ಶಾಂತವೀರಮ್ಮದೇವಿ ಸಂಭ್ರಮದ ಉತ್ಸವ

19BTP04
ಬೆಟ್ಟದಪುರದಲ್ಲಿ ಶಾಂತವೀರಮ್ಮ ದೇವಿಯ ಮೆರವಣಿಗೆ ನಡೆಯಿತು.
Published on

ಬೆಟ್ಟದಪುರ: ಬೆಟ್ಟದಪುರದ ಶಕ್ತಿದೇವತೆ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಶಾಂತವೀರಮ್ಮ ದೇವಿ ಉತ್ಸವ ಶುಕ್ರವಾರ ರಾತ್ರಿ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಮೂರು ವರ್ಷಗಳಿಂದ ದೇವಸ್ಥಾನ ನಿರ್ಮಾಣ ಹಂತದಲ್ಲಿ ಇದ್ದುದ್ದರಿಂದ ಯಾವುದೇ ಪೂಜಾ ಕಾರ್ಯ ನಡೆದಿರಲಿಲ್ಲ. ಕಳೆದ ಜೂನ್ ತಿಂಗಳಲ್ಲಿ ನೂತನವಾಗಿ ನಿರ್ಮಾಣವಾಗಿರುವ ದೇವಾಲಯದಲ್ಲಿ ದೇವರ ಪ್ರತಿಷ್ಠಾಪನೆ ಸೇರಿದಂತೆ ವಿಶೇಷ ಪೂಜಾ ಮಹೋತ್ಸವಗಳು ಜರಗಿದವು.


ದೇವಿ ಉತ್ಸವಮೂರ್ತಿಯೊಂದಿಗೆ ಪಲ್ಲಕ್ಕಿಯನ್ನು ಅಲಂಕರಿಸಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಮೆರವಣಿಗೆ ನಡೆಯಿತು. ಮಹಿಳೆಯರು ದೇವಿಗೆ ತಂಬಿಟ್ಟು ಆರತಿ ಸೇವೆ ಹಾಗೂ ಭಕ್ತಾದಿಗಳು ಹರಕೆ ಸೇವೆ ಸಲ್ಲಿಸಿದರು. ದೇವಸ್ಥಾನದ ಮುಂಭಾಗ ಕೆಂಡೋತ್ಸವದಲ್ಲಿ ಭಕ್ತರು ಕೆಂಡ ಹಾಯ್ದರು. ಪ್ರಮುಖ ವೃತ್ತ ಹಾಗೂ ರಸ್ತೆಗಳನ್ನು ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು. ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net