ವಿಜಯವಾಣಿ ಸುದ್ದಿಜಾಲ ಕೋಲಾರ
ಅಬಕಾರಿ ಅಧಿಕಾರಿಗಳು ಕೇವಲ ಸಿಎಲ್-೭ ಅನುಮತಿ ನೀಡಕ್ಕೆ ಅಷ್ಟೇ ಸೀಮಿತವಾಗಿದ್ದಿರಿ. ಗ್ರಾಮೀಣ ಪ್ರದೇಶದ ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟವಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ತಮಗೆ ಸಂಬAಧವಿಲ್ಲದ ರೀತಿಯಲ್ಲಿ ಕೈಕಟ್ಟಿ ಕುಳಿತಿದ್ದಿರಿ. ಇದು ಕೂಡಲೇ ಸರಿಹೋಗಬೇಕು. ಇಲ್ಲದೇ ಹೋದರೆ ಮುಂದಿನ ಪರಿಣಾಮ ಬೇರೆ ರೀತಿಯಲ್ಲಿ ಇರುತ್ತೇ ಎಂದು ಅಬಕಾರಿ ಅಧಿಕಾರಿಗಳನ್ನು ಶಾಸಕ ಕೊತ್ತೂರು ಜಿ ಮಂಜುನಾಥ್ ಸಭೆಯಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡರು.
ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ವತಿಯಿಂದ ನಡೆದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋಲಾರ ಜಿಲ್ಲೆಯಲ್ಲೆಯಿಂದ ಮದ್ಯವು ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಸರಬರಾಜು ಆಗುತ್ತಿದೆ ಎಂದು ಅಯಾ ರಾಜ್ಯಗಳ ಜಿಲ್ಲಾಧಿಕಾರಿ, ಎಸ್ಪಿಗಳು ಪೋನ್ ಮಾಡತ್ತಾರೆ ಎಂದರೆ ಇಲ್ಲಿನ ಅಧಿಕಾರಿಗಳ ಕೆಲಸ ಏನು ನೇರವಾಗಿ ಹೇಳೋದು ನನ್ನ ಅಭ್ಯಾಸ. ನಿಮ್ಮನ್ನು ಏನು ಮಾಡಬೇಕು ಅಂತ ನಮಗೆ ಗೊತ್ತಿದೆ. ಎಂದು ಅಧಿಕಾರಿಗಳ ವಿರುದ್ದ ಗರಂ ಆದರು.
ಇವತ್ತಿನ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯತಿ ಪಿಡಿಒ, ಕಾರ್ಯದರ್ಶಿಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡಿಲ್ಲ. ಕಾಂಗ್ರೆಸ್ ಪಕ್ಷದ ಸಮಾಜಿಕ ಜಾಲತಾಣದ ತಂಡದ ಮುತುವರ್ಜಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿದ್ದಕ್ಕಾಗಿ ಇವತ್ತು ಇಷ್ಟು ಜನ ಬಂದಿದ್ದಾರೆ. ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳಲು ಜನಸ್ಪಂದನ ಒಂದು ಉತ್ತಮ ಅವಕಾಶವಾಗಿದೆ. ಇದನ್ನು ಜನರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಕಾಂಗ್ರೆಸ್ ಸರ್ಕಾರ ಪ್ರಾರಂಭಿಸಿದ ಜನಸ್ಪಂದನ ಕಾರ್ಯಕ್ರಮದ ಮೂಲ ಉದ್ದೇಶ ಜನರನ್ನು ತಲುಪಿ ಅವರ ಸಮಸ್ಯೆಗಳನ್ನು ನಿವಾರಿಸುವುದಾಗಿದೆ. ಮನವಿಗಳು ಕೇವಲ ಸಭೆಗೆ ಸೀಮಿತವಾಗದೇ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಬೇಕು. ನಾನು ಶಾಸಕನಾಗಿ ತಾಲೂಕಿನ ಜನರ ಕೆಲಸಗಾರನಾಗಿ ಸೇವೆ ಮಾಡಲು ಬಂದಿದ್ದೇನೆ. ಜವಾಬ್ದಾರಿಯಿಂದ ಅವರ ಸೇವೆ ಮಾಡತ್ತೇನೆ ಅಧಿಕಾರಿಗಳು ಸಹ ಕೈ ಜೋಡಿಸಬೇಕು ಎಂದರು.
ಎಸ್.ಎನ್.ಆರ್. ಆಸ್ಪತ್ರೆ ನವೀಕರಣಕ್ಕೆ ೧೦ ಕೋಟಿ :
ನಗರದ ಜಿಲ್ಲಾ ಆಸ್ಪತ್ರೆ ನವೀಕರಣಕ್ಕಾಗಿ ೧೦ ಕೋಟಿ ರೂ.ಗಳನ್ನು ಮಂಜೂರು ಮಾಡಿಸಲಾಗಿದೆ. ಸದ್ಯದಲ್ಲೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ನರಸಾಪುರ ಆಸ್ಪತ್ರೆಗೆ ೧೪ ಕೋಟಿ, ಕ್ಯಾಲನೂರು ಆಸ್ಪತ್ರೆಗೆ ೪.೫ ಕೋಟಿ, ನರಸಾಪುರ ಜೋಡಿ ರಸ್ತೆಗೆ ೭ ಕೋಟಿ ರೂ.ಗಳನ್ನು ಮಂಜೂರು ಮಾಡಿಸಲಾಗಿದೆ. ಶಿಕ್ಷಣ, ಆರೋಗ್ಯ, ಶಿಕ್ಷಣಕ್ಕೆ ಒತ್ತು ನೀಡುವ ಕೆಲಸ ಮಾಡಬೇಕು. ಆ ಕೆಲಸವನ್ನು ಮಾಡಲಾಗುವುದು.
ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಕಳೆದ ಬಾರಿ ಜನವರಿಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಸುಮಾರು ೮೮ ಅರ್ಜಿಗಳನ್ನು ವಿಲೇವಾರು ಮಾಡಲಾಗಿದೆ. ಪ್ರತಿ ಇಲಾಖೆಯ ಪ್ರಗತಿಯಲ್ಲಿ ಕೋಲಾರ ಜಿಲ್ಲೆ ಮೊದಲ ಸ್ಥಾನದಲ್ಲಿ ಇದ್ದು ತಾಲೂಕಿನ ವಕ್ಕಲೇರಿ ಹೋಬಳಿ ಪ್ರಥಮ ಸ್ಥಾನದಲ್ಲಿ ಇದೆ. ಕೆಲಸ ಮಾಡಿಸುವ ಮತ್ತು ಮಾಡುವ ಜವಾಬ್ದಾರಿ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಮೇಲೆ ಇದೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ವಿಶೇಷ ಯೋಜನೆಗಳ ಮೂಲಕ ಜನಸಾಮಾನ್ಯರ ಮನೆ ಬಾಗಿಲಿಗೆ ಸರ್ಕಾರ ಎಂಬುದನ್ನು ನಿರೂಪಿಸಿದ್ದಾರೆ ಎಂದು ತಿಳಿಸಿದರು.
ಕೋಲಾರ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಒತ್ತು :
ಕೋಲಾರ ನಗರ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿಗೆ ಇಗಾಗಲೇ ೨೮ ಕೋಟಿ ರೂ.ಗಳು ಬಿಡುಗಡೆಯಾಗಿದೆ. ವಿವಿಧ ಯೋಜನೆಗಳಿಂದ ೬೦ ಕೋಟಿ ರೂ.ಗಳ ವೆಚ್ಚದಲ್ಲಿ ಒಳ ಚರಂಡಿ ನೀರು ಶೇಖರಣಾ ಘಟಕ, ರಾಜಕಾಲುವೆ ನಿರ್ಮಾಣ ಮಾಡಲಾಗುವುದು. ೧೫ ಕೋಟಿ ರೂ.ಗಳ ವೆಚ್ಚದಲ್ಲಿ ಹಳೇ ಬಸ್ ನಿಲ್ದಾಣವನ್ನು ನವೀಕರಿಸಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗುವುದು. ಕೋಲಾರಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನವನ್ನು ನೀಡಿದ್ದಾರೆ. ಹೆಚ್ಚುವರಿಯಾಗಿ ೩ ಇಂದಿರಾ ಕ್ಯಾಂಟೀನ್‌ಗಳು ಮಂಜೂರಾಗಿವೆ. ಕೋಲಾರದ ಎಸ್.ಎನ್.ಆರ್. ಆಸ್ಪತ್ರೆಯ ಆವರಣದಲ್ಲಿ ಹಾಗೂ ಮಾರುಕಟ್ಟೆಯ ಆವರಣದಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಲಾಗುವುದು. ಮತ್ತೊಂದನ್ನು ವೇಮಗಲ್ ಪಟ್ಟಣದಲ್ಲಿ ಪ್ರಾರಂಭಿಸಲಾಗವುದು ಎಂದರು.
ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವೇ ಇಲ್ಲ ಎಂದು ವಿರೋಧ ಪಕ್ಷಗಳು ಟೀಕೆಗಳನ್ನು ಮಾಡುತ್ತಿದ್ದಾರೆ. ಕೋಲಾರ ನಗರ ಮತ್ತು ತಾಲ್ಲೂಕು ಅಭಿವೃದ್ಧಿಗೆ ಮುಖ್ಯಮಂತ್ರಿಗಳು ವಿಶೇಷ ಕಾಳಜಿವಹಿಸಿದ್ದು, ಈಗಾಗಲೇ ಗ್ರಾಮೀಣ ರಸ್ತೆಗಳಿಗೆ ೧೦೦ ಕೋಟಿ ರೂ.ಗಳು ಮಂಜೂರು ಮಾಡಿದ್ದಾರೆ. ಹೆಚ್ಚುವರಿಯಾಗಿ ೨೫೦ ಕೋಟಿ ರೂ.ಗಳು ಪ್ರಸ್ತಾವನೆ ಸಲ್ಲಿಸಲಾಗಿದೆ. ಡಿ.ಪಿ.ಆರ್. ನಡೆಸಲಾಗುತ್ತಿದೆ. ಟೆಂಡರ್ ಹಂತ ಬಾಕಿ ಉಳಿದಿದೆ. ೧೩ ಕೋಟಿ ರೂ.ಗಳ ವೆಚ್ಚದಲ್ಲಿ ನೂತನ ನಗರಸಭಾ ಕಟ್ಟಡ ನಿರ್ಮಾಣವಾಗುತ್ತಿದೆ ಎಂದರು.
ತಹಶಿಲ್ದಾರ್ ಹರ್ಷವರ್ಧನ್ ಮಾತನಾಡಿ, ಕಳೆದ ಬಾರಿ ನಡೆದ ಜನಸ್ಪಂದನ ಸಭೆಯಲ್ಲಿ ೮೮ ಅರ್ಜಿಗಳಿಗೂ ನ್ಯಾಯ ಕೊಡಿಸಲಾಗಿದೆ. ಜಿಲ್ಲಾಡಳಿತದ ಇ ಅಫೀಸ್ ನಿಂದ ಬಂದ ೩೪೦೪ ಅರ್ಜಿಗಳಲ್ಲಿ ೨೯೦೦ ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ ಸಕಾಲದಲ್ಲಿ ಸುಮಾರು ೪೩೯೩ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು ರಾಜ್ಯದಲ್ಲಿ ಕೋಲಾರ ಜಿಲ್ಲೆ ಮೊದಲ ಸ್ಥಾನದಲ್ಲಿ ಇದೆ ಇದಕ್ಕೆ ಕಂದಾಯ ಇಲಾಖೆ ಸಹಕಾರ ಮುಖ್ಯವಾಗಿದೆ ಎಂದರು.
೧೮೯ ಅರ್ಜಿಗಳು ಸ್ವೀಕಾರ :
ಜನಸ್ಪಂದನ ಸಭೆಯಲ್ಲಿ ಗ್ರಾಮೀಣ ಭಾಗಗಳಿಂದ ೧೮೯ ಅರ್ಜಿಗಳು ಬಂದಿದ್ದು, ಶಾಸಕರ ಸಮ್ಮುಖದಲ್ಲಿ ಬಂದ ಅರ್ಜಿಗಳನ್ನು ತುರ್ತಾಗಿ ವಿಲೇವಾರಿ ಮಾಡಲು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು. ಇದೇ ಸಂದರ್ಭದಲ್ಲಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಅಪರ ಜಿಲ್ಲಾಧಿಕಾರಿ ಮಂಗಳ, ಉಪ ವಿಭಾಗಾಧಿಕಾರಿ ಡಾ.ಮೈತ್ರಿ, ಡಿವೈಎಸ್ಪಿ ನಾಗ್ತೆ, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಪಂ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಚಿತ್ರ ೧೨ ಕೆ.ಎಲ್.ಆರ್. ೦೧ : ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಕೊತ್ತೂರು ಮಂಜುನಾಥ್, ಎಂ.ಎಲ್.ಸಿ. ಅನಿಲ್ ಕುಮಾರ್, ಅಪರ ಜಿಲ್ಲಾಧಿಕಾರಿ ಮಂಗಳ, ಎಸ್.ಪಿ. ಬಿ.ನಿಖಿಲ್ ಇದ್ದರು.
ಚಿತ್ರ ೧೨ ಕೆ.ಎಲ್.ಆರ್. ೦೧ : ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಅರ್ಜಿಗಳನ್ನು ಹಿಡಿದು ಸರದಿ ಸಾಲಿನಲ್ಲಿ ನಿಂತಿರುವುದು.