ಶ್ರದ್ಧಾ, ಭಕ್ತಿಯಿಂದ ಉಮಾಮಹೇಶ್ವರಿ ವ್ರತ

17-kolar 11 kashi vishwera
ಕೋಲಾರದ ಅಂತರಗಂಗೆ ಬೆಟ್ಟದ ಮೇಲಿನ ಕಾಶಿ ವಿಶ್ವೇಶ್ವರ ದೇಗುಲದಲ್ಲಿ ಸ್ವಾಮಿಗೆ ಅಲಂಕಾರ ಮಾಡಿರುವುದು.
Published on

ಕೋಲಾರ
ಭೀಮನ ಅಮಾವಸ್ಯೆ ಪ್ರಯುಕ್ತ ಬ್ರಾಹ್ಮಣ, ವೈಶ್ಯ ಮತ್ತಿತರ ಸಮುದಾಯದವರು ಸಂಪ್ರದಾಯದಂತೆ ಮನೆಗಳಲ್ಲಿ ಶ್ರದ್ಧಾ, ಭಕ್ತಿಯಿಂದ ಜೋತಿರ್ಭೀಮೇಶ್ವರ, ಉಮಾಮಹೇಶ್ವರಿ ಅಥವಾ ಪತಿಸಂಜೀವಿನಿ ವ್ರತವನ್ನು ಆಚರಿಸಿದರು. ಇನ್ನು ಈಶ್ವರ, ಶಕ್ತಿ ದೇವತೆ, ಗ್ರಾಮದೇವತೆಗಳಿಗೆ ಎಲ್ಲೆಡೆ ವಿಶೇಷ ಪೂಜೆಗಳನ್ನು ಆಯೋಜಿಸಿದ್ದು, ಭಕ್ತರು ತಂಡೋಪತಂಡವಾಗಿ ದೇವಾಲಯಗಳಿಗೆ ಭೇಟಿ ನೀಡಿ ವಿವಿಧ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು.

ಕೋಲಾರದ ಶ್ರೀಕೋಲಾರಮ್ಮ, ಶ್ರೀಸೋಮೇಶ್ವರ, ಅಂತರಗಂಗೆ ಬೆಟ್ಟದ ಕಾಶಿವಿಶ್ವೇಶ್ವರ, ವಕ್ಕಲೇರಿ ಮಾರ್ಕಂಡೇಶ್ವರ, ಕುರುಡುಮಲೆ ವಿಘ್ನೇಶ್ವರ, ಕಮ್ಮಸಂದ್ರದ ಕೋಟಿಲಿಂಗೇಶ್ವರ, ಮಾಲೂರಿನ ಮಾರಿಕಾಂಬೆ ಸೇರಿ ನಾನಾ ದೇವಾಲಯಗಳಿಗೆ ಜನಸಾಗರ ಹರಿದುಬಂದಿತ್ತು. ಚಿಂತಾಮಣಿ ತಾಲೂಕು ಕೈವಾರದಲ್ಲಿ ಭೀಮಲಿಂಗೇಶ್ವರ ಮತ್ತು ತಮಿಳುನಾಡಿನ ಓಂಶಕ್ತಿ ದೇವಾಲಯಕ್ಕೂ ವಿವಿಧೆಡೆಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ತೆರಳಿದ್ದರು.
ಶಿವನ ದೇವಾಲಯಗಳಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಂಡಿದ್ದು, ರುದ್ರಾಭಿಷೇಕ, ವಿಶೇಷ ಅಭಿಷೇಕ, ಸಹಸ್ರನಾಮಾರ್ಚನೆ ನೆರವೇರಿಸಲಾಯಿತು. ದೆವಾಲಯ ಮತ್ತು ದೇವರ ಮೂರ್ತಿಗಳಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಮುಂಜಾನೆಯಿಂದಲೇ ದೇವಾಲಯಗಳಿಗೆ ಭಕ್ತರು ಕುಟುಂಬ ಸಮೇತರಾಗಿ ಬಂದು ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಪ್ರಮುಖ ದೇಗುಲಗಳಲ್ಲಿ ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತರಿಗೆ ಪ್ರಸಾದವಿನಿಯೋಗ ಏರ್ಪಡಿಸಲಾಗಿತ್ತು.
ಏನಿದು ವ್ರತ:
ಭೀಮನ ಅಮಾವಾಸ್ಯೆಯಂದು ಬ್ರಾಹ್ಮಣ, ವೈಶ್ಯ ಮತ್ತಿತರ ಸಮುದಾಯದವರ ಮನೆಗಳಲ್ಲಿ ಉಮಾಮಹೇಶ್ವರಿ ಅಥವಾ ಪತಿಸಂಜೀವಿನಿ ವ್ರತ ಆಚರಣೆ ಮಾಡಿದ್ದು, ಸುಮಂಗಲಿಯರು ಪತಿಗೆ ಆಯುರಾರೋಗ್ಯ, ದಾರಿದ್ರö್ಯ ದೂರವಾಗಿ ಮಕ್ಕಳ ಭಾಗ್ಯ ಕರುಣಿಸಲಿ ಎಂಬ ಬೇಡಿಕೆಯೊಂದಿಗೆ ಪೂಜೆ ಸಲ್ಲಿಸಿದರೆ, ಹೆಣ್ಣುಮಕ್ಕಳು ಭಾವಿಪತಿ ಸುಸಂಸ್ಕೃತನಾಗಿ, ಆಯುರಾರೋಗ್ಯದಿಂದ ಕೂಡಿರುವವನಾಗಿರಲಿ ಎಂದು ಪ್ರಾರ್ಥಿಸಿದರು. ವ್ರತಾಚರಣೆ ಕಟ್ಟುನಿಟ್ಟಾಗಿದ್ದು, ಹಬ್ಬದೂಟ ತಯಾರಿಸಿ ಎಲ್ಲರೂ ಸಡಗರದಿಂದ ಪಾಲ್ಗೊಂಡಿದ್ದರು. ವ್ರತ ಇಲ್ಲದ ಕೆಲವರೂ ಸಹ ಟಿವಿ, ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೊಳಗಾಗಿ ಕೆಲವು ಮಾರ್ಪಾಡುಗಳೊಂದಿಗೆ ಆಚರಣೆಯಲ್ಲಿ ತೊಡಗಿದ್ದುದು ಕಂಡುಬಂದಿತು.

ಪತಿ ಪರದೈವ ಎಂದು ಭಾವಿಸುವ ನಮ್ಮ ಸಂಪ್ರದಾಯದಲ್ಲಿ ಜೋತಿರ್ಭೀಮೇಶ್ವರ, ಉಮಾಮಹೇಶ್ವರಿ ಅಥವಾ ಪತಿಸಂಜೀವಿನಿ ವ್ರತ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಗುತ್ತದೆ. ಸತಿ, ಪತಿ ಪರಸ್ಪರ ಒಳಿತು ಬಯಸುತ್ತ ಪರಸ್ಪರ ಕಷ್ಟ * ಸುಖದಲ್ಲಿ ಜೊತೆಯಾಗಿ ಸಾಗುವುದಕ್ಕೆ ಇಂತಹ ಆಚರಣೆಗಳು ಸಹಕಾರಿ.- ಡಾ.ಕೆ.ಎಸ್.ಮಂಜುನಾಥ ದೀಕ್ಷಿತ್, ಪ್ರಧಾನ ಅರ್ಚಕರು, ಕಾಶಿವಿಶ್ವೇಶ್ವರ ದೇಗುಲ, ಅಂತರಗಂಗೆ ಬೆಟ್ಟ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net