ಶಿಕ್ಷಣ ಜತೆ ಸಂಸ್ಕೃತಿ ಮೈಗೂಡಿಸಿಕೊಳ್ಳಿ

yydg3
ಭಾರತೀಯ ಸಂಸ್ಕೃತಿ ಉತ್ಸವ ನಿಮಿತ್ತ ವಡಗೇರಾದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಶ್ರೀ ನಿತ್ಯಾನಂದ ಸ್ವಾಮೀಜಿ, ತಹಸೀಲ್ದಾರ್ ಶ್ರೀನಿವಾಸ ಚಾಪೆಲ್, ಜಗನ್ನಾಥರೆಡ್ಡಿ, ಡಾ.ಮರೆಪ್ಪ ನಾಟೇಕಾರ, ಸಿದ್ದಣ್ಣಗೌಡ ಕಾಡಂನೋರ್, ರಂಗಮ್ಮ ಹುಲಿ ಇತರರಿದ್ದರು.
Published on

ವಡಗೇರಾ: ಮಕ್ಕಳು ಶಿಕ್ಷಣ ಜತೆ ಸಂಸ್ಕೃತಿಯನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಕೋನಹಳ್ಳಿ ಮಠದ ಶ್ರೀ ನಿತ್ಯಾನಂದ ಸ್ವಾಮೀಜಿ ಹೇಳಿದರು.
ಭಾರತೀಯ ಸಂಸ್ಕೃತಿ ಉತ್ಸವ ನಿಮಿತ್ತ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟ ಇತರ ಸ್ಪರ್ಧೆಗಳಿಗೆ ಚಾಲನೆ ನೀಡಿದ ಅವರು, ಶಿಕ್ಷಣ ಅತ್ಯಂತ ಮಹತ್ವ ಪಡೆದಿದೆ. ಇದರೊಂದಿಗೆ ಸಂಸ್ಕೃತಿಯೂ ಅತಿ ಅಗತ್ಯ ಎಂಬುದನ್ನು ಅರಿತು ಗುರು-ಹಿರಿಯರು, ಪಾಲಕರ ಮಾರ್ಗದರ್ಶನದಲ್ಲಿ ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕು ಎಂದು ಹಿತವಚನ ಹೇಳಿದರು.

ತಹಸೀಲ್ದಾರ್ ಶ್ರೀನಿವಾಸ ಚಾಪೆಲ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಪ್ರತಿಭೆಗಳನ್ನು ಗುರುತಿಸಲು ವಿಕಾಸ ಅಕಾಡೆಮಿ ಏರ್ಪಡಿಸಿರುವ ಸ್ಪರ್ಧೆ ಸಹಕಾರಿಯಾಗಲಿದೆ. ಸೋಲುತ್ತೇವೆ ಎಂಬ ಕೀಳರಿಮೆ ಬಿಟ್ಟು ಮನೋಸ್ಥೆÊರ್ಯದಿಂದ ಪ್ರತಿಯೊಬ ವಿದ್ಯಾರ್ಥಿ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರತಿಭೆ ಪ್ರದರ್ಶಿಸಬೇಕು ಎಂದು ಕಿವಿಮಾತು ಹೇಳಿದರು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜಗನ್ನಾಥರೆಡ್ಡಿ ಮಾತನಾಡಿ, ಮಕ್ಕಳು ಮೊಬೈಲ್, ಹೊರಗಿನ ತಿನಿಸುಗಳಿಂದ ದೂರವಿದ್ದು ಉತ್ತಮ ವಿದ್ಯಾಭ್ಯಾಸ ಮಾಡುವುದರ ಜತೆಗೆ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ ಆರೋಗ್ಯ ಕಾಪಾಡಿಕೋಳ್ಳಬೇಕು ಎಂದರು.

ಡಾ.ಮರೆಪ್ಪ ನಾಟೇಕಾರ ಪ್ರಾಸ್ತಾವಿಕ ಮಾತನಾಡಿದರು. ಪ್ರಮುಖರಾದ ಸಿದ್ದಣ್ಣಗೌಡ ಕಾಡಂನೋರ್, ರಂಗಮ್ಮ ಹುಲಿ, ಬಸವರಾಜ ಸೊನ್ನದ, ಮಲ್ಲಪ್ಪ ಇಟಗಿ, ಬಸವರಾಜ ನೀಲಹಳ್ಳಿ, ಸೂಗರೆಡ್ಡಿಗೌಡ ಪೋಪಾ, ಲಿಂಗರಾಜ ಕೊಡಂಗಲ್, ವಿಶ್ವನಾಥರಡ್ಡಿ ಬಸರೆಡ್ಡಿ, ಸಾಬಣ್ಣ ಕೊಪ್ಪೂರ, ನಾಗಪ್ಪ ಬಸವಂತಪುರ, ಮಹ್ಮದ್ ಖುರೇಷಿ, ಅಯ್ಯಪ್ಪ, ಸಿದ್ದಪ್ಪ ತಮ್ಮಣ್ಣೋರ್, ನಾಗಪ್ಪ ಬೀರನಕಲ್, ಶರಣು ಕುರಿ, ರಾಜು ಬಸವನಗರ, ಚೆನ್ನಪ್ಪ ಬೀರನಕಲ್ ತಾಂಡಾ, ಅಬ್ದಲ್ ಖತಾಲಿ, ಮೈನೋದ್ದಿನ್ ದೇವದುರ್ಗ, ಶಿವಪ್ಪ ಡರ‍್ರೆ, ಸುದರ್ಶನ ನೀಲಹಳ್ಳಿ, ಶಿವಕುಮಾರ ಕೊಂಕಲ್ ಇತರರಿದ್ದರು. ಶಿಕ್ಷಕ ಸಾಹೇಬರೆಡ್ಡಿ ಇಟಗಿ ನಿರೂಪಣೆ ಮಾಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net