ಶುದ್ಧ ನೀರು ಕುಡಿದಲ್ಲಿ ಆರೋಗ್ಯ

water abiyana
ಮೆಣಸೆ ಗ್ರಾಪಂನಲ್ಲಿ ಕಲುಷಿತವಾಗದಿರಲಿ ನಮ್ಮ ಜಲ, ಉಳಿಸಿ ಮನುಕುಲ ಅಭಿಯಾನ ನಡೆಯಿತು. ಸಂಧ್ಯಾ ಮರಿಯಪ್ಪ, ರಾಜಣ್ಣ, ಮಂಜುನಾಥ್, ಆಶೋಕ್, ಬಿಂದು ಇದ್ದರು.
Published on

ಶೃಂಗೇರಿ: ಮಾನವನಿಗೆ ಪ್ರಸ್ತುತ ಆರೋಗ್ಯ ಸಂಪತ್ತು ಪ್ರಮುಖವಾಗಿದೆ. ಪ್ರತಿನಿತ್ಯ ಶುದ್ಧ ನೀರನ್ನು ಕುಡಿದಾಗ ಮಾತ್ರ ಆನಾರೋಗ್ಯದಿಂದ ವಿಮುಕ್ತರಾಗಲು ಸಾಧ್ಯ ಎಂದು ಪಿಡಿಒ ನಾಗಭೂಷಣ್ ಹೇಳಿದರು.
ಜಿಪಂ, ತಾಪಂ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಯೋಗದಲ್ಲಿ ಮೆಣಸೆ ಗ್ರಾಪಂನಲ್ಲಿ ಶುಕ್ರವಾರ ಕಲುಷಿತವಾಗದಿರಲಿ ನಮ್ಮ ಜಲ, ಉಳಿಸಿ ಮನುಕುಲ ಅಭಿಯಾನದಲ್ಲಿ ಮಾತನಾಡಿ, ಜಲಮೂಲಗಳನ್ನು ಸ್ವಚ್ಛಗೊಳಿಸುವುದು, ಚರಂಡಿ ನೀರು ಕುಡಿಯುವ ನೀರಿಗೆ ಸೇರದಂತೆ ಹೆಚ್ಚಿನ ಗಮನ ಹರಿಸುವುದು ಅಭಿಯಾನದ ಮೂಲ ಉದ್ದೇಶ ಎಂದರು.
ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ಅಭಿಯಾನಕ್ಕೆ ಚಾಲನೆ ನೀಡಿದರು. ಜಾಥಾ ಮೆಣಸೆ ಸರ್ಕಾರಿ ಶಾಲೆಯಿಂದ ಗ್ರಾಪಂವರೆಗೆ ನೆರವೇರಿತು. ಸದಸ್ಯರಾದ ರಾಜಣ್ಣ, ಮಂಜುನಾಥ್, ಆಶೋಕ್, ಜಿಪಂ ಅಭಿಯಂತರ ಪ್ರಶಾಂತ್, ಗ್ರಾಮೀಣ ಆರೋಗ್ಯಾಧಿಕಾರಿ ಶಿವಾನಂದ್, ಜಲಜೀವನ್ ಇಲಾಖೆಯ ನಿರ್ವಾಹಕಿ ಬಿಂದು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net