ಶಿಕ್ಷಕಿ ರಾಧಮ್ಮ ರವರನ್ನು ದೊಡ್ಡ ಶಿವಾರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮುಂದುವರೆಸಬೇಕು / ಕಿರುಕುಳ ನೀಡುತ್ತಿರುವ ಸವರ್ಣೀಯ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ದಲಿತ ಸಂಘಟನೆಗಳಿAದ ಒತ್ತಾಯ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಮಾಲೂರು ತಾಲೂಕಿನ ದೊಡ್ಡಶಿವಾರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಗ್ಲೀಷ್ ಶಿಕ್ಷಕಿ ಸಿ.ವೈ.ರಾಧಮ್ಮ ರವರನ್ನು ಅದೇ ಶಾಲೆಯಲ್ಲೇ ಮುಂದುವರೆಸಬೇಕು ಹಾಗೂ ಅವರಿಗೆ ಕಿರುಕುಳ ನೀಡುತ್ತಿದ್ದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಮಂಗಳವಾರ ಜಿಲ್ಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ ಮುಂಭಾಗ ಧರಣಿ ನಡೆಸಿದರು.

ಸಿ.ವೈ. ರಾಧಮ್ಮ ದೊಡ್ಡಶಿವಾರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದು, ಅದೇ ಶಾಲೆಯ ಸವರ್ಣೀಯ ಶಿಕ್ಷಕಿಯರಾದ ಮಮತ ಮತ್ತು ಛಾಯಾದೇವಿ ಹಾಗೂ ಮಾಲೂರು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎಸ್.ಚಂದ್ರಕಲಾ ರವರುಗಳು ಅವಾಚ್ಯ ಶಬ್ದಗಳಿಂದ ನಿಂಧಿಸಿ, ಜಾತಿ ನಿಂದನೆ ಮಾಡಿ, ಸವರ್ಣೀಯ ಮಕ್ಕಳನ್ನು ಎತ್ತಿಕಟ್ಟಿ ಪಾಠಪ್ರವಚನ ಮಾಡುವಾಗ ಸಿ.ವೈ.ರಾಧಮ್ಮರವರನ್ನು ಅವಮಾನಿಸುವುದು, ಹಾಗೂ ಕಿರುಕುಳ ಕೊಡುತ್ತಿದ್ದು, ಇವರ ಮೇಲೆ ಸೂಕ್ತ ಕ್ರಮಕೈಗೊಳ್ಳಲು ಅನೇಕ ಬಾರಿ ಮೇಲಾಧಿಕಾರಿಗಳಿಗೆ ದೂರು ನೀಡಿದರೂ ಸಹ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಕರ್ನಾಟಕ ದಲಿತ ನಾಗರೀಕ ಸಮಿತಿಯ ರಾಜ್ಯಾಧ್ಯಕ್ಷ ಪುರಹಳ್ಳಿ ಜಿ.ಯಲ್ಲಪ್ಪ ಆರೋಪಿಸಿದರು.

ಈ ಮೇಲ್ಕಂಡವರನ್ನು ಈ ಕೂಡಲೇ ಅಮಾನತ್ತುಗೊಳಿಸಬೇಕು ಸಿ.ವೈ.ರಾಧಮ್ಮರವರನ್ನು ಮಾಲೂರು ತಾಲ್ಲೂಕಿನ ಆನೇಪುರ ಪ್ರೌಢಶಾಲೆಗೆ ನಿಯೋಜನೆ ಮಾಡಿರುವುದು ಈ ಕೂಡಲೇ ರದ್ದುಗೊಳಿಸಿ ಇವರನ್ನು ದೊಡ್ಡಶಿವಾರ ಗ್ರಾಮ ಪ್ರೌಢಶಾಲೆಯಲ್ಲಿಯೇ ಮುಂದುವರೆಸಬೇಕೆAದು ಒತ್ತಾಯಿಸಿ ಉಪನಿರ್ದೇಶಕ ಕೃಷ್ಣಮೂರ್ತಿಗೆ ಮನವಿ ಸಲ್ಲಿಸಿದರು.

ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಿ.ವೈ.ರಾಧಮ್ಮ (ಆಂಗ್ಲ ಭಾಷಾ ಶಿಕ್ಷಕಿ) ಎಂಬುವವರು ಸುಮಾರು ೧೩ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಪ್ರಾರಂಭದಿAದಲೇ ಅತ್ಯುತ್ತಮ್ಮ ಶಿಕ್ಷಕಿ ಎಂದು ಗುರ್ತಿಸಿಕೊಂಡಿದ್ದು, ಶಾಲೆಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದು, ಯಾವುದೇ ತೊಂದರೆಗಳಿಲ್ಲದೆ ಕಾರ್ಯನಿರ್ವಹಿಸುತ್ತಿದ್ದರು.

ಇತ್ತೀಚೆಗೆ ಎರಡೂವರೆ ವರ್ಷಗಳ ಹಿಂದೆಯಷ್ಟೆ ಇಬ್ಬರು ಸವರ್ಣೀಯ ಶಿಕ್ಷಕಿಯರಾದ ಮಮತ ಮತ್ತು ಛಾಯಾದೇವಿ ಎಂಬುವವರು ಸಿ.ವೈ.ರಾಧಮ್ಮ ಎಂಬುವವರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಕಿರುಕುಳ ನೀಡುತ್ತಿದ್ದು, ಜಾತಿ ರಾಜಕೀಯವನ್ನು ಹುಟ್ಟುಹಾಕಿ ಶಾಲೆಯಲ್ಲಿ ಇವರು ಮಾಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ಮಕ್ಕಳಿಗೆ ಧಮಕಿ ಹಾಕುವುದು, ಇವರು ಶಾಲೆಯಲ್ಲಿ ಪಾಠ ಮಾಡುವಾಗ ಮಕ್ಕಳನ್ನು ಎತ್ತಿಕಟ್ಟಿ ಅಡ್ಡಿಪಡಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ.

ಹಾಗೂ ಮಕ್ಕಳ ಪೋಷಕರೊಂದಿಗೆ ಶಾಮೀಲಾಗಿ ಇವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಶಾಲೆಯ ಬಳಿ ಬಂದು ಗಲಾಟೆ ಮಾಡಿಸುವುದು ಹಾಗೂ ಹಲ್ಲೆ ಮಾಡಿಸಲು ಪ್ರಯತ್ನ ನಡೆಸಿರುವುದು ಸಹ ಕಂಡು ಬಂದಿರುತ್ತದೆ.

ರಾಷ್ಟಿçÃಯ ಹಬ್ಬಗಳಾದ ಸಂವಿಧಾನ ಸಮರ್ಪಣೆಯ ದಿನಾಚರಣೆಯ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಮತ್ತು ಸಾವಿತ್ರಿಬಾಪುಲೆ ಜಯಂತಿಗಳನ್ನು ಶಾಲೆಯಲ್ಲಿ ಆಚರಿಸುವಾಗ ಈ ಶಾಲೆಯ ಸವರ್ಣೀಯ ಶಿಕ್ಷಕಿಯರು ಕಾರ್ಯಕ್ರಮಕ್ಕೆ ಭಾಗವಹಿಸದೆ ಶಾಲೆಯ ಒಂದು ಕೋಣೆಯಲ್ಲಿ ಕುಳಿತು ಕಾಲಹರಣ ಮಾಡಿ, ಡಾ.ಬಿ.ಆರ್.ಅಂಬೇಡ್ಕರ್‌ರವರಿಗೆ ಅವಮಾನ ಮಾಡಿರುತ್ತಾರೆ.

ಈ ವಿಚಾರವನ್ನು ಮೇಲಾಧಿಕಾರಿಗಳಿಗೆ ದೂರು ನೀಡಿದರೂ ಸಹ ಯಾವುದೇ ಕ್ರಮಕೈಗೊಂಡಿರುವುದಿಲ್ಲ ಹಾಗೂ ಆ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿರುವ ಸವರ್ಣೀಯ ಇಬ್ಬರು ವಿದ್ಯಾರ್ಥಿನಿಯರ ಕೈಯಲ್ಲಿ ಒಂದು ಸುಳ್ಳು ದೂರನ್ನು ಮೇಲಾಧಿಕಾರಿಗಳಿಗೆ ಕೊಡಿಸಿ ಆ ದೂರಿನನ್ವಯ ಶಾಲೆಗೆ ಎರಡು ಬಾರಿ ವಿಚಾರಣೆಗೆ ಬಂದು ಸುಳ್ಳು ವರದಿಯನ್ನು ಮಾಡಿಕೊಂಡು ಹೋಗಿ ದಲಿತ ಜಾತಿಗೆ ಸೇರಿದವರಾಗಿರುವ ಒಂದೇ ಒಂದು ಕಾರಣಕ್ಕೆ ಇವರನ್ನು ಮಾಲೂರು ತಾಲ್ಲೂಕು ಆನೇಪುರ ಪ್ರೌಢಶಾಲೆಗೆ ನಿಯೋಜನೆ ಮಾಡಿರುವುದು ಖಂಡನೀಯ ಎಂದು ದೂರಿದರು.

ಈ ಕೂಡಲೇ ಒಬ್ಬ ದಲಿತ ಶಿಕ್ಷಕಿಗೆ ಈ ಮೇಲ್ಕಂಡ ಕಿರುಕುಳಗಳನ್ನು ನೀಡಿ, ಜಾತಿನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಮಕ್ಕಳ ಪೋಷಕರ ಕೈಯಲ್ಲಿ ಹಲ್ಲೆ ಮಾಡಲು ಪ್ರಯತ್ನಿಸಿರುವ ಶಿಕ್ಷಕರಾದ ಮಮತ ಮತ್ತು ಛಾಯಾದೇವಿ ಹಾಗೂ ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಮಾಲೂರು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎಸ್.ಚಂದ್ರಕಲಾ ರನ್ನು ಈ ಕೂಡಲೇ ಅಮಾನತ್ತುಗೊಳಿಸಿ ಸಿ.ವೈ.ರಾಧಮ್ಮರವರ ನಿಯೋಜನೆಯನ್ನು ರದ್ದುಪಡಿಸಿ ದೊಡ್ಡಶಿವಾರ ಪ್ರೌಢಶಾಲೆಯಲ್ಲಿಯೇ ಮುಂದುವರೆಯಲು ಈ ಕೂಡಲೇ ಆದೇಶ ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಗಸAದ್ರ ವಿಜಯ್‌ಕುಮಾರ್, ಮಹಿಳಾ ಒಕ್ಕೂಟದ ಜಿಲ್ಲಾಧ್ಯಕ್ಷೆ ಮಂಜುಳ, ನಾಗನಾಳ ರಮೇಶ್, ಚನ್ನಪ್ಪನಹಳ್ಳಿ ನಾಗರಾಜ್, ಸಾಹಿತಿಗಳಾದ ಕೋಟಿಗಾನಹಳ್ಳಿ ರಾಮಯ್ಯ, ಹೆಬ್ಬಾಳ ವೆಂಕಟೇಶಪ್ಪ, ಐತ್ರಾಸನಹಳ್ಳಿ ವಿ.ಸಂಜೀವಯ್ಯ, ಹಾರೋಹಳ್ಳಿ ರವಿ ಇನ್ನೂ ಮುಂತಾದ ರಾಜ್ಯ ಮತ್ತು ಜಿಲ್ಲೆಯ ಮುಖಂಡರುಗಳು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ಚಿತ್ರ ೦೬ ಕೆ.ಎಲ್.ಆರ್. ೦೪ : ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಮುಂಭಾಗ ದಲಿತ ಸಂಘಟನೆಗಳಿAದ ಪ್ರತಿಭಟನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net