ವ್ಯಕ್ತಿ, ಶಕ್ತಿಯ ಹಿಂದೆ ಹೋಗುವುದಿಲ್ಲ

28 mbl ph 4
????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಮುಳಬಾಗಿಲು: ಆಗ್ನೇಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಿಂದ ಕಳೆದ 48 ವರ್ಷಗಳಿಂದ ಬಿಜೆಪಿ ಅಭ್ಯರ್ಥಿಗಳೇ ವಿಧಾನ ಪರಿಷತ್‌ಗೆ ಆಯ್ಕೆ ಆಗುತ್ತಿದ್ದು, ಈ ಬಾರಿ ಬಿಜೆಪಿ ಅಭ್ಯರ್ಥಿ ಚಿದಾನಂದ.ಎಂ.ಗೌಡ ಅತ್ಯಧಿಕ ಮತಗಳಿಂದ ಆಯ್ಕೆಯಾಗಲಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ನಗರದ ಪಿಯು ಕಾಲೇಜು ಮತಗಟ್ಟೆಗೆ ಬುಧವಾರ ಭೇಟಿ ನೀಡಿ ಮಾತನಾಡಿ, ಪದವೀಧರ ಕ್ಷೇತ್ರದಿಂದ ಎರಡು ಬಾರಿ ಸೋತಿದ್ದ ಜೆಡಿಎಸ್‌ನ ತೂಪಲ್ಲಿ ಚೌಡರೆಡ್ಡಿ ಕಳೆದ ಬಾರಿ ಅನುಕಂಪದಿಂದ ಆಯ್ಕೆಯಾಗಲು ಸಾಧ್ಯವಾಯಿತು. ಆದರೆ, ಅವರು ಪದವೀಧರರ ಪರ ಕಾರ್ಯನಿರ್ವಹಿಸದೆ ನಿರ್ಲಕ್ಷ್ಯ ವಹಿಸಿದ್ದರು ಎಂದರು.

ಹತ್ತಿದ ಏಣಿ ಒದೆಯಲಾರೆ: ಕೆಲವರು ಅಧಿಕಾರ ಸಿಕ್ಕ ನಂತರ ಗೆಲ್ಲಿಸಿದವರನ್ನು ಗೇಲಿ ವಾಡುವುದನ್ನು ರೂಢಿಸಿಕೊಂಡಿದ್ದಾರೆ, ಆ ಜಾಯವಾನ ನನ್ನದಲ್ಲ. ಹತ್ತಿದ ಏಣಿ ಒದ್ದರೆ ಮತ್ತೆ ಇಳಿಯಲು ಕಷ್ಟವಾಗುತ್ತದೆ ಎಂಬುದರ ಅರಿವಿದೆ. ನಾನು ಬೇರೆ ಜಿಲ್ಲೆಯವನಲ್ಲ, ಕೋಲಾರ ಜಿಲ್ಲೆಯವನಾಗಿದ್ದು, ಇಲ್ಲಿನ ಜನರ ನಾಡಿ ಮಿಡಿತ ಅರಿತಿದ್ದೇನೆ. ಯಾವುದೇ ವ್ಯಕ್ತಿ, ಶಕ್ತಿ ಹಿಂದೆ ಹೋಗುವುದಿಲ್ಲ ಎಂದು ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಕಾಲೆಳೆದರು.

ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯನ್ನು ಕ್ಷೇತ್ರದ ಶಾಸಕ, ಸಚಿವ ಎಚ್.ನಾಗೇಶ್ ಅವರೇ ನೋಡಿಕೊಳ್ಳಲಿದ್ದಾರೆ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ. ಬಿಜೆಪಿ ಬಲಪಡಿಸುವುದೇ ನನ್ನ ಗುರಿ. ವಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಸೇರಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸಿದ ವಿವಿಧ ರಾಜಕೀಯ ಮುಖಂಡರನ್ನು ಶ್ರೀ ಬಿಜೆಪಿಗೆ ಸೇರ್ಪಡೆ ವಾಡಿಕೊಂಡು ಮುಳಬಾಗಿಲಿನಿಂದಲೇ ಬಿಜೆಪಿ ಪರ್ವ ಆರಂಭಿಸಲಾಗುವುದು ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಹೆಬ್ಬಣಿ ಅಶೋಕ್ ರೆಡ್ಡಿ, ನಗರ ಟಕ ಅಧ್ಯಕ್ಷ ಕಲ್ಲುಪಲ್ಲಿ ಕೆ.ಜೆ.ಮೋಹನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಎಂ.ಕೃಷ್ಣಮೂರ್ತಿ, ಬೆಳಗಾನಹಳ್ಳಿ ರಮೇಶ್, ವಿ.ಟಿ.ಶಂಕರ, ಜಿಲ್ಲಾ ಖಜಾಂಚಿ ಕೆ.ಜಿ.ವೆಂಕಟರವಣ, ಒಬಿಸಿ ಟಕ ಅಧ್ಯಕ್ಷ ಕೆ.ಎಚ್.ನಾಗರಾಜ್, ಎಂ.ಪ್ರಭಾಕರ್, ಮುರಳಿ ಕೃಷ್ಣ, ವಿಶ್ವಾನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net