

ಯಾದಗಿರಿ: ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಥರ್ಿಗಳು ಪ್ರಬುದ್ಧಾವಸ್ಥೆಯಲ್ಲಿ ಇರುತ್ತಾರೆ. ಅದರ ಜತೆಗೆ ಸಂಸ್ಕಾರವಂತರಾಗುವದು ಅತ್ಯಂತ ಮುಖ್ಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕಿ ಉತ್ತರಾದೇವಿ ಮಠಪತಿ ಹೇಳಿದರು.
ಬುಧುವಾರ ನಗರದ ಸಕರ್ಾರಿ ಪದವಿ ಮಹಾವಿದ್ಯಾಲಯದ ಲಿಂ.ವಿಶ್ವನಾಥರಡ್ಡಿ ಮುದ್ನಾಳ ಸಭಾಂಗಣದಲ್ಲಿ 2022-23 ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್, ರೋವರ್ಸ್ ಹಾಗೂ ರೇಂಜರ್ಸ್, ಮತ್ತು ಯುವ ರೆಡ್ಕ್ರಾಸ್ ಚಟುವಟಿಕೆಗಳ ಮತ್ತು ಸ್ನಾತಕ ಹಾಗೂ ಸ್ನಾತಕೋತ್ತರ ಪ್ರಥಮ ಸೆಮಿಸ್ಟರ್ ವಿದ್ಯಾಥರ್ಿ ವಿದ್ಯಾಥರ್ಿನಿಯರಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಒಂದು ಸಸಿಗೆ ನಾವು ನೀರೆರೆದರೆ ಅದು ಪಲ್ಲಟಿಸಿ, ಟಸಿಲೊಡೆದು ಬೆಳೆಯುತ್ತಾ ಹೋಗುತ್ತದೆ. ಸಸಿ ಇದ್ದದ್ದು ಬೆಳೆದು ಹೆಮ್ಮರವಾಗಿ ಉತ್ತಮ ಗಾಳಿ, ನೆರಳು ಕೊಡುವುದರ ಜತೆಗೆ ಹಣ್ಣು-ಹಂಪಲಗಳನ್ನು ನೀಡುತ್ತದೆ. ಹಾಗೆಯೇ ವಿದ್ಯಾಥರ್ಿಗಳು ಕೂಡ ಉತ್ತಮವಾದ ಭವಿಷ್ಯ ನಿಮರ್ಿಸಿಕೊಂಡು ಸಮಾಜಕ್ಕೆ ಉಪಕಾರವಾಗುವಂತೆ ಬಾಳಿ ಬದುಕಬೇಕೆಂದು ಸಲಹೆ ನೀಡಿದರು.
ಡಿವೈಎಸ್ಪಿ ಬಸವೇಶ್ವರ ಹೀರಾ ಮಾತನಾಡಿ, ವಿದ್ಯಾಥರ್ಿಗಳು ತಮ್ಮ ಆಸಕ್ತ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸಿ, ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ಕ್ಷಣಿಕವಾದ ಭೋಗಲಾಲಸಗಳಿಗೆ ಒಳಗಾಗಬಾರದು. ತಮ್ಮ ಜೀವನದಲ್ಲಿ ಇಟ್ಟುಕೊಂಡ ಗುರಿಯನ್ನು ಮುಟ್ಟುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಪ್ರಯತ್ನಕ್ಕೆ ಖಂಡಿತವಾಗಿಯೂ ಫಲ ಪ್ರಾಪ್ತಿಯಾಗುತ್ತದೆ ಎಂಬುದಕ್ಕೆ ತಾವು ಪೋಲಿಸ್ ಅಕಾರಿಯಾಗಿರುವದೆ ಸಾಕ್ಷಿ ಎಂದರು.
ಕೆಜಿಸಿಟಿಎ ರಾಯಚೂರು ವಲಯ ಅಧ್ಯಕ್ಷ ಡಾ.ಸಂಗಪ್ಪ ರಾಂಪುರೆ ಮಾತನಾಡಿ, ಸ್ವಧರ್ಾತ್ಮಕ ಜಗತ್ತಿನಲ್ಲಿ ವಿದ್ಯಾಥರ್ಿಗಳು ತಮ್ಮ ಭವಿಷ್ಯತನ್ನು ರೂಪಿಸಿಕೊಳ್ಳಬೇಕಾದರೆ, ಬಹಳ ಪರಿಶ್ರಮ ವಹಿಸಿಬೇಕು.ಅಂದಾಗ ಮಾತ್ರ ಭವಿಷ್ಯತ್ತಿನ ಬದುಕು ಸುಂದರವಾಗುತ್ತದೆ ಎಂದು ಹೇಳಿದರು.
ಪ್ರಾಚಾರ್ಯ ಡಾ.ಸುಭಾಶ್ಚಂದ್ರ ಕೌಲಗಿ, ಪದವಿ ಕಾಲೇಜು ಸಕರ್ಾರಿ ಆಗಿದ್ದರೂ ಕೂಡ ಉತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು, ಇಲ್ಲಿ ಕಲಿತ ವಿದ್ಯಾಥರ್ಿಗಳು ಉತ್ತಮ ನಾಗರಿಕರಾಗಿ ಹೊರ ಹೊಮ್ಮತ್ತಿದ್ದಾರೆ ಎಂದರು.
ನ್ಯಾಕ್ ಸಂಯೋಜಕ ಡಾ.ದೇವಿಂದ್ರಪ್ಪ ಹಳಿಮನಿ, ಶಹನಾಜ ಬೇಗಂ, ಪ್ರಹ್ಲಾದ ಜೋಶಿ, ಮಂಜುನಾಥ, ಡಾ. ಮೋನಯ್ಯ ಕಲಾಲ, ಪಂಪಾಪತಿರೆಡ್ಡಿ ಪಾಟೀಲ್, ಡಾ.ಚಂದ್ರಶೇಖರ ಕೊಂಕಲ್, ಡಾ.ಜೆಟ್ಟಪ್ಪ ದೋರನಳ್ಳಿ, ಡಾ.ಅಶೋಕರೆಡ್ಡಿ ಪಾಟೀಲ್, ಇದ್ದರು.
ಸಂತೋಷ ದಿಬ್ಬಾ ಪ್ರಾಥರ್ಿಸಿದರು. ಡಾ.ಉಮೇಶ ಸ್ವಾಗತಿಸಿದರು. ಇದೇ ವೇಳೆ ಪಿಎಚ್.ಡಿ ಪದವಿ ಪಡೆದ ಡಾ.ರಾಘವೇಂದ್ರ ಬಂಡಿಮನಿರನ್ನು ವಿಶೇಷವಾಗಿ ಸತ್ಕರಿಸಲಾಯಿತು. ಡಾ.ಸಿದ್ದರಾಜರೆಡ್ಡಿ ನಿರೂಪಿಸಿದರು.