ಶಿಕ್ಷಕರಲ್ಲಿ ಕಡಿಮೆಯಾಗುತ್ತಿರುವ ಓದುವ ಹವ್ಯಾಸ

press
ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಎಚ್.ಪಿ.ಬೆಟ್ಟಸ್ವಾಮಿ ಮಾತನಾಡಿದರು.
Published on

ಸುತ್ತೂರು: ಓದು ಎನ್ನುವುದು ಶಿಕ್ಷಕರ ಸಹಜ ಸ್ವಭಾವವಾಗಬೇಕು. ಅಲ್ಲದೆ ಓದಿನಲ್ಲಿ ಬದ್ಧತೆ ಇದ್ದರೆ ಮಾತ್ರ ಬುದ್ಧನಾಗಲು ಸಾಧ್ಯ ಎಂದು ಮೈಸೂರಿನ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ ಕಾಲೇಜು)ದ ಸಹಾಯಕ ಪ್ರಾಧ್ಯಾಪಕ ಎಚ್.ಪಿ.ಬೆಟ್ಟಸ್ವಾಮಿ ಹೇಳಿದರು.

ಇಲ್ಲಿನ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಓದು ಶಿಕ್ಷಕ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಓದು ಎನ್ನುವುದು ಭಾವ ಸಂಸ್ಕಾರವಾಗಿದ್ದು, ಅದು ಮನುಷ್ಯನ ಭಾವನೆಗಳನ್ನು ಉನ್ನತ ಮಟ್ಟಕ್ಕೇರಿಸುತ್ತದೆ. ಇಂದಿನ ಶಿಕ್ಷಕರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿರುವುದು ವಿಷಾದನೀಯ ಸಂಗತಿ. ಇದೇ ಪರಿಸ್ಥಿತಿ ಮುಂದುವರಿದರೆ ಕನ್ನಡದ ಸಾಹಿತಿಗಳ ಲೇಖಕರ ಹೆಸರನ್ನೂ ಮರೆಯಬಹುದಾದ ಸಂದರ್ಭ ಬರುತ್ತದೆ ಎಂದರು.

ಇಂದಿನ ಯುವ ಜನಾಂಗ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಮಾತಿನಿಂದ ಶಬ್ದಕೋಶ ಉತ್ಪನ್ನಗೊಳ್ಳುವಂತೆ ಓದಿನಿಂದ ಭಾವಕೋಶ ರೂಪುಗೊಳ್ಳುತ್ತದೆ ಎಂದರು.

ಪ್ರಾಂಶುಪಾಲರಾದ ಡಾ.ಎಚ್.ಎಂ.ಮಹೇಶ್ ಮಾತನಾಡಿ, ಶಿಕ್ಷಕರು ಓದುಗರಾಗಬೇಕು. ಓದು ಎಂಬುದು ಸಹಜ ಕ್ರಿಯೆಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಸಹಾಯಕ ಪ್ರಾಧ್ಯಾಪಕರು ಹಾಗೂ ಬಿಇಡಿ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net