

ಎಚ್.ಡಿ.ಕೋಟೆ: ಶೋಷಿತ ಸಮಾಜಗಳು ಒಟ್ಟಾಗಿ ರಾಜಕೀಯ ಅಧಿಕಾರ ಹಿಡಿದರೆ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಬಹುದು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಮಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು. ಪಟ್ಟಣದ ವಾಲ್ಮೀಕಿ ಸಮು ದಾಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾಲ್ಮೀಕಿ ಜಾತ್ರಾ ಮಹೋ ತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಶತಮಾನಗಳಿಂದ ಜಾತಿಯ ಕಾರಣಕ್ಕಾಗಿ ಶೋಷಣೆಗೆ ಒಳಗಾಗಿರುವ ಸಮಾಜಗಳು ಒಗ್ಗಟ್ಟಾದರೆ ರಾಜಕೀಯ ಅಧಿಕಾರ ಹಿಡಿಯಲು ಸಾಧ್ಯ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ 2023ರ ಫೆಬ್ರವರಿ 8 ಹಾಗೂ 9ರಂದು ಆಯೋಜಿಸಿರುವ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಸಮುದಾಯದ ಎಲ್ಲರೂ ಆಗಮಿಸ ಬೇಕು ಎಂದರು. ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ರಾಜನಹಳ್ಳಿ ಶ್ರೀ 257 ದಿನ ಧರಣಿ ನಡೆಸಿದ ಫಲವಾಗಿ ರಾಜ್ಯದಲ್ಲಿ ದಲಿತರಿಗೆ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಳವಾಗಿದೆ ಎಂದರು. ಮೇಲ್ವರ್ಗ ದವರು ಮೀಸಲಾತಿಗಾಗಿ ಹೋರಾಟ ನಡೆಸುತ್ತಿ ದ್ದರೂ ಸ್ವಾಮೀಜಿಯೊಬ್ಬರು ಧರಣಿ ನಡೆಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಮೀಸಲಾತಿ ಕೊಡಿಸಿರುವುದು ಅಭಿನಂದನೀಯ ಎಂದರು.
ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಮಾತನಾಡಿ, ಸಮುದಾಯದ ಒಗ್ಗಟ್ಟನ್ನು ಪ್ರದರ್ಶನ ಮಾಡಲು ರಾಜನಹಳ್ಳಿಯಲ್ಲಿ ಆಯೋಜಿಸಿರುವ ವಾಲ್ಮೀಕಿ ಜಾತ್ರೆಗೆ ತಾಲೂಕಿನ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ತಿಳಿಸಿದರು.
ತಾಲೂಕು ನಾಯಕ ಸಂಘದ ಅಧ್ಯಕ್ಷ ಎಂ.ಸಿ.ದೊಡ್ಡನಾಯಕ, ಮಾಜಿ ಅಧ್ಯಕ್ಷ ಶಂಭುಲಿಂಗ ನಾಯಕ, ಗೌರವಾಧ್ಯಕ್ಷ ಮರಿತಿಮ್ಮ ನಾಯಕ, ಉಪಾಧ್ಯಕ್ಷ ಜಯಪ್ರಕಾಶ್ ಚಿಕ್ಕಣ್ಣ, ಕಾರ್ಯದರ್ಶಿ ಕೃಷ್ಣ, ಖಜಾಂಚಿ ಅಂಕನಾಯ್ಕ, ರತ್ನಾಕರ ವಾಲ್ಮೀಕಿ ವೇದಿಕೆ ಅಧ್ಯಕ್ಷ ರಾಜು, ಪುರಸಭಾ ಅಧ್ಯಕ್ಷೆ ಅನಿತಾ ನಿಂಗನಾಯಕ, ಪುರಸಭಾ ಸದಸ್ಯ ಎಚ್.ಸಿ. ನರಸಿಂಹಮೂರ್ತಿ, ಮಿಲ್ ನಾಗರಾಜು, ಪ್ರೇಮ್ ಸಾಗರ್, ಮುದ್ದುಮಲ್ಲಯ್ಯ, ನಾಗನಾಯ್ಕ ನಾಗರಾಜು, ರಾಜನಾಯಕ, ಸಿದ್ದನಾಯ್ಕ, ಸೂರಿ ಇದ್ದರು.