ಶಾರ್ಟ್ ಸರ್ಕ್ಯೂಟ್, ಕಬ್ಬು ಬೆಳೆಗೆ ಬೆಂಕಿ

1010
Published on

ಎಂ.ಕೆ.ಹುಬ್ಬಳ್ಳಿ: ಪಟ್ಟಣದ ಬಳಿ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದಲ್ಲಿ ಸುಮಾರು 3 ಎಕರೆ ಕಬ್ಬು ಬುಧವಾರ ಬೆಂಕಿಗಾಹುತಿಯಾಗಿದೆ. ಫಕೀರಪ್ಪ ಬಸಲಿಂಗಪ್ಪ ಮುತ್ನಾಳ ಎಂಬುವರ ಜಮೀನಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅನಾಹುತ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೈತರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ.

ಉಳ್ಳಾಗಡ್ಡಿ-ಖಾನಾಪುರ ವರದಿ: ಸಮೀಪದ ಯಮಕನಮರಡಿ ಗ್ರಾಮದಲ್ಲಿ ಬುಧವಾರ ಕೆಂಪಣ್ಣ ದುಂಡಪ್ಪ ಯಾದವಾಡಿ ಎಂಬುವವರಿಗೆ ಸೇರಿದ 1 ಎಕರೆ 33 ಗುಂಟೆ ಕಬ್ಬು ಸಂಪೂರ್ಣ ಸುಟ್ಟಿದೆ. ಹೊಲದಲ್ಲಿದ್ದ ಡ್ರಿಪ್ ಪೈಪ್ ಹಾಗೂ ಇನ್ನಿತರ ಸಾಮಗ್ರಿ ಸುಟ್ಟಿವೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಉಪತಹಸೀಲ್ದಾರ್ ಎಸ್.ಜೆ. ಸಾಳುಂಕೆ, ಗ್ರಾಮ ಲೆಕ್ಕಾಧಿಕಾರಿ ವಿ.ಕೆ. ಮಾಳಗೇರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net