

ಕಲಬುರಗಿ: ಗೆಜ್ಜೆ ಕಟ್ಟಿದ ಕಾಲುಗಳ ಅಮೋಘ ನರ್ತನ, ಕಲಾ ದಿಗ್ಗಜರ ಗಾಯನ, ತಬಲಾ, ಸಿತಾರ ಮನಮೋಹನ ವಾದನ, ಕಥಕ್, ಕುಚಿಪುಡಿ, ಭರತನಾಟ್ಯ, ಕತಾಕೀರ್ಥನ, ವಾಚನ ವ್ಯಾಖ್ಯಾನ, ಹಿಂದೂಸ್ತಾನ, ಕರ್ನಾಟಕ ಶಾಸ್ತಿçÃಯ, ವಚನ ಗಾಯನಕ್ಕೆ ಶ್ರೋತೃಗಳ ಮನೋಲ್ಲಾಸದ ಚಪ್ಪಾಳೆಯ ಸ್ಪಂದನ...
ಇAತಹ ಅಪರೂಪದ ರಾಷ್ಟç, ಅಂತಾರಾಷ್ಟಿçÃಯ ಕಲಾವಿದರ ಸಾಂಸ್ಕೃತಿಕ ಸಮ್ಮಿಲನಕ್ಕೆ ಸಾಕ್ಷಿಯಾಗಿದ್ದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ನಗರದ ಗುಲ್ಬರ್ಗ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಹಮ್ಮಿಕೊಂಡ ರಾಷ್ಟಿçÃಯ ಸಂಗೀತ ನೃತ್ಯ ಮಹೋತ್ಸವ.
ಕಲಾವಿದೆ ವೀಣಾ ಶೇಷಾದ್ರಿ ದಿಗ್ದರ್ಶನದಲ್ಲಿ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಜೀವನ ಚರಿತ್ರೆಯ ನೃತ್ಯರೂಪಕ ಮೈಮನ ರೋಮಾಂಚನಗೊಳಿಸಿತು. ಪುಣ್ಯಶೀಲೆ, ಧರ್ಮಬಲ, ಸೇನಾಬಲದೊಂದಿಗೆ ಪ್ರತಿ ಪ್ರಜೆ ಮೆಚ್ಚುವಂತಹ ಆಡಳಿತ ನೀಡಿ, ಶತ್ರುಗಳ ವಿರುದ್ಧ ಹೋರಾಡಿ ಧರ್ಮ ರಕ್ಷಿಸಿ, ಧರ್ಮಬಲ, ಪ್ರೇಮಬಲದಿಂದ ರಾಜ್ಯವಾಳಿದ ನಾಯಕಿ ಎಂಬ ಸಂದೇಶವನ್ನು ಮನಮುಟ್ಟುವಂತೆ ಪ್ರದರ್ಶಿಸಿದ್ದು, ಪ್ರೇಕ್ಷಕರ ಸಾಲಿನಲ್ಲಿದ್ದವರು ಎದ್ದು ನಿಂತ್ತು ಚಪ್ಪಾಳೆ ತಟ್ಟಿ, ಪ್ರೋತ್ಸಾಹಿಸಿದರು.
ಕಲಾವಿದೆ ರೂಪಾ ಪತ್ತಾರ ಅವರ ವಾಣಿ ವಿಲಾಸ ಸಾಂಸ್ಕೃತಿಕ ತಂಡವೂ ಭರತನಾಟ್ಯದಲ್ಲಿ ಗಜವಧನ ಬೇಡುವೆ ಗೌರಿತನಯ, ಓಂ ಶಂಭೋ ಶಿವ ಶಿವ ಶಂಭೋ, ಭಾಗ್ಯ ಲಕ್ಷö್ಮ ಭಾರಮ್ಮ ಗೀತೆಗೆ ಪ್ರೇಕ್ಷಕರ ಚಪ್ಪಾಳೆಯ ಸುರಿಮಳೆಯಾಯಿತು. ಕಲಬುರಗಿಯ ನೃತ್ಯ ಸಾಧನಾ ಕೇಂದ್ರದ ಶುಭಾಂಗಿ ನೇತೃತ್ವದ ತಂಡದ ಭರತನಾಟ್ಯ, ರಾಘವೇಂದ್ರ ಕುಲ್ಕರ್ಣಿ ಸಂಗಡಿಗರ ತಬಲಾ ಸೋಲೋ ಶ್ರೋತೃಗಳ ಮನತಣಿಸಿತು.
ವಿಠಲ ನಾಮಸ್ಮರಣ: ಹಿಂದೂಸ್ತಾನಿ ಸಂಗೀತದ ಗಾಯಕ ನಾಗೇಶ ಅಡ್ವಾನ್‌ಕರ್ ತಮ್ಮ ಮಧುರ ಕಂಠದಿAದ ವಿವಿಧ ರಾಗಗಳನ್ನು ಪ್ರಸ್ತುತಪಡಿಸಿ, ಶ್ರೋತೃಗಳನ್ನು ಮಂತ್ರಮುಗ್ದಗೊಳಿಸುವ ಜತೆಗೆ ಪಂಡರೀನಾಥ ವಿಠೋಬಾನ ಅಭಂಗ ಗಾಯನದ ಮೂಲಕ ಭಕ್ತಿಯ ಗಾನಗಂಗೆಯನ್ನು ಹರಿಸಿದರು. ಗಾಯನಕ್ಕೆ ಜಡೇಶ ಹೂಗಾರ ತಬಲಾ, ವಿನಾಯಕ ಹಾರ್ಮೋನಿಯಂನ ಮೆರಗು ನೀಡಿದರು.
ಧಾರವಾಡದ ಅವಳಿ ಸಹೋದರರಾದ ಉಸ್ತಾದ್ ರಫೀಕ್ ಖಾನ್, ಶಫಿಕ್ ಖಾನ್ ಸಹೋದರರ ಸಿತಾರ ವಾದನದ ಇಡೀ ವಾತಾವರಣವನ್ನು ಮಂತ್ರಮುಗ್ದಗೊಳಿಸಿತು. ಸುಜಾತಾ ಗೋಪಿನಾಥ, ಕೃ.ಪಾ.ಮಂಜುನಾಥ ವಾಚನ ವ್ಯಾಖ್ಯಾನ ನಡೆಸಿಕೊಟ್ಟರು. ಪ್ರಭಯ್ಯ ಹಿರೇಮಠ ಕಥಾ ಕೀರ್ಥನ ಹೊಸ ಮೆರಗು ನೀಡಿತು. ವಚನ, ದಾಸವಾಣಿ, ತತ್ವಪದ, ಸುಗಮ ಸಂಗೀತ ಸೇರಿ ವೈವಿಧ್ಯಮಯ ಸಂಗೀತ, ನೃತ್ಯ ಕಲಾ ವೈಭವದ ಪ್ರದರ್ಶನ ನಡೆಯಿತು.
ಶಾಸಕ ಎಂ.ವೈ.ಪಾಟೀಲ್ ಉದ್ಘಾಟಿಸಿದರು. ರಾಷ್ಟç, ಅಂತಾರಾಷ್ಟಿçÃಯ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ ನಡೆದರೂ ಪ್ರೇಕ್ಷಕರ ಕೊರತೆ ಕಾಡಿತು. ನೃತ್ಯ, ಸಂಗೀತ ಅಕಾಡೆಮಿ ಅಧ್ಯಕ್ಷೆ ಶುಭ ಧನಂಜಯ, ಗುಲ್ಬರ್ಗ ವಿವಿಯ ಕುಲಸಚಿವ ರಮೇಶ ಲಂಡನಕರ್, ಅಕಾಡೆಮಿ ಸದಸ್ಯ ಶಂಕ್ರಪ್ಪ ಹೂಗಾರ, ರಿಜಿಸ್ಟಾçರ್ ಎನ್.ನರೇಂದ್ರಬಾಬು, ಶಿವಶರಣಪ್ಪ ಮುಳೇಗಾಂವ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಪ್ರೌಢ ಶಾಲೆ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಮಹೇಶ ಹೂಗಾರ, ಪ್ರಮುಖರಾದ ಜಗನ್ನಾಥ ಶೇಗಜಿ, ಶ್ರೀಗುರು ಕಾಲೇಜಿನ ನಿತಿನ್ ನಾಯ್ಕ, ಡಾ.ಭುರ್ಲಿ ಪ್ರಹ್ಲಾದ್, ಕಿಶೋರ ಗಾಯಕವಾಡ, ಕಲ್ಯಾಣರಾವ ಶೀಲವಂತ, ರಮೇಶ ಗಬ್ಬೂರ, ಬಾಬುರಾವ ಕೋಬಾಳಕರ್, ಶಿವಶಂಕರ ಬಿರಾದಾರ ಇತರರಿದ್ದರು.
ವಿಶ್ವದಲ್ಲೇ ಭಾರತದ ಸಂಗೀತ, ಯೋಗ, ಕಲೆ, ಸಂಸ್ಕೃತಿ ಶ್ರೇಷ್ಠತೆ ಪಡೆದಿದೆ. ಪಾಶ್ಚಿಮಾತ್ಯ ಸಂಗೀತದಿAದ ದೆವ್ವಗಳು ರಾರಾಜಿಸುತ್ತವೆ. ಭಾರತದ ಸಂಗೀತಕ್ಕೆ ದೇವರನ್ನು ಒಲೆಸುವ ಶಕ್ತಿ ಇದೆ. ಸಂಗೀತ ಎಲ್ಲರನ್ನು ಒಗ್ಗೂಡಿಸುತ್ತದೆ. ಹೂವಿನ ಮೊಗ್ಗು ಅರಳಿಸುವ, ರೋಗ ವಾಸಿ ಮಾಡುವ ಶಕ್ತಿ ಸಂಗೀತಕ್ಕಿದೆ. ಹೆಚ್ಚು ಜನ ಸೇರಬೇಕಿತ್ತು. ಸಂಗೀತ ಬೆಳೆದಷ್ಟು ಮಾನಸಿಕೆ ನೆಮ್ಮದಿ ಹೆಚ್ಚುತ್ತದೆ. | ಎಂ.ವೈ.ಪಾಟೀಲï, ಶಾಸಕ ಇಡೀ ವಿಶ್ವವನ್ನು ಸೆಳೆಯುವಂತೆ ಮಾಡುವ ಶ್ರೇಷ್ಠ ಶಕ್ತಿ ನಮ್ಮ ಕಲಾವಿದರಿಗಿದೆ. ಮಕ್ಕಳಿಗೆ ಬೆಳೆಯುವ ಹಂತದಲ್ಲಿಯೇ ಸಂಗೀತ, ನೃತ್ಯಕ್ಕೆ ಉತ್ತೇಜನ ನೀಡಬೇಕು. ಮೊಬೈಲ್ ಯುಗದಲ್ಲಿ ತಮ್ಮನ್ನೇ ತಾವು ಮರೆಯುತ್ತಿರುವ ಕಾಲಘಟ್ಟದಲ್ಲಿ ಕಲೆಯೂ ನಮ್ಮ ಜತೆ ಉಳಿಯುತ್ತದೆ. ಅಕಾಡೆಮಿಯಿಂದ ಶಿಷ್ಯ ವೇತನ, ಹಿರಿಯ ಕಲಾವಿದರಿಗೆ ಪಿಂಚಣಿ ನೀಡುತ್ತಿದ್ದು. ಕಲಾವಿದರಿಗೆ ಪ್ರೋತ್ಸಾಹಿಸಲು ರಾಷ್ಟç, ಜಿಲ್ಲಾ ಮಟ್ಟದ ಉತ್ಸವ, ತರಬೇತಿ, ಶಿಬಿರ, ಕಾರ್ಯಾಗಾರ ನಡೆಸಲಾಗುತ್ತಿದೆ. ಸದುಪಯೋಗ ಪಡೆಯಬೇಕು. | ಶುಭ ಧನಂಜಯ, ಅಧ್ಯಕ್ಷೆ ಕರ್ನಾಟಕ ನೃತ್ಯ, ಸಂಗೀತ ಅಕಾಡೆಮಿ
ಧರೆಗಿಳಿದ ದಕ್ಷ, ಶಿವಪಾರ್ವತಿ
ಪುಣೆಯ ಲಹೇಜ್ ನೃತ್ಯ ಅಕಾಡೆಮಿಯ ಅಭಾ ಅಟಿ ನೇತೃತ್ವದ ತಂಡದ ಕಥಕ್ ನೃತ್ಯದಲ್ಲಿ ಪ್ರೀತಿ, ಪ್ರಕೃತಿಯ ಸಂದೇಶವನ್ನು ಸಾರುವ ಜತೆಗೆ ದಕ್ಷಯಜ್ಞನ ಕಥಾನಕವನ್ನು ಕಣ್ಮುಂದೆ ಕಟ್ಟುವಂತೆ ಪ್ರಸ್ತುತ ಪಡಿಸಿತು. ಕಥಕ್‌ನಲ್ಲಿಯೇ ಶ್ರೀಕೃಷ್ಣನ ಕೀರ್ತನೆಯೂ ಎಲ್ಲರನ್ನು ಭಕ್ತಿಯಲ್ಲಿ ತೇಲಿಸಿತು. ಚೆನ್ನೆÊನ ಡಾ.ವೆಂಪಟಿ ಚಿನ್ನ ಸತ್ಯಂ ಆರ್ಟ್ ಅಕಾಡೆಮಿಯ ಕಲಾವಿದರ ಕುಚಿಪುಡಿಯ ಶಿವಾಕಾರಂ ನೃತ್ಯ ರೂಪಕವೂ ಸಾಕ್ಷಾತ ಶಿವಪಾರ್ವತಿಯನ್ನು ಧರೆಗಿಳಿಸಿ, ಶಿವರಾತ್ರಿಗೂ ಮುನ್ನ ಮಹಾದೇವನನ ದರ್ಶನ ಮಾಡಿಸಿತು.