

ಕಲಾವಿದನ ಮನವಿಗೆ ಒಪ್ಪಿದ ಎಂಡಿ:
ಕೆಎಸ್ಸಾಟಿರ್ಸಿಯಲ್ಲಿ 7 ಲಕ್ಷಕ್ಕಿಂತ ಹೆಚ್ಚಿನ ಕಿ.ಮೀ. ಬಸ್ ಸಂಚರಿಸಿದರೆ ಅದನ್ನು ಗುಜರಿಗೆ ಸೇರಿಸಲಾಗುತ್ತದೆ. ಅಂತಹ ನೂರಾರು ಬಸ್ಗಳು ಕೆಎಸ್ಸಾಟಿರ್ಸಿ ಬಳಿಯಿದ್ದು, ಅವುಗಳನ್ನು ಗುಜರಿ ಹಾಕಲಾಗುತ್ತದೆ. ಆದರೆ, ಆ ಗುಜರಿ ಬಸ್ಗಳನ್ನು ಮರುಬಳಕೆ ಮಾಡಲು ಕೆಎಸ್ಸಾಟಿರ್ಸಿ ಚಿಂತಿಸುತ್ತಿದೆ. ಅದರಂತೆ ಕಳೆದ ಕೆಲದಿನಗಳ ಹಿಂದೆ ಹಳೆಯ ಬಸ್ ಅನ್ನು ಶೌಚಗೃಹವನ್ನಾಗಿ ಪರಿವತಿರ್ಸಿ ಮೆಜೆಸ್ಟಿಕ್ನಲ್ಲಿ ಇಡಲಾಗಿದೆ. ಅದರ ಜತೆಗೆ ಇದೀಗ ಬಸ್ ಅನ್ನು ಶಾಲಾ ಕೊಠಡಿಯನ್ನಾಗಿ ಪರಿವತಿರ್ಸುವ ಬಗ್ಗೆಯೂ ಚಿಂತಿಸಿದೆ.
ಬೆಂಗಳೂರು: ಗುಜರಿಗೆ ಸೇರುವ ಬಸ್ಗಳ ಪುನರ್ಬಳಕೆಗೆ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿರುವ, ಕೆಎಸ್ಸಾಟಿರ್ಸಿ ಇದೀಗ ಹಳೆ ಬಸ್ಸನ್ನು ಶಾಲೆ ತರಗತಿಯನ್ನಾಗಿ ಪರಿವತಿರ್ಸಲು ಕುಂದಾಪುರದ ಬಗ್ವಾಡಿ ಗ್ರಾಮಸ್ಥರಿಗೆ ನೆರವು ನೀಡುತ್ತಿದೆ.
ಅತಿಥಿಗಳಿಗೆ ಚೋಟಾ ಬಸ್:
ಪ್ರಶಾಂತ್ ಆಚಾರ್, ಕಲಾವಿದ
ಲಾಕ್ಡೌನ್ ಅವಧಿಯಲ್ಲಿ ಕೆಎಸ್ಸಾಟಿರ್ಸಿ ಬಸ್ ಮಾದರಿಯನ್ನು ಸಿದ್ಧಪಡಿಸಿ, ಅದರ ವೀಡಿಯೋವನ್ನು ಯೂಟ್ಯೂಬ್ನಲ್ಲಿ ಹಾಕಿದ್ದೆ. ಅದನ್ನು ನೋಡಿ ಇದೀಗ ನಿಗಮದ ಎಂಡಿ ಅದೇ ಮಾದರಿಯ ಬಸ್ಗಳನ್ನು ನೀಡುವಂತೆ ತಿಳಿಸಿದ್ದಾರೆ. ಅದರ ಜತೆಗೆ ಬಗ್ವಾಡಿಯಲ್ಲಿ ಶಾಲಾ ಕೊಠಡಿಗಾಗಿ ಹಳೆಯ ಬಸ್ ಒಂದನ್ನು ಕೊಡುವ ಭರವಸೆ ನೀಡಿದ್ದಾರೆ.