ಶಿಕ್ಷಣದೊಂದಿಗೆ ಸಂಸ್ಕಾರವೂ ಮುಖ್ಯ

5kls1 akshara
ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲಾಯಿತು.
Published on

ಕಳಸ: ಸಂಸ್ಕಾರ, ಸಂಸ್ಕೃತಿಯ ಜತೆಗೆ ಒಳ್ಳೆಯ ವಿದ್ಯಾಭ್ಯಾಸ ನೀಡುತ್ತಿರುವ ಶಾಲೆಗೆ ಮಕ್ಕಳನ್ನು ಸೇರಿಸಿದರೆ ಅವರು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಟ್ರಸ್ಟಿ ರಾಜಲಕ್ಷ್ಮೀ ಬಿ. ಜೋಷಿ ಹೇಳಿದರು.

ಕಳಸ ಪ್ರಬೋಧಿನಿ ವಿದ್ಯಾಕೇಂದ್ರದಲ್ಲಿ ಆಂಗ್ಲಮಾಧ್ಯಮ ಶಿಕ್ಷಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ಭಾಷೆಯ ಜತೆಗೆ ಆಂಗ್ಲ ಮಾಧ್ಯಮ ಅತ್ಯವಶ್ಯಕ. ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಆಂಗ್ಲ ಭಾಷೆ ಕಲಿಸಲೇಬೇಕಾದ ಅನಿವಾರ್ಯತೆ ಇದೆ. ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭವಾಗುತ್ತಿದೆ. ಶಿಕ್ಷಣ ಆಂಗ್ಲ ಮಾಧ್ಯಮವಾದರೂ, ಇಲ್ಲಿ ನೀಡುತ್ತಿರುವ ಸಂಸ್ಕಾರ, ಸಂಸ್ಕೃತಿಯುತ ಶಿಕ್ಷಣಕ್ಕೆ ಕೊರತೆ ಆಗಲಾರದು ಎಂದು ಹೇಳಿದರು.

ಐಕ್ಯೂವಿಯಾ ಸಂಸ್ಥೆ ಸಿಆರ್‌ಒ ವಿದ್ಯಾ ಮಾತನಾಡಿ, ಇಂಗ್ಲಿಷ್ ವಿಶ್ವ ಭಾಷೆಯಾಗಿದೆ. ಇಂದಿನ ಸನ್ನಿವೇಶದಲ್ಲಿ ಕನ್ನಡದ ಜತೆ ವಿಶ್ವ ಭಾಷೆಯ ಜ್ಞಾನವನ್ನು ಇಟ್ಟುಕೊಳ್ಳುವುದು ನಮ್ಮಭವಿಷ್ಯಕ್ಕೆ ಅವಶ್ಯವಾಗಿದೆ. ಮಕ್ಕಳಿಗೆ ಅಂಕಗಳ ಜತೆಗೆ ಸಂಸ್ಕಾರ, ಸಂಸ್ಕೃತಿಯೂ ಅವಶ್ಯಕ ಎಂದು ಹೇಳಿದರು.

ಹೊಸದಾಗಿ ಸೇರ್ಪಡೆಯಾದ ಮಕ್ಕಳನ್ನು ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು. ನಂತರ ಸರಸ್ವತಿಗೆ ಪೂಜೆ ಸಲ್ಲಿಸಿ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲಾಯಿತು.

ಶಾಲಾ ಆಡಳಿತ ಸಮಿತಿ ಅಧ್ಯಕ್ಷ ವೆಂಕಟಸುಬ್ಬಯ್ಯ, ಉಪಾಧ್ಯಕ್ಷ ಗಜೇಂದ್ರ ಗೊರಸುಗುಡಿಗೆ, ಕಾರ್ಯದರ್ಶಿ ರಾಘವೇಂದ್ರ ಭಟ್, ಭಗೀರಥ, ಶಾಲಾ ಮುಖ್ಯಶಿಕ್ಷಕ ಆನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net