ಶೆಡ್ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ

6 bir 1 gandhi
ಬೀರೂರು ಮಹಾತ್ಮ ಗಾಂಧಿ ವೃತ್ತದಲ್ಲಿ 20 ಲಕ್ಷ ರೂ. ಅನುದಾನದಲ್ಲಿ ಹೂ ಮಾರುಕಟ್ಟೆ ನಿರ್ಮಾಣಕ್ಕೆ ಪುರಸಭೆ ಸದಸ್ಯ ಬಿ.ಕೆ.ಶಶಿಧರ್ ಗುದ್ದಲಿ ಪೂಜೆ ನೆರವೇರಿಸಿದರು. ವಿ.ಎನ್.ಅಶ್ವಿನಿ, ಗಿರೀಶ್, ಸತೀಶ್, ನಾಗರಾಜ್, ಲಕ್ಷ್ಮಣ್, ಕವಿತಾ, ಗಿರೀಶ್, ಹರೀಶ್, ದರ್ಶನ್ ಇದ್ದರು.
Published on

ಬೀರೂರು: ಪಟ್ಟಣದ ಮಹಾತ್ಮ ಗಾಂಧಿ ವೃತ್ತದ ಬಳಿಯಿರುವ ಹೂ ಮಾರುಕಟ್ಟೆಯಲ್ಲಿ ಗುಣಮಟ್ಟದ ಶೆಡ್ ನಿರ್ಮಿಸಿಕೊಡಲು ಶಾಸಕರು 20 ಲಕ್ಷ ರೂ. ಅನುದಾನ ನೀಡಿದ್ದಾರೆ ಎಂದು ಪುರಸಭೆ ಸದಸ್ಯ ಬಿ.ಕೆ.ಶಶಿಧರ್ ತಿಳಿಸಿದರು.

ಮಹಾತ್ಮ ಗಾಂಧಿ ವೃತ್ತದಲ್ಲಿ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹೃದಯ ಭಾಗವಾದ ಮಹಾತ್ಮ ಗಾಂಧಿ ವೃತ್ತದಲ್ಲಿ ವ್ಯವಹಾರ ವಹಿವಾಟು ಉತ್ತಮವಾಗಿ ನಡೆಯುತ್ತಿದೆ. ಇಲ್ಲಿ ಬೀದಿ ವ್ಯಾಪಾರಿಗಳು ತಮಗಿಷ್ಟ ಬಂದ ಹಾಗೆ ಶೀಟ್‌ಗಳನ್ನು ಹಾಕಿಕೊಂಡು ಮಳೆ ಬಿಸಿಲಿನಿಂದ ರಕ್ಷಣೆ ಮಾಡಿಕೊಂಡಿದ್ದರು. ಅದನ್ನು ಕಂಡ ಶಾಸಕ ಕೆ.ಎಸ್.ಆನಂದ್ ಅವರು ಗಾಳಿ ಹಾಗೂ ಮಳೆಯಿಂದ ರಕ್ಷಣೆ ಮಾಡಲು ವಿಶೇಷ ಅನುದಾನದಲ್ಲಿ ಹಣ ಬಿಡುಗಡೆ ಮಾಡಿದ್ದಾರೆ. ಕೆಆರ್‌ಐಡಿಎಲ್ ಕಾಮಗಾರಿ ಆರಂಭಿಸಲಿದ್ದು ಗುಣಮಟ್ಟದ ಕಾಮಗಾರಿ ಮಾಡಬೇಕೆಂದು ಇಂಜಿನಿಯರ್‌ಗೆ ತಿಳಿಸಿದರು.

ಈ ವಿಷಯವಾಗಿ ಪ್ರತಿಕ್ರಿಯಿಸಿದ ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಮೋಹನ್, ಪುರಸಭೆ ವ್ಯಾಪ್ತಿಯಲ್ಲಿ ನಡೆದ ಗುದ್ದಲಿ ಪೂಜೆ ಕಾರ್ಯಕ್ರಮದ ಬಗ್ಗೆ ನಮಗೆ ಯಾರೂ ಕೂಡ ಮಾಹಿತಿ ನೀಡಿಲ್ಲ. ಮುಖ್ಯಾಧಿಕಾರಿಗಳನ್ನು ವಿಚಾರಿಸಿದಾಗ ನಿಮಗೆ ಹೇಳಬೇಕು ಎನ್ನುವ ನಿಯಮವೇನು ಇಲ್ಲ ಎಂದು ಉಡಾೆ ಉತ್ತರ ನೀಡುತ್ತಾರೆ ಎಂದು ತಿಳಿಸಿದರು.

ಕೆಆರ್‌ಐಡಿಎಲ್ ಎಇಇ ವಿ.ಎನ್.ಅಶ್ವಿನಿ, ಗಿರೀಶ್, ಬೀದಿ ವ್ಯಾಪಾರಿಗಳಾದ ಸತೀಶ್, ನಾಗರಾಜ್, ಲಕ್ಷ್ಮಣ್, ಕವಿತಾ, ಗಿರೀಶ್, ಹರೀಶ್, ದರ್ಶನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net