ಶಾಲಾ ಮಾನ್ಯತೆ ನವೀಕರಣ ನಿಯಮ ಸಡಿಲಕ್ಕೆ ಮನವಿ

school-clip-art-85
Published on

ಬೆಂಗಳೂರು
ಸಾರ್ವಜನಿಕ ಶಿಕ್ಷಣ ಇಲಾಖೆ 2020-21ನೇ ಸಾಲಿನ ಶಾಲೆಗಳಿಗೆ ಮಾನ್ಯತೆ ನವೀಕರಿಸಲು ವಿಧಿಸಿರುವ ನಿಯಮಗಳನ್ನು ಸಡಿಲ ಮಾಡುವಂತೆ ಶಿಕ್ಷಕರ ಮತ್ತು ಆಡಳಿತ ಮಂಡಳಿ ವೇದಿಕೆ ಮನವಿ ಮಾಡಿದೆ.
ಶಾಲೆಗಳು ಮಾನ್ಯತೆ ನವೀಕರಿಸಿಕೊಳ್ಳಲು ಕಟ್ಟಡದ ಸುರಕ್ಷತಾ ಕ್ರಮ ಅನುಸರಿಸಿರುವ ಬಗ್ಗೆ ಕಡ್ಡಾಯವಾಗಿ ಅಗ್ನಿ ಶಾಮಕ ಮಂಡಳಿಯಿಂದ ಪ್ರಮಾಣ ಪತ್ರ ಪಡೆಯಬೇಕೆಂದು ಶಿಕ್ಷಣ ಇಲಾಖೆ ತಿಳಿಸಿದೆ.
ಆಗ್ನಿ ಶಾಮಕ ಮಂಡಳಿಯ ಬೈಲಗಳ ಪ್ರಕಾರ ಶಾಲೆಗಳ ಕಟ್ಟಡಗಳ ನಾಲ್ಕು ದಿಕ್ಕುಗಳಲ್ಲಿ ಕನಿಷ್ಠ 6 ಅಡಿಗಳ ಅಂತರದ ಜಾಗವನ್ನು ಈ ಉದ್ದೇಶಕ್ಕಾಗಿ ಮೀಸಲಿಡಬೇಕು ಎಂದಿದೆ. ಆದರೆ, ಹಾಲಿ ಇರುವ ಶಾಲೆಗಳು ಈ ರೀತಿಯ ನಿಯಮ ಪಾಲಿಸಲು ಜಾಗದ ಸಮಸ್ಯೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಶಾಲೆಗಳಿಗೆ ಈ ನಿಯಮವನ್ನು ವಿಧಿಸಿ. ಹಾಲಿ ಇರುವ ಶಾಲೆಗಳಿಗೆ ವಿನಾಯಿತಿ ನೀಡಬೇಕೆಂದು ವೇದಿಕೆ ಅಧ್ಯಕ್ಷ ಎ.ಪಿ.ರಂಗನಾಥ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net