ಶರಣರದು ಸಮ ಸಮಾಜ ಪರಿಕಲ್ಪನೆ

17 kdr 1 sharavana
ಕಡೂರು ತಾಲೂಕಿನ ಮೇಲನಹಳ್ಳಿ ಗ್ರಾಮದಲ್ಲಿ ಶರಣ ಸಾಹಿತ್ಯ ಪರಿಷತ್‌ನಿಂದ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಅಜ್ಜಂಪುರ ಘಟಕದ ಅಧ್ಯಕ್ಷ ಬಿ.ರಾಜಪ್ಪ ಉದ್ಘಾಟಿಸಿದರು. ಹೊಸೂರು ಪುಟ್ಟರಾಜು, ಸಿಗೇಹಡ್ಲು ಹರೀಶ್, ವಿರೂಪಾಕ್ಷಪ್ಪ ಮತ್ತಿತರರಿದ್ದರು.
Published on

ಕಡೂರು: ಬಸವಾದಿ ಶರಣರು ವ್ಯಕ್ತಿ ಶುದ್ಧತೆ ಮತ್ತು ಸಮ ಸಮಾಜದ ಪರಿಕಲ್ಪನೆಯ ಆಶಯವನ್ನು ಸಮಾಜಕ್ಕೆ ನೀಡಿದರು ಎಂದು ಸಾಹಿತಿ ಹೊಸೂರು ಪುಟ್ಟರಾಜು ಹೇಳಿದರು.

ತಾಲೂಕಿನ ಹಿರೇನಲ್ಲೂರು ಹೋಬಳಿಯ ಮೇಲನಹಳ್ಳಿ ಗ್ರಾಮದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಮತ್ತು ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ನಡೆದ ಶ್ರಾವಣ ಸಂಜೆ ಶರಣರ ಸಂದೇಶ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಮೋಳಿಗೆ ಮಾರಯ್ಯ, ನುಲಿಯ ಚಂದಯ್ಯ, ಸತ್ಯಕ್ಕ, ಉರಿಲಿಂಗಪೆದ್ದಿ, ಗೊಗ್ಗವ್ವೆ, ಲಿಂಗಮ್ಮ, ಅರಿವಿನ ಮಾರಿತಂದೆ ಮುಂತಾದ ಶರಣರು ಬೇರೆಬೇರೆ ರಾಜ್ಯ, ಪ್ರದೇಶಗಳಿಂದ ಕಲ್ಯಾಣಕ್ಕೆ ಬಂದು ಅನುಭವ ಮಂಟಪದಲ್ಲಿ ಸಮ ಸಮಾಜದ ನಿರ್ಮಾಣಕ್ಕೆ ಕಂಕಣ ಬದ್ಧರಾಗಿ ನಿಂತವರು. ಕಾಯಕ ದಾಸೋಹದ ಪರಿಕಲ್ಪನೆಯಲ್ಲಿ ತನ್ನ ಬದುಕನ್ನು ಕಟ್ಟಿಕೊಂಡವರು ಎಂದರು.

ಮೋಳಿಗೆ ಮಾರಯ್ಯ ಒಬ್ಬ ರಾಜನಾಗಿದ್ದವನು ಎಲ್ಲ ವೈಭವಗಳನ್ನು ಬಿಟ್ಟು ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದು ಕಲ್ಯಾಣದ ಶರಣರ ವಿಚಾರಗಳಿಂದ ಪ್ರಭಾವಿತರಾಗಿ ರಾಜ ಎನ್ನುವ ಮೋಹ ತ್ಯಜಿಸಿ ಸಾಮಾನ್ಯರಂತೆ ಜೀವಿಸಿದರು ಎಂದರು.

ಅಜ್ಜಂಪುರ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ರಾಜಪ್ಪ ಉದ್ಘಾಟಿಸಿದರು. ತಾಲೂಕು ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಜಾತಾ ಜಡೆ ಮಲ್ಲಪ್ಪ, ಕೆ.ಬಿ.ಸುನಿತಾ, ಉಪಾಧ್ಯಕ್ಷ ಎಂ.ಆರ್.ಪ್ರಕಾಶ್, ಮೇಲನಹಳ್ಳಿ ಗ್ರಾಮದ ಹಿರಿಯರಾದ ಎಂ.ಎನ್.ಶಾಂತಪ್ಪ ಎಂ.ಕೆ.ಬಸವರಾಜಪ್ಪ, ಮೂರ್ತಯ್ಯ, ಬಿ.ಮಹೇಶ್ವರಪ್ಪ, ಎಂ.ಕೆ. ರಮೇಶಪ್ಪ, ಎಂ.ಕೆ.ರಾಜಪ್ಪ, ಎಂ.ಆರ್.ಶಿವಕುಮಾರ್, ಎಂ.ಬಿ.ಶಾಂತಕುಮಾರ್ ಎಂ.ಬಿ.ಸಿದ್ದಪ್ಪ, ಚಿದಾನಂದ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net