ಶುಕ್ಲಯಜುರ್ವೇದ ಸಮಗ್ರ ಪಾರಾಯಣದ ಶುಭಾರಂಭವಿಶ್ವದ ಒಳಿತಿಗಾಗಿ ಕಾರ್ಯಕ್ರಮ/ವಾಸುದೇವಮೂರ್ತಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ನಗರದ ಬ್ರಾಹ್ಮಣ ಸಂಘ ಮತ್ತು ಅಂಗ ಸಂಸ್ಥೆ ಶ್ರೀವೇದವ್ಯಾಸವೇದಸಂಸ್ಕöÈತಪಾಠಶಾಲೆಯ ಸಹಯೋಗದಲ್ಲಿ ಪಿ.ಸಿ.ಬಡಾವಣೆಯ ಶ್ರೀಗಾಯತ್ರಿ ಪ್ರಾರ್ಥನಾ ಮಂದಿರದಲ್ಲಿ ಬುಧವಾರದಿಂದ ಶುಕ್ಲಯಜುರ್ವೇದ ಸಮಗ್ರ ಪಾರಾಯಣ ಪ್ರಾರಂಭಗೊAಡಿತ್ತು.

ಚಿಕ್ಕಮಗಳೂರು ಜಿಲ್ಲೆ ಸೋಮಪುರದ ಶ್ರೀದತ್ತಾಶ್ರಮ ಸ್ಥಾಪಕರಾದ ವೇದಬ್ರಹ್ಮ ಸೋ.ತಿ. ನಾಗರಾಜರ ಅಧ್ಯಕ್ಷತೆಯಲ್ಲಿ ಸ್ಥಾಪನೆಗೊಂಡ ವೇದ ಪಾರಾಯಣ ಪ್ರತಿಷ್ಠಾನ, ರಾಜದಾದ್ಯಂತ ಈಗಾಗಲೇ ಹದಿನೇಳು ಜಿಲ್ಲೆಗಳಲ್ಲಿ ಪ್ರತಿ ವಿಪ್ರರ ಮನೆ ಅಥವಾ ಬ್ರಾಹ್ಮಣ ಸಂಘಗಳಲ್ಲಿ ಸ್ವಶಾಖೆಯ ಪೂರ್ಣ ವೇದ ಪಾರಾಯಣ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಇದರ ಅಂಗವಾಗಿ ನಗರದ ಗಾಯತ್ರಿ ಮಂದಿರದಲ್ಲಿ ಪಾರಾಯಣ ಇಂದು ಆರಂಭಗೊAಡಿತು.

ವೇದಬ್ರಹ್ಮ ರಾಘವೇಂದ್ರ ಆಚಾರ್ ಮತ್ತು ವೇದಬ್ರಹ್ಮ ಅಶೋಕ್ ಶರ್ಮರ ಅಧ್ವರ್ಯುವಿನಲ್ಲಿ ಬೆಳಗ್ಗೆ ೯.೦೦ ರಿಂದ ೧೨.೦೦ ಮತ್ತು ಸಂಜೆ ೪.೩೦ ರಿಂದ ೭.೩೦ ರ ವರೆಗೆ ಶುಕ್ಲಯಜುರ್ವೇದ ಸಮಗ್ರ ಪಾರಾಯಣ ಐದು ದಿನಗಳ ಕಾಲ ನಡೆಯಲಿದೆ.

ಬ್ರಾಹ್ಮಣ ಸಂಘದ ಅಧ್ಯಕ್ಷ ಬಿ.ಎನ್.ವಾಸುದೇವಮೂರ್ತಿ ಸಮಗ್ರ ಪರಾಯಣಕ್ಕೆ ಚಾಲನೆ ನೀಡಿ ಮಾತನಾಡಿ, ವೇದಗಳ ಪಾರಾಯಣವನ್ನು ಆಲಿಸುವುದರಿಂದ ಪಾಪಗಳು ನಶಿಸಿ, ಚಿತ್ತಶಾಂತಿ ಉಂಟಾಗುತ್ತದೆ. ಸದರಿ ಕಾರ್ಯಕ್ರಮದಲ್ಲಿ ವಿಪ್ರಬಾಂಧವರು ತಪ್ಪದೇ ಭಾಗವಹಿಸಿ ವೇದನಾದವನ್ನು ಆಲಿಸಬೇಕೆಂದು ವಿನಂತಿಸಿದರು.

ಕೋಲಾರ ಬ್ರಾಹ್ಮಣ ಸಂಘ, ಶ್ರೀಯಾಜ್ಞವಲ್ಕ÷್ಯ ಸೇವಾ ಸಮಿತಿ, ಶ್ರೀಕಣ್ವ ಸೇವಾ ಪ್ರತಿಷ್ಠಾನದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಚಿತ್ರ ೦೪ ಕೆ.ಎಲ್.ಆರ್. ೦೩ : ಕೋಲಾರದ ಬ್ರಾಹ್ಮಣ ಸಂಘ ಮತ್ತು ಅಂಗ ಸಂಸ್ಥೆ ಶ್ರೀವೇದವ್ಯಾಸವೇದ ಸಂಸ್ಕöÈತ ಪಾಠಶಾಲೆಯ ಸಹಯೋಗದಲ್ಲಿ ಪಿ.ಸಿ.ಬಡಾವಣೆಯ ಶ್ರೀಗಾಯತ್ರಿ ಪ್ರಾರ್ಥನಾ ಮಂದಿರದಲ್ಲಿ ಇಂದಿನಿAದ ಶುಕ್ಲಯಜುರ್ವೇದ ಸಮಗ್ರ ಪಾರಾಯಣ ಪ್ರಾರಂಭವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net