ಶ್ರೀ ಕಲಶೇಶ್ವರ ಮಹಾರಥೋತ್ಸವ ಸಂಭ್ರಮ

9kls1 ratha
ಕಳಸದ ಕಲಶೇಶ್ವರ ಜಾತ್ರಾ ಮಹೋತ್ಸವದಲ್ಲಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
Published on

ಕಳಸ: ಕಲಶೇಶ್ವರ ದೇವಾಲಯದಲ್ಲಿ ಭಾನುವಾರ ಶ್ರೀ ಕಲಶೇಶ್ವರನ ಮಹಾರಥೋತ್ಸವ ಸಂಭ್ರಮದಿಂದ ನಡೆಯಿತು. ಪಟ್ಟಣದ ಸುತ್ತಮುತ್ತಲ ಹೊರನಾಡು, ಬಾಳೆಹೊಳೆ, ಕುದುರೆಮುಖ, ಜಾಂಬ್ಲೆ, ನೆಲ್ಲಿಬೀಡು, ಮರಸಣಿಗೆ, ಹಿರೇಬೈಲು, ಜಾವಳಿ, ಬಸರಿಕಟ್ಟೆ ಮತ್ತಿತರ ಕಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

ಸ್ಥಳೀಯ ಪ್ರವಾಸಿ ತಾಣಗಳಿಗೆ ಹಾಗೂ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರೂ ಜಾತ್ರೆಗೆ ಆಗಮಿಸಿ ದೇವರ ದರ್ಶನ ಪಡೆದರು. ಊರಿನ ತುಂಬ ತಳಿರು ತೋರಣಗಳನ್ನು ಕಟ್ಟಲಾಗಿತ್ತು. ದೇವಾಲಯ ದೀಪಗಳಿಂದ ಶೃಂಗಾರಗೊಂಡಿತ್ತು. ನಾಲ್ಕು ಕೂಡಿಗೆಗಳ ಮೂಲ ನಿವಾಸಿಗಳಾದ ಗೌಡಲು ಜನಾಂಗ ಸಿದ್ಧಪಡಿಸಿದ ಭವ್ಯ ಬ್ರಹ್ಮರಥದಲ್ಲಿ ಶ್ರೀ ಕಲಶೇಶ್ವರ ವಿರಾಜಮಾನ ಆಗುವುದನ್ನು ಕಣ್ತುಂಬಿಸಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದರು.

ಮಧ್ಯಾಹ್ನ 12ಕ್ಕೆ ಸ್ತುತಿ ಪಾಠಕರು ಸ್ತುತಿ ಘೋಷಗಳನ್ನು ಪಠಿಸುತ್ತ ಛತ್ರಿ, ಚಾಮರ, ಮಂಗಳ ವಾದ್ಯಗಳೊಂದಿಗೆ ಹೂವಿನ ಅಲಂಕಾರದಲ್ಲಿ ದೇವರ ಉತ್ಸವ ಮೂರ್ತಿಯನ್ನು ಹೊತ್ತು ತಂದರು. ಕಲಶೇಶ್ವರನ ಉತ್ಸವಮೂರ್ತಿಯನ್ನು ಭವ್ಯ ರಥದಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು. ಭಕ್ತರು ದೇವರಿಗೆ ಲಪುಷ್ಪ ಅರ್ಚನೆ ಮಾಡಿದರು. ಬೆಳೆದ ಕಾಫಿ, ಕಾಳುಮೆಣಸು, ಏಲಕ್ಕಿ ಇತರ ಧಾನ್ಯ ಸಮರ್ಪಿಸಿ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು. ನಂತರ ಅಲಂಕೃತ ಬ್ರಹ್ಮರಥವನ್ನು ಶ್ವೇತ ವಸಧಾರಿಗಳು ಎಳೆದರು.

ರಾತ್ರಿ ಪಟ್ಟಣದ ರಾಜಬೀದಿಗಳಲ್ಲಿ ಗ್ರಾಮ ಪ್ರದಕ್ಷಿಣೆಗೆ ತೆರಳಿದ ದೇವರು ಜಾತಿ ಮತ, ವರ್ಗ ಭೇದ ಇಲ್ಲದೆ ಬ್ರಹ್ಮರಥದಲ್ಲಿಯೇ ಕುಳಿತು ಸರ್ವಜನಾಂಗದಿಂದಲೂ ಸಾಷ್ಟಾಂಗ ನಮಸ್ಕಾರ ಸ್ವೀಕರಿಸಿ ಮನೆ ಬಾಗಿಲಲ್ಲಿ ನೀಡುವ ಹಣ್ಣು, ಕಾಯಿ, ಲ ಪುಷ್ಪಗಳನ್ನು ಸ್ವೀಕರಿಸುತ್ತ ಕಳಸದ ಮಂಜಿನಕಟ್ಟೆಯವರೆಗೆ ಸಾಗಿತು. ರಾಜಬೀದಿಯಲ್ಲಿ ಸಾಗುವಾಗ ಪಟಾಕಿ, ಸಿಡಿಮದ್ದುಗಳು, ಓಲಗ, ವಿವಿಧ ವೇಷಭೂಷಣದ ವಿನೋಧಾವಳಿಗಳು ಕಣ್ಮನ ಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net