ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಒತ್ತು

BTP30Photo1
ಬೆಟ್ಟದಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಕೆ.ಮಹದೇವ್ ಉದ್ಘಾಟಿಸಿದರು. ಅಣ್ಣಯ್ಯಶೆಟ್ಟಿ, ಮಂಜುಳಾ, ಮಲ್ಲಿಕಾರ್ಜುನ್, ಸೌಮ್ಯಾ, ಗಿರೀಶ್, ರಾಜಶೇಖರ್, ಉದಯ್, ಈಶ್ವರಚಾರಿ, ಇಮ್ರಾನ್, ದೊರೆಸ್ವಾಮಿ, ಗಿರಿಗೌಡ, ಕೃಷ್ಣೇಗೌಡ ಇದ್ದರು.
Published on

ಶಾಸಕ ಕೆ.ಮಹದೇವ್ ಮಾಹಿತಿ



ಬೆಟ್ಟದಪುರ: ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.


ಇಲ್ಲಿನ ಹೊರಹೊಲದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೊದಲ ಅಂತಸ್ತಿನಲ್ಲಿ ನೂತನ ಕೊಠಡಿಗಳನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಪಾಲಕರಿಗೆ ಮೊದಲ ಸ್ಥಾನ ನೀಡಬೇಕು. ನಾಡು-ಸಂಸ್ಕೃತಿಗೆ ಬೆಲೆ ಕೊಡಬೇಕು ಎಂದರು.


ಗ್ರಾಮದ ಅಭಿವೃದ್ಧಿಗೆ ಶಾಸಕರ ಅನುದಾನದಿಂದ 15 ಕೋಟಿ ರೂ.ಅನುದಾನ ನೀಡಲಾಗಿ ವಿವಿಧ ಕಾಮಗಾರಿಗಳು ಪೂರ್ಣಗೊಂಡಿವೆ. ತಾಲೂಕಿನ 302 ಹಳ್ಳಿಗಳಿಗೆ ಕುಡಿಯುವ ನೀರು ಸೌಲಭ್ಯಕ್ಕಾಗಿ ಹಾಡ್ಯದಿಂದ ಕಾವೇರಿ ನೀರು ತರಲು 240 ಕೋಟಿ ರೂ. ಮಂಜೂರು ಮಾಡಲಾಗಿದ್ದು, ಶೀಘ್ರ ಬೆಟ್ಟದಪುರ ವ್ಯಾಪ್ತಿಗೆ ಕಾವೇರಿ ಕುಡಿಯುವ ನೀರು ಬರಲಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮತ್ತೆ 3 ಕೋಟಿ ರೂ. ಮಂಜೂರು ಮಾಡಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ವಿಜ್ಞಾನ ವಿಭಾಗ ಪ್ರಾರಂಭಿಸಲು ಸಂಬಂಧಪಟ್ಟ ಸಚಿವರ ಬಳಿ ಮಾತನಾಡಲಾಗುವುದು ಎಂದು ತಿಳಿಸಿದರು.


ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಬೆಟ್ಟದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಸೌಮ್ಯಾ, ಸದಸ್ಯರಾದ ಗಿರೀಶ್, ರಾಜಶೇಖರ್, ಉದಯ್, ಈಶ್ವರಚಾರಿ, ಇಮ್ರಾನ್, ದೊರೆಸ್ವಾಮಿ, ಗಿರಿಗೌಡ, ಕೃಷ್ಣೇಗೌಡ, ಬೆಟ್ಟದತುಂಗ ಗ್ರಾ.ಪಂ ಅಧ್ಯಕ್ಷ ದೇವರಾಜು, ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ್, ಪ್ರಾಂಶುಪಾಲೆ ಡಾ.ಎಸ್.ಜಿ ಚೈತ್ರಾ, ಸಹಾಯಕ ಪ್ರಾಧ್ಯಾಪಕರಾದ ಡಾ.ಡಿ.ಎಸ್.ಜಗದೀಶ್, ಎಚ್.ಪಿ.ಚಂದ್ರಕಲಾ, ಡಾ.ಶಿಲ್ಪಶ್ರೀ, ಪ್ರತಿಮಾ, ರೂಪಾ, ವೆಂಕಟೇಶ್, ಉದಯಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net