ಗಂಟೆಗೆ ಶ್ರೀ ಮಹದೇಶ್ವರ ಹಾಗೂ ಚಿದಾನಂದ ನಂಜುಂಡ ಶಿವಯೋಗಿಂದ್ರ ಶಿವಯೋಗಿಗಳ ಗದ್ದುಗೆಗೆ ಮಹಾ ರುದ್ರಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ ನೆರವೇರಿಸಲಾಯಿತು. ಗದ್ದುಗೆಯನ್ನು ವಿವಿಧ ಹೂಗಳಿಂದ ಅಲಂಕಾರ ಮಾಡಿ ಮಹಾಮಂಗಳಾರತಿ ಬೆಳಗಲಾಯಿತು. ದೇವನೂರು ಮಠದ ಅಧ್ಯಕ್ಷ ಶ್ರೀ ಮಹಾಂತ ಸ್ವಾಮೀಜಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು.

ಬಳಿಕ ಶ್ರೀ ಕಂತೆ ಮಹದೇಶ್ವರ ರಥ, ಕಾರ್ಯ ಗ್ರಾಮದ ಶ್ರೀ ವೀರಭದ್ರೇಶ್ವರ ರಥ ಹಾಗೂ ತರಗನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ರಥವನ್ನು ಕಂಸಾಳೆ, ವೀರಗಾಸೆ, ನಂದಿ ಕಂಬ ಸೇರಿದಂತೆ ವಿವಿಧ ಕಲಾ ತಂಡಗಳ ಸಮೇತ ದೇವಸ್ಥಾನದ ಸುತ್ತ ಮೆರವಣಿಗೆ ಮಾಡಲಾಯಿತು. ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.

ಶ್ರೀ ಕಂತೆ ಮಹದೇಶ್ವರಸ್ವಾಮಿ ಬೆಟ್ಟದ ಮಠಾಧ್ಯಕ್ಷ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಸಿದ್ಧಮಲ್ಲ ಸ್ವಾಮೀಜಿ, ಶ್ರೀ ಇಮ್ಮಡಿ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಮಹೇಶ್ವರ ಸ್ವಾಮೀಜಿ, ಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ, ಶ್ರೀ ಚನ್ನಬಸವ ಸ್ವಾಮೀಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net