

ಶಿವಮೊಗ್ಗ: ನಗರದ ಗಾಂಧಿ ಬಜಾರ್‌ನ ಅಂಗಡಿಯೊಂದರ ಮೇಲೆ ಸೋಮವಾರ ಸಂಜೆ ದಾಳಿ ನಡೆಸಿದ ಮಹಾನಗರ ಪಾಲಿಕೆ ಅಧಿಕಾರಿಗಳು ಬರೋಬ್ಬರಿ 4 ಕ್ವಿಂಟಲ್‌ಗೂ ಅಧಿಕ ಪ್ಲಾಸ್ಟಿಕ್ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಗಾಂಧಿಬಜಾರ್‌ನ ಚಾರ್ಭುಜಾ ಟ್ರೇಡರ್ಸ್ ಅಂಗಡಿ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಾಲಿಕೆ ಪರಿಸರ ಅಭಿಯಂತರ ಕೆ.ಟಿ.ರಾಘವೇಂದ್ರ, ಆರೋಗ್ಯ ನಿರೀಕ್ಷರಾದ ವಿಜಯ್‌ಕುಮಾರ್, ಶೋಭಾ, ಶಿವಮೂರ್ತಪ್ಪ ಲಕ್ಕಣ್ಣವರ್ ಹಾಗೂ ರವಿ ನೇತೃತ್ವದಲ್ಲಿ ದಾಳಿ ನಡೆಸಿ ಪ್ಲಾಸ್ಟಿಕ್ ಲೋಟ, ಕವರ್‌ಗಳನ್ನು ಜಪ್ತಿ ಮಾಡಿದ್ದಾರೆ.
ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ನಿಷೇಧಿಸಿದ್ದರೂ ಕದ್ದುಮುಚ್ಚಿ ಪ್ಲಾಸ್ಟಿಕ್ ಬಳಕೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ನಡುವೆ ಪದೇ ಪದೇ ದಾಳಿ ನಡೆಸ ಪ್ಲಾಸ್ಟಿಕ್ ಜಪ್ತಿ ಮಾಡಲಾಗುತ್ತಿದೆ.