ಶ್ರೀ ಚಂಡೇಶ್ವರಿ ದೇವಿ ಜಾತ್ರೆ

18bdvt2 jatre
ಭದ್ರಾವತಿ ಹುಡ್ಕೋ ಕಾಲನಿಯಲ್ಲಿ ಗ್ರಾಮದೇವತೆ ಶ್ರೀ ಚಂಡೇಶ್ವರಿ ದೇವಿಗೆ ಅಲಂಕಾರ ಮಾಡಿರುವುದು. ಉದಯಕುಮಾರ್, ಎಂ.ರಾಜು ಇತರರಿದ್ದರು.
Published on

ಭದ್ರಾವತಿ: ನಗರದ 25ನೇ ವಾರ್ಡ್ ಹುಡ್ಕೋ ಕಾಲನಿಯಲ್ಲಿ ಮಂಗಳವಾರ ಗ್ರಾಮದೇವತೆ ಶ್ರೀ ಚಂಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಭಾನುವಾರ ಆರಂಭಗೊಂಡ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ತೆರೆಬಿದ್ದಿತು.

ನೂರಾರು ಮಹಿಳೆಯರು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿ ದೇವಿಗೆ ತಂಬಿಟ್ಟಿನ ಆರತಿ ಅರ್ಪಿಸಿದರು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಹೋಮ ಹವನಗಳು ಜರುಗಿದವು. ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಜರುಗಿತು. ಭಕ್ತಾದಿಗಳಿಗೆ ಪಾನಕ, ಕೋಸಂಬರಿ, ಪಲಾವ್ ವಿತರಿಸಲಾಯಿತು. ಈ ಬಾರಿ ಉಚಿತ ಕಣ್ಣಿನ ತಪಾಸಣೆ ಹಾಗೂ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ನಗರಸಭಾ ಸದಸ್ಯ ಉದಯಕುಮಾರ್, ಮಾಜಿ ಸದಸ್ಯ ಎಂ.ರಾಜು, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು ಹಾಗೂ ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net