ಶಾಮಣ್ಣನಕಟ್ಟೆ ಏರಿ ಒಡೆದು ಬೆಳೆ ನಷ್ಟ

ಬೆಣಗಾಲ್ ಗ್ರಾಮದಲ್ಲಿ ಸತತ ಮಳೆ ಹಿನ್ನೆಲೆಯಲ್ಲಿ ಶಾಮಣ್ಕಣನಕಟ್ಟೆ ಏರಿ ಒಡೆದ ಸ್ಥಳವನ್ನು ವೀಕ್ಷಿಸುತ್ತಿರುವ ಗ್ರಾಮಸ್ಥರು. ಧನರಾಜ್, ಸುರೇಶ್, ರಾಮಯ್ಯ, ಜಯಮ್ಮ, ಕುಮಾರ್, ಕಾಂತರಾಜು, ಅಕ್ಕಯಮ್ಮ ಮತ್ತಿತರರಿದ್ದರು.
ಬೆಣಗಾಲ್ ಗ್ರಾಮದಲ್ಲಿ ಸತತ ಮಳೆ ಹಿನ್ನೆಲೆಯಲ್ಲಿ ಶಾಮಣ್ಕಣನಕಟ್ಟೆ ಏರಿ ಒಡೆದ ಸ್ಥಳವನ್ನು ವೀಕ್ಷಿಸುತ್ತಿರುವ ಗ್ರಾಮಸ್ಥರು. ಧನರಾಜ್, ಸುರೇಶ್, ರಾಮಯ್ಯ, ಜಯಮ್ಮ, ಕುಮಾರ್, ಕಾಂತರಾಜು, ಅಕ್ಕಯಮ್ಮ ಮತ್ತಿತರರಿದ್ದರು.
Published on

ಬೈಲಕುಪ್ಪೆ: ಬೆಣಗಲು ಗ್ರಾಮದಲ್ಲಿ ಸತತ ಮಳೆಯಿಂದ ಶಾಮಣ್ಣನಕಟ್ಟೆ ಏರಿ ಒಡೆದು ಅಪಾರ ಬೆಳೆ ನಷ್ಟ ಉಂಟಾಗಿದೆ. ನೀರಿನ ರಭಸಕ್ಕೆ ವಿದ್ಯುತ್ ಕಂಬ ನೆಲಕಚ್ಚಿದೆ.
ಬುಧವಾರ ಹೆಚ್ಚಿನ ಮಳೆ ಸುರಿದ ಹಿನ್ನೆಲೆಯಲ್ಲಿ ಕಟ್ಟೆ ಏರಿ ಒಡೆದ ನೀರು ನುಗ್ಗಿದ ಪರಿಣಾಮ ಗ್ರಾಮದ ಸುರೇಶ್ ಅವರು ಬೆಳೆದಿದ್ದ ಶುಂಠಿ ಬೆಳೆ ಸಂಪೂರ್ಣ ನಾಶವಾಗಿದೆ. ಧನರಾಜ್ ಅವರು ಬೆಳೆದಿದ್ದ ಬಾಳೆ, ಅಡಕೆ ನೀರಿಗೆ ಕೊಚ್ಚಿ ಹೋಗಿದೆ. ಇನ್ನು ಜಯಮ್ಮ, ಪುಟ್ಟಮ್ಮ, ರಾಮಯ್ಯ ಅವರ ಜೋಳದ ಬೆಳೆ ಸಂಪೂರ್ಣ ಹಾಳಾಗಿದೆ.
ಶಾಮಣ್ಣನಕಟ್ಟೆಗೆ ಕಾವೇರಿ ನದಿಯಿಂದ ನೀರು ತುಂಬಿಸುವ ಯೋಜನೆಯಡಿ ಪೈಪ್‌ಲೈನ್ ಅಳವಡಿಸಲಾಗಿತ್ತು. ಇದೇ ಜಾಗದಲ್ಲಿ ಕಟ್ಟೆ ಏರಿ ಒಡೆದಿದ್ದು, ಬೆಳೆಗೆ ನೀರು ನುಗ್ಗಿ ರೈತರಿಗೆ ಹೆಚ್ಚಿನ ನಷ್ಟವಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ಬೇಜವಾಬ್ದಾರಿ ಕಾರಣ ಎಂದು ಗ್ರಾಮಸ್ಥ ಧನರಾಜ್ ದೂರಿದರು.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬಂದು ಪರಿಶೀಲಿಸಿ ಬೆಳೆಗೆ ನಷ್ಟ ನೀಡಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಗೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದರು. ಗ್ರಾಮಸ್ಥರಾದ ಲೋಕೇಶ್, ದೇವರಾಜ್, ರೇವಣ್ಣ, ಕುಮಾರ, ಕಾಂತರಾಜ್, ಅಕ್ಕಯ್ಯಮ್ಮ, ಪುಟ್ಟಮ್ಮ ಮತ್ತಿತರರಿದ್ದರು.
ಕೋಟ್
ಬೆಣಗಲ್ ಗ್ರಾಮದ ಕೆರೆ ಏರಿ ಒಡೆದಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಬೆಳೆಗಳು ನಷ್ಟವಾಗಿರುವ ಸಂಬಂಧ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ.
ಆನಂದ್, ಆರ್‌ಐ, ಹಾರನಹಳ್ಳಿ ಹೋಬಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net